Advertisement

ನಾಳೆಯಿಂದ ದಿನಪೂರ್ತಿ ನೆಫ್ಟ್ ವಹಿವಾಟು ಸಾಧ್ಯ

12:20 AM Dec 15, 2019 | mahesh |

ಮುಂಬಯಿ: ಸೋಮವಾರದಿಂದಲೇ ನೆಫ್ಟ್ (ನ್ಯಾಶನಲ್‌ ಎಲೆಕ್ಟ್ರಾನಿಕ್‌ ಫ‌ಂಡ್‌ ಟ್ರಾನ್ಸ್‌ ಫ‌ರ್‌) ವಹಿವಾಟು ದಿನದ 24 ಗಂಟೆಯೂ ಲಭ್ಯವಿರಲಿದೆ ಎಂಬ ಸಿಹಿಸುದ್ದಿಯನ್ನು ಆರ್‌ಬಿಐ ಗ್ರಾಹಕರಿಗೆ ನೀಡಿದೆ. ಇನ್ನು ಮುಂದೆ ಗ್ರಾಹಕರು ವಾರಾಂತ್ಯ ಮತ್ತು ರಜಾದಿನಗಳ ಸಹಿತ ಯಾವಾಗ ಬೇಕಿದ್ದರೂ ನೆಫ್ಟ್ ಮೂಲಕ ಹಣ ವರ್ಗಾಯಿಸಬಹುದು. ಬ್ಯಾಂಕ್‌ಗಳ ಸ್ಟ್ರೈಟ್‌ ಥ್ರೂ ಪ್ರೊಸೆಸಿಂಗ್‌ (ಎಸ್‌ಟಿಪಿ) ಮಾದರಿಯ ಮೂಲಕ ಬ್ಯಾಂಕಿಂಗ್‌ ಅವಧಿ ಮುಗಿದ ಅನಂತರವೂ ನೆಫ್ಟ್ ವಹಿವಾಟು ಸಾಧ್ಯವಾಗಲಿದೆ. ಈವರೆಗೆ ಕೆಲಸದ ದಿನಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 7ರ ವರೆಗೆ ಮಾತ್ರ ಅವಕಾಶವಿತ್ತು. ಎರಡನೇ ಮತ್ತು ನಾಲ್ಕನೇ ಶನಿವಾರ ಈ ಸೇವೆ ಲಭ್ಯವಿರಲಿಲ್ಲ.

Advertisement

ಹೊಸ ಪದ್ಧತಿಯ ಪಾಲಿಸಲು ಅಗತ್ಯ ವಿರುವ ಎಲ್ಲ ಮೂಲ ಸೌಕರ್ಯಗಳನ್ನು ಅಳವಡಿಸಿಕೊಳ್ಳುವಂತೆ ಸದಸ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ. ಜತೆಗೆ ಬದಲಾದ ಸಮಯದ ಕುರಿತು ಗ್ರಾಹಕರಿಗೂ ಮಾಹಿತಿ ಒದಗಿಸುವಂತೆ ನಿರ್ದೇಶಿಸಿದೆ. ಡಿಸೆಂಬರ್‌ ತಿಂಗಳಿಂದ ನೆಫ್ಟ್ ಸೇವೆ 24ಗಿ7 ಲಭ್ಯವಿರಲಿದೆ ಎಂದು ಆಗಸ್ಟ್‌ನಲ್ಲೇ ಆರ್‌ಬಿಐ ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next