Advertisement

ಮತ್ತೆ ಬಡ್ಡಿದರ ಹೆಚ್ಚಿಸಲಿರುವ ಆರ್‌ಬಿಐ?

09:00 PM Jul 31, 2022 | Team Udayavani |

ಮುಂಬೈ: ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಆರ್‌ಬಿಐ ಸತತ ಮೂರನೇ ಬಾರಿಗೆ ಮೂಲಾಂಶ ಬಡ್ಡಿದರಗಳನ್ನು ಏರಿಸುವ ಸಾಧ್ಯತೆ ಇದೆ ಎಂಬುದಾಗಿ ವಿತ್ತೀಯ ತಜ್ಞರು ಹೇಳಿದ್ದಾರೆ.

Advertisement

ಅಮೆರಿಕದ ಫೆಡರಲ್‌ ರಿಸರ್ವ್‌ ಕೂಡ ಇತ್ತೀಚೆಗೆ ಬಡ್ಡಿದರ ಏರಿಸಿರುವುದು ಇದಕ್ಕೆ ಪೂರಕವಾಗಿದೆ. ಆರ್‌ಬಿಐಯ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಆ. 3ರಿಂದ ಸಭೆ ನಡೆಸಲಿದ್ದು, ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಆ. 5ರಂದು ಸಭೆಯ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.

ಆರು ತಿಂಗಳುಗಳಿಂದ ಹಣದುಬ್ಬರ ಶೇ. 6ಕ್ಕಿಂತ ಹೆಚ್ಚೇ ಇದ್ದು, ಆರ್‌ಬಿಐಯು ಮೇನಲ್ಲಿ ರೆಪೊ ದರವನ್ನು 40 ಮೂಲಾಂಶಗಳಷ್ಟು ಮತ್ತು ಜೂನ್‌ನಲ್ಲಿ 50 ಮೂಲಾಂಶಗಳಷ್ಟು ಹೆಚ್ಚಿಸಿತ್ತು

Advertisement

Udayavani is now on Telegram. Click here to join our channel and stay updated with the latest news.

Next