Advertisement

5 ದೊಡ್ಡ ಸರಕಾರಿ ಬ್ಯಾಂಕುಗಳ ಸುಸ್ತಿಸಾಲ 47,000 ಕೋಟಿ: RBI

04:29 PM May 29, 2018 | |

ಹೊಸದಿಲ್ಲಿ : ಸರಕಾರಿ ಒಡೆತನದ ಐದು ಅತೀ ದೊಡ್ಡ ಬ್ಯಾಂಕುಗಳಲ್ಲಿನ ಸುಮಾರು 47,000 ಕೋಟಿ ಸುಸ್ತಿ ಸಾಲವನ್ನು (ಎನ್‌ಪಿಎ = ಅನುತ್ಪಾದಕ ಆಸ್ತಿ) ಆರ್‌ಬಿಐ ಪತ್ತೆ ಹಚ್ಚಿದೆ. 

Advertisement

2017ರ ಮಾರ್ಚ್‌ 31ಕ್ಕೆ ಕೊನೆಗೊಂಡ ಲೆಕ್ಕ ಪತ್ರ ಪರಿಶೀಲನೆಯಲ್ಲಿ ಆರ್‌ಬಿಐ ಇಷ್ಟೊಂದು ದೊಡ್ಡ ಪ್ರಮಾಣದ ಸುಸ್ತಿ ಸಾಲವನ್ನು ಪತ್ತೆ ಹಚ್ಚಿದೆ. ವಿಶೇಷವೆಂದರೆ ಸಾಲ ನೀಡಿದ್ದ ಬ್ಯಾಂಕುಗಳ ಅಂದಾಜು ಸುಸ್ತಿ ಸಾಲಕ್ಕಿಂತಲೂ ಈ ಮೊತ್ತ ದೊಡ್ಡದಿದೆ.  

ಸುಸ್ತಿ ಸಾಲದ ಹೊರೆಯನ್ನು ನಿಭಾಯಿಸುವ ಸಲುವಾಗಿ ಸರಕಾರಿಂದ ಅತೀ ದೊಡ್ಡ ಮೊತ್ತ (56,000 ಕೋಟಿ) ಪಡೆದಿರುವ, ಸಾರ್ವಜನಿಕರಂಗದ್ದಲ್ಲದ ಬ್ಯಾಂಕ್‌ ಎಂದರೆ ಐಡಿಬಿಐ ಎಂಬುದು ಗಮನಾರ್ಹವಾಗಿದೆ. 

ದೇಶದಲ್ಲಿನ 22 ಸರಕಾರಿ ಒಡೆತನದ ಬ್ಯಾಂಕುಗಳ ಪೈಕಿ ಅರ್ಧಾಂಶದಷ್ಟು ಬ್ಯಾಂಕುಗಳ ಮುಚ್ಚಿಟ್ಟ ಸುಸ್ತಿ ಸಾಲ ಅಗಾಧ ಪ್ರಮಾಣದ್ದಾಗಿದ್ದು ಆರ್‌ಬಿಐ ನ ಪಿಸಿಎ (ಪ್ರಾಂಪ್‌ಟ್‌ ಕರೆಕ್ಟೀವ್‌ ಆ್ಯಕ್ಷನ್‌) ಕ್ರಮಕ್ಕೆ ಇವು ಒಳಪಟ್ಟಿವೆ. ಇದರ ಪರಿಣಾಮವಾಗಿ ಅವುಗಳ ಸಾಲ ನೀಡಿಕೆ ಮತ್ತು ವಿಸ್ತರಣೆಯನ್ನು ನಿರ್ಬಂಧಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next