ನವದೆಹಲಿ: ಅದಾನಿ ಸಮೂಹ ಸಂಸ್ಥೆಯ ಎಫ್ಪಿಒ (ಫಾಲೋ ಆನ್ ಪಬ್ಲಿಕ್ ಆಫರ್)ರದ್ದು ನಿರ್ಣಯದ ಬೆನ್ನಲ್ಲೇ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ),ಅದಾನಿ ಗ್ರೂಪ್‌ನಲ್ಲಿ ಮಾಡಿರುವ ಹೂಡಿಕೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಬ್ಯಾಂಕುಗಳನ್ನು ಕೇಳಿದೆ.
ಷೇರು ಕುಸಿತದ ಕಾರಣದಿಂದ ಚಂದಾದಾರರ ಹಿತಾಸಕ್ತಿಯನ್ನು ಪರಿಗಣಿಸಿ,ಅದಾನಿ ಸಮೂಹವು ಬುಧವಾರ 20 ಸಾವಿರ ಕೋಟಿ ರೂ.ಗಳ ಮಾರಾಟ ತಡೆಹಿಡಿಯಲು ನಿರ್ಧರಿಸತ್ತಲ್ಲದೇ, ಹೂಡಿಕೆದಾರರಿಗೆ ಹಣ ವಾಪಸ್ ನೀಡುವುದಾಗಿ ಘೋಷಿಸಿದೆ.
ಈ ಬೆನ್ನಲ್ಲೇ, ಸಿಟಿ ಗ್ರೂಪ್ ಎನ್ನುವ ಅಮೆರಿಕ ಮೂಲದ ಬಹುರಾಷ್ಟ್ರೀಯ ಹೂಡಿಕೆ ಸಂಸ್ಥೆ ಕೂಡ ಅದಾನಿ ಗ್ರೂಪ್‌ನ ಸೆಕ್ಯೂರಿಟಿಗಳನ್ನು ಆಧಾರಿಸಿ ಗ್ರಾಹಕರಿಗೆ ಮಾರ್ಜಿನ್ ಲೋನ್ ನೀಡುವುದುನ್ನು ಸ್ಥಗಿತಗೊಳಿಸಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಆರ್‌ಬಿಐ ಬ್ಯಾಂಕುಗಳಿಂದ ಹೂಡಿಕೆ ವರದಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.