Advertisement

“ಅಮೇಜಾನ್‌ ಪೇ, ಗೂಗಲ್‌ ಪೇ ನಿಯಂತ್ರಿಸಲು ಕಾನೂನುಗಳಿವೆ’ : RBI

10:47 PM Jan 29, 2021 | Team Udayavani |

ನವದೆಹಲಿ: ತಂತ್ರಜ್ಞಾನಾಧಾರಿತ ಹಣಕಾಸು ಪೂರೈಕೆ ಸಂಸ್ಥೆಗಳಾದ ಅಮೇಜಾನ್‌, ಗೂಗಲ್‌, ಫೇಸ್‌ಬುಕ್‌ಗಳನ್ನು ಸೂಕ್ತ ಕಾನೂನುಗಳ ನಿಯಂತ್ರಣದಲ್ಲಿಡಲಾಗಿದೆ. ಹೀಗೆಂದು ಭಾರತದ ಪರಮೋಚ್ಚ ಬ್ಯಾಂಕ್‌- ಆರ್‌ಬಿಐ, ಮಾರುಕಟ್ಟೆ ನಿಯಂತ್ರಣ ಸಂಸ್ಥೆ-ಸೆಬಿ, ದೆಹಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿವೆ.

Advertisement

ಭಾಸ್ಕರನ್‌ ಎನ್ನುವ ವ್ಯಕ್ತಿ ಈ ರೀತಿಯ ಸಂಸ್ಥೆಗಳನ್ನು ಸಮಗ್ರ ಕಾನೂನುಗಳ ಮೂಲಕ ನಿಯಂತ್ರಣದಲ್ಲಿಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಕ್ಕೆ, ಮೇಲಿನಂತೆ ಪ್ರತಿಕ್ರಿಯೆ ನೀಡಲಾಗಿದೆ. ಅಮೇಜಾನ್‌, ಗೂಗಲ್‌, ಫೇಸ್‌ಬುಕ್‌ನಂತಹ ಸಂಸ್ಥೆಗಳಿಂದ ಖಾತೆಯಿಂದ ಖಾತೆಗೆ (ಅಮೇಜಾನ್‌ ಪೇ, ಗೂಗಲ್‌ ಪೇ, ವಾಟ್ಸ್‌ಆ್ಯಪ್‌ ಪೇ) ಹಣ ವರ್ಗಾವಣೆ ಮಾಡಲು ಎನ್‌ಪಿಸಿಐ ಅಧಿಕಾರ ನೀಡಿದೆ. ಅದಕ್ಕಾಗಿ ಎನ್‌ಪಿಸಿಐ ಸೂಕ್ತ ಕಾನೂನುಗಳನ್ನು ಹೊಂದಿದೆ ಎಂದು ಆರ್‌ಬಿಐ ತಿಳಿಸಿದೆ.

ಸೆಬಿ ನೀಡಿರುವ ಪ್ರತಿಕ್ರಿಯೆಯಲ್ಲಿ, ಭದ್ರತಾ ಮಾರುಕಟ್ಟೆ ಪ್ರವೇಶಿಸುವ ಸಂಸ್ಥೆಗಳನ್ನು ನಿಯಂತ್ರಿಸಲು ಈಗಾಗಲೇ ಕಾನೂನುಗಳು ಜಾರಿಯಲ್ಲಿವೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ:ಬಜೆಟ್‌ ದಿನದಂದು ಸಂಸತ್‌ ಸದಸ್ಯರಿಗೆ ಫೈವ್‌ಸ್ಟಾರ್‌ ಹೋಟೆಲ್‌ನಿಂದ ಭೋಜನ!

Advertisement

Udayavani is now on Telegram. Click here to join our channel and stay updated with the latest news.

Next