Advertisement

ಸಾಲಗಾರರ ನೆರವಿಗೆ ಧಾವಿಸಿದ ಆರ್‌ಬಿಐ

10:54 AM Aug 08, 2020 | mahesh |

ಹೊಸದಿಲ್ಲಿ: ದೇಶಕ್ಕೆ ದೇಶವೇ ಕೋವಿಡ್ ಬಾಧೆಗೊಳಗಾಗಿ ಪರದಾಡುತ್ತಿರುವ ಈ ಹೊತ್ತಿನಲ್ಲಿ, ಆರ್‌ಬಿಐ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ನಿರ್ಧಾರಗಳು ಜನಸಾಮಾನ್ಯರ ನೆರವಿಗೆ ಬರಲಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಮುಖ್ಯವಾಗಿ ಈಗಾಗಲೇ ಸಾಲ ಪಡೆದಿ ರುವವರು ಮತ್ತೆ ಸಾಲ ಪಡೆಯಲು ಅಥವಾ ಅದರ ಬಡ್ಡಿ, ಮಾಸಿಕ ಕಂತು, ಒಟ್ಟು ಅವಧಿ ಮೊದಲಾದವನ್ನು ನವೀಕರಣ ಮಾಡಲು ಅವಕಾಶ ನೀಡಲಾಗಿದೆ. ಒಟ್ಟಾರೆ ಉದ್ದೇಶ ಸಾಲಗಾರರಿಗೆ ಹೆಚ್ಚಿನ ಸಮಯಾವಕಾಶ ನೀಡಿ, ಅವರಿಗೆ ಕೊಂಚ ನೆಮ್ಮದಿ ನೀಡುವುದು ಈ ಕ್ರಮದ ಉದ್ದೇಶ.

Advertisement

ಗ್ರಾಹಕರಿಗೆ ಅಲ್ಪಕಾಲದ ನಿರಾಳತೆ
ಆರ್‌ಬಿಐನ ಹೊಸ ಯೋಜನೆಯಿಂದ ಸಾಲಗಾರರು ಅಲ್ಪಕಾಲದ ಮಟ್ಟಿಗೆ ನಿರಾಳತೆ ಅನುಭವಿಸಲು ಸಾಧ್ಯವಾಗಲಿದೆ. ಹೊಸ ಯೋಜನೆ ಪ್ರಕಾರ, ಗ್ರಾಹಕ ಸಾಲ, ಮನೆಯೂ ಸೇರಿ ದಂತೆ ಇತರೆ ಸ್ಥಿರಾಸ್ತಿಗಳ ನಿರ್ಮಾಣ ಅಥವಾ ಸುಧಾರಣೆ, ಹಣಕಾಸು ಆಸ್ತಿಗಳ ಮೇಲೆ ಹೂಡಿಕೆ, ಶೈಕ್ಷಣಿಕ ಸಾಲಗಳ ಮರು ಪಾವತಿಗೆ ಹೆಚ್ಚಿನ ಸಮಯದ ಅವಕಾಶ ಸಿಗಲಿದೆ.

ಡಿ.31ರ ಒಳಗೆ ಜಾರಿ
ಸಾಲ ಪಡೆದುಕೊಂಡಿರುವವರು ತಮ್ಮ ತಮ್ಮ ಬ್ಯಾಂಕ್‌ ಶಾಖೆಗಳಿಗೆ ಹೋಗಿ ಸಾಲ ಮರು ಪಾವತಿಗೆ ಹೆಚ್ಚಿನ ಸಮಯದ ಅವಕಾಶ ನೀಡುವಂತೆ ಮನವಿ ಮಾಡಬೇಕು. ಅದನ್ನು ಡಿ.31ರ ಒಳಗಾಗಿ ಬ್ಯಾಂಕ್‌ಗಳು ಮತ್ತು ಸಾಲಗಾರರು ಪೂರ್ತಿಗೊಳಿಸಬೇಕು.

ಚಾಲ್ತಿ ಖಾತೆಗೆ ನಿರ್ಬಂಧ
ಈಗಾಗಲೇ ಬ್ಯಾಂಕ್‌ಗಳಲ್ಲಿ ಕ್ಯಾಶ್‌ ಕ್ರೆಡಿಟ್‌ ಅಥವಾ ಓವರ್‌ಡ್ರಾಫ್ಟ್ ಖಾತೆ ಹೊಂದಿರುವವರಿಗೆ ಚಾಲ್ತಿ ಖಾತೆ ತೆರೆಯಲು ಅವಕಾಶ ನೀಡಬಾರದು. ಅಂತಹ ಗ್ರಾಹಕರ ಎಲ್ಲ ವ್ಯವಹಾರಗಳು ಸಿಸಿ ಮತ್ತು ಓಡಿ ಖಾತೆಗಳ ಮೂಲಕವೇ ನಡೆಯಬೇಕು. ಈ ವಿಚಾರದಲ್ಲಿ ಶಿಸ್ತು ಅಗತ್ಯ ಎಂದು ಆರ್‌ಬಿಐ ಹೇಳಿದೆ. ಗ್ರಾಹಕರು ಹಲವು ಖಾತೆಗಳ ಮೂಲಕ ವಂಚಿಸುವುದನ್ನು ತಡೆಯಲು ಈ ನಿರ್ದೇಶನ ನೀಡಿದೆ ಎನ್ನಲಾಗಿದೆ.

ಇತರ ಹಣಕಾಸು ಸಂಸ್ಥೆಗಳಿಗೂ ವಿಸ್ತರಣೆ
ಆರ್‌ಬಿಐ ಈ ಯೋಜನೆಯನ್ನು ಕೇವಲ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಮಾತ್ರವಲ್ಲದೇ ಇನ್ನಿತರೆ ಹಣಕಾಸು ಸಂಸ್ಥೆಗಳಿಗೂ ಸೇರಿ ಜಾರಿ ಮಾಡಲಾಗಿದೆ. ಸಣ್ಣ ಹಣಕಾಸು ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್ಸಿ), ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು, ಗೃಹಸಾಲ ಸಂಸ್ಥೆಗಳು, ವಿದೇಶಿ ಬ್ಯಾಂಕ್‌ಗಳೂ ಈ ಯೋಜನೆ ವ್ಯಾಪ್ತಿಯಲ್ಲಿ ಬರುತ್ತವೆ.

Advertisement

ಭವಿಷ್ಯದಲ್ಲಿ ಒಂದೇ ಗ್ರಾಹಕ ಗುರುತು ಸಂಖ್ಯೆ?
ಮುಂದಿನ ದಿನಗಳಲ್ಲಿ ಸಂಸ್ಥೆಗಳ ಬ್ಯಾಂಕ್‌ ವ್ಯವಹಾರಕ್ಕೆ ಒಂದೇ ಗುರುತು ಸಂಖ್ಯೆ ಬಳಸುವ ಬಗ್ಗೆ ಆರ್‌ಬಿಐ ಷರತ್ತು ಅನ್ವಯಿಸುತ್ತದೆ ಇಲ್ಲೊಂದು ಷರತ್ತಿದೆ. ಯಾವ ಗ್ರಾಹಕರು ಸಮಯಕ್ಕೆ ಸರಿಯಾಗಿ ಕಂತುಗಳನ್ನು ಮರುಪಾವತಿ ಮಾಡುತ್ತಿದ್ದಾರೋ ಮತ್ತು 2020 ಮಾ.1ರೊಳಗೆ ಯಾರು 30 ದಿನಗಳಿಗಿಂತ ಹೆಚ್ಚು ಕಾಲ ಸುಸ್ತಿದಾರರಾಗಿಲ್ಲವೋ ಅವರಿಗೆ ಮಾತ್ರ ಇಂತಹ ಅವಕಾಶ ಸಿಗಲಿದೆ. ಈ ಪ್ರಕಾರ ಸಾಲಗಾರರು ಸಂಬಂಧಪಟ್ಟ ಬ್ಯಾಂಕ್‌ಗಳೊಂದಿಗೆ ಮಾತಾಡಿ ತಮ್ಮ ಸಾಲವನ್ನು ನವೀಕರಿಸಿಕೊಳ್ಳಬ ಹುದು. ಬಡ್ಡಿ ಪ್ರಮಾಣ, ಒಟ್ಟು ಇತರೆ ಸಂಗತಿಗಳನ್ನು ತೀರ್ಮಾ ನಿ ಸಿಕೊಳ್ಳಬ ಹುದು. ಹಾಗೆಯೇ 2 ವರ್ಷಗಳ ವರೆಗೆ ಕಂತು ಪಾವತಿ ಮಾಡದಿರಲೂ ಅವಕಾಶ ವಿದೆ. ಆದರೆ ಆ ಅವಧಿಯ ಬಡ್ಡಿ ಕಟ್ಟಬೇಕು!ಸುಳಿವು ನೀಡಿದೆ. ಈ ಬಗ್ಗೆ ಯೋಜನೆಯೊಂದು ಚಾಲ್ತಿಯಲ್ಲಿದೆ, ಆದರೆ ಇದಿನ್ನೂ ಪೂರ್ಣಪ್ರಮಾಣದಲ್ಲಿ ಶುರುವಾಗಿಲ್ಲ. ಒಬ್ಬ ಗ್ರಾಹಕ ಒಂದೇ ಬ್ಯಾಂಕ್‌ನಲ್ಲಿ ಹಲವು ಖಾತೆ ತೆರೆದು, ಕೆಲವೊಮ್ಮೆ ಮೋಸ ಮಾಡುವ ಸಾಧ್ಯತೆಯೂ ಇರುತ್ತದೆ ಎನ್ನುವುದು ಆರ್‌ಬಿಐ ಕಾಳಜಿ.

Advertisement

Udayavani is now on Telegram. Click here to join our channel and stay updated with the latest news.

Next