Advertisement

ದೇಶದ 5 ಸಹಕಾರಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧ

04:13 PM Feb 25, 2023 | Team Udayavani |

ನವದೆಹಲಿ: ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್‌ ಬ್ಯಾಂಕ್‌ ದೇಶದ 5 ಸಹಕಾರಿ ಬ್ಯಾಂಕ್‌ಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದೆ.

Advertisement

ರಾಜ್ಯದ ಮಂಡ್ಯ ಜಿಲ್ಲೆಯ ಸಹಕಾರ ಬ್ಯಾಂಕ್‌ ಸೇರಿದಂತೆ ದೇಶದ 5 ಸಹಕಾರ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ಕ್ರಮ ಕೈಗೊಂಡಿದ್ದು, ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿರುವ ಕಾರಣ ಇವುಗಳ ಮೇಲೆ ನಿರ್ಭಂಧ ವಿಧಿಸಲಾಗಿದೆ ಎಂದು ಹೇಳಿದೆ.

ಶುಕ್ರವಾರ ನೀಡಿದ ಪ್ರಕಟಣೆಯಲ್ಲಿ ಕೇಂದ್ರೀಯ ಬ್ಯಾಂಕ್‌ನ ಪೂರ್ವಾನುಮತಿ ಇಲ್ಲದೇ , ಹೊಸ ಠೇವಣಿಗಳನ್ನು ಸ್ವೀಕರಿಸಲು ಅಥವಾ ಯಾವುದೇ ರೀತಿಯ ಸಾಲಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. 5 ಬ್ಯಾಂಕ್‌ಗಳ ಪೈಕಿ ಆರ್‌ಬಿಐ 3 ಬ್ಯಾಂಕ್‌ಗಳ ಮೇಲೆ ಭಾಗಶಃ ಠೇವಣಿ ಹಿಂಪಡೆಯುವ ನಿರ್ಬಂಧವನ್ನು ವಿಧಿಸಿದ್ದು 2 ರ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಿದೆ.

ಬ್ಯಾಂಕ್‌ ವ್ಯವಹಾರ ಸ್ಥಿರ

ಈ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗುವವರೆಗೆ ನಿರ್ಭಂಧಗಳೊಂದಿಗೆ ಬ್ಯಾಂಕಿಂಗ್‌ ಕಾರ್ಯ ಮುಂದುವರೆಸಬಹುದು ಎಂದು ಆರ್‌ಬಿಐ ಹೇಳಿದೆ. ಅಲ್ಲದೇ ಸಾಲ ಸೌಲಭ್ಯಗಳು, ಬಂಡವಾಳಗಳ ಮೇಲಿನ ತೀರ್ಮಾನ ತೆಗೆದುಕೊಳ್ಳುವಾಗ ಆರ್‌ಬಿಐ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದಿದೆ. ಈ ಹಿಂದೆ ಆರ್ಥಿಕವಾಗಿ ಕಳಪೆಯಾಗಿದ್ದ ಸಹಕಾರಿ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದ ಆರ್‌ಬಿಐ ಅವುಗಳ ಪರವಾನಿಗೆಯನ್ನೂ ರದ್ದುಗೊಳಿಸಿತ್ತು.

Advertisement

ಆರ್‌ಬಿಐನಿಂದ ನಿರ್ಬಂಧಕ್ಕೊಳಗಾದ ಬ್ಯಾಂಕ್‌ಗಳ ಪಟ್ಟಿಯಲ್ಲಿ,  ಏಚ್‌ಸಿಬಿಎಲ್‌ ಸಹಕಾರಿ ಬ್ಯಾಂಕ್‌, ಉರವಕೊಂಡ ಕೋ-ಆಪರೇಟಿವ್‌ ಟೌನ್‌ ಬ್ಯಾಂಕ್‌ ಲಿಮಿಟೆಡ್‌, ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್‌ ಮರ್ಯಾದಿತ್‌, ಮಂಡ್ಯದ ಶಿಂಶಾ ಸಹಕಾರ ಬ್ಯಾಂಕ್‌ ನಿಯಮಿತ ಮತ್ತು ಶಂಕರ್‌ರಾವ್‌ ಮೋಹಿತೆ ಪಾಟಿಲ್‌ ಸಹಕಾರಿ ಬ್ಯಾಂಕ್‌ ಲಿಮಿಟೆಡ್‌ ಸೇರಿದೆ.

ಈ ನಿರ್ಬಂಧ 6 ತಿಂಗಳ ಕಾಲ ವಿಧಿಸಲಾಗಿದೆ ಎಂದು ಆರ್‌ಬಿಐ ಹೇಳಿಕೊಂಡಿದೆ. ಇದೇ ರೀತಿ ಆರ್‌ಬಿಐನಿಂದ ಆಗಾಗ ಬ್ಯಾಂಕ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಬ್ಯಾಂಕ್‌ಗಳಲ್ಲಿ ತೀವ್ರ ನ್ಯೂನತೆ ಕಂಡುಬಂದರೆ ಅವುಗಳ ಮೇಲೆ ಆರ್‌ಬಿಐ ಭಾರೀ ದಂಡವನ್ನೂ ವಿಧಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next