Advertisement

ರೆಪೋ ರೇಟ್‌ ಹೆಚ್ಚಳ ಗೃಹ ಸಾಲಗಾರರಿಗೆ ಸಂಕಷ್ಟ

11:38 PM Dec 07, 2022 | Team Udayavani |

ಭಾರತೀಯ ರಿಸರ್ವ್‌ ಬ್ಯಾಂಕ್‌ ಸತತ 5ನೇ ಬಾರಿಗೆ ರೆಪೋ ದರವನ್ನು ಹೆಚ್ಚಳ ಮಾಡಿದ್ದು, ಇದರಿಂದಾಗಿ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಾರರಿಗೆ ಇಎಂಐ ಹೆಚ್ಚಳವಾಗುವ ಆತಂಕ ಎದುರಾಗಿದೆ. ಅದರಲ್ಲೂ ಹೆಚ್ಚಾಗಿ ಗೃಹ ಸಾಲ ಬಳಕೆದಾರರಿಗೆ ಇದರಿಂದ ಹೆಚ್ಚು ನಷ್ಟ ಅಂತಿದ್ದಾರೆ ಮಾರುಕಟ್ಟೆ ವಿಶ್ಲೇಷಕರು. ಎಷ್ಟು ಬಡ್ಡಿ ದರ ಏರಿಕೆಯಾಗಲಿದೆ? ಹೆಚ್ಚುವರಿ ಇಎಂಐನಿಂದ ಬಚಾವ್‌ ಆಗುವುದು ಹೇಗೆ? ಇಲ್ಲಿದೆ ಮಾಹಿತಿ…

Advertisement

ಗೃಹ ಸಾಲದ ಮೇಲೆ ಅಡ್ಡಪರಿಣಾಮ ಹೇಗೆ?
ಆರ್‌ಬಿಐ ರೆಪೋ ದರ ಹೆಚ್ಚಿಸಿದ ಕೂಡಲೇ, ಬ್ಯಾಂಕುಗಳು ಈ ದರವನ್ನು ನೇರವಾಗಿ ತನ್ನ ಗ್ರಾಹಕರಿಗೆ ವರ್ಗಾವಣೆ ಮಾಡುತ್ತವೆ. ಹೀಗಾಗಿ, ಅವರು ಪಡೆದಿರುವ ಗೃಹ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳವಾಗಿ ಇಎಂಐ ಹೆಚ್ಚಾಗುತ್ತದೆ. ಬುಧವಾರದ ಹೆಚ್ಚಳವೂ ಸೇರಿದರೆ ಈ ವರ್ಷದಲ್ಲೇ 225 ಬೇಸಿಸ್‌ ಪಾಯಿಂಟ್‌ನಷ್ಟು ಬಡ್ಡಿದರ ಹೆಚ್ಚಿಸಲಾಗಿದೆ.

2.ಇಎಂಐ ಎಷ್ಟು ಹೆಚ್ಚಾಗುತ್ತದೆ?
ಮಾರುಕಟ್ಟೆ ತಜ್ಞರ ಪ್ರಕಾರ, ಶೇ.3-5ರಷ್ಟು ಇಎಂಐ ಹೆಚ್ಚಾಗಬಹುದು. ಶೇ 8.5ರಷ್ಟು ಬಡ್ಡಿ ದರದಲ್ಲಿ  ಹತ್ತು ಲಕ್ಷ ರೂಪಾಯಿ ಸಾಲ ಪಡೆದ ಗ್ರಾಹಕ ಪ್ರತಿ ತಿಂಗಳು ಅಂದಾಜು 300 ರೂ ಹೆಚ್ಚು ಕಂತುಕಟ್ಟಬೇಕಾಗುತ್ತದೆ.

3.ಅವಧಿ ಹೆಚ್ಚಳವಾಗಲಿದೆಯೇ?
ಈಗಿನ ಲೆಕ್ಕಾಚಾರದ ಪ್ರಕಾರ, ಬ್ಯಾಂಕುಗಳು ಸಾಲದ ಅವಧಿಯನ್ನು ಹೆಚ್ಚಳ ಮಾಡಲು ಸಾಧ್ಯವಾಗುವುದಿಲ್ಲ. ಕಳೆದ ನಾಲ್ಕು ಬಾರಿ ಅವಧಿಯನ್ನು ಹೆಚ್ಚು ಮಾಡಿಸಿಕೊಂಡ ಗ್ರಾಹಕ ಈ ಸಲ ಅನಿವಾರ್ಯವಾಗಿ ಅವಧಿ ಹೆಚ್ಚು ಮಾಡಲು ಸಾಧ್ಯವಿಲ್ಲದ ಕಾರಣ ಇಎಂಐಯನ್ನು ಹೆಚ್ಚು ಕಟ್ಟಬೇಕಾಗುತ್ತದೆ. ಉದಾ: ಶೇ.6ರ ಬಡ್ಡಿದರದಲ್ಲಿ 20 ವರ್ಷಗಳ ಅವಧಿಗೆ ಸಾಲ ಪಡೆದಿರುವಾತ, ಈಗಿನ ಬಡ್ಡಿದರದ ಲೆಕ್ಕದಲ್ಲಿ 13 ವರ್ಷ ಹೆಚ್ಚುವರಿಯಾಗಿ ಇಎಂಐ ಕಟ್ಟಬೇಕು. ಬ್ಯಾಂಕುಗಳು ಗರಿಷ್ಠ ಇಷ್ಟು ಅವಧಿ ಮಾತ್ರ ವಿಸ್ತರಣೆ ಮಾಡಲು ಸಾಧ್ಯ. ಇದಕ್ಕಿಂತ ಹೆಚ್ಚು ವಿಸ್ತರಣೆ ಮಾಡುವುದಿಲ್ಲ.

4.ಹೊರೆ ಕಡಿಮೆಯಾಗಲು ಏನು ಮಾಡಬೇಕು?
ಗೃಹ ಸಾಲ ಬಳಕೆದಾರರು, ಸಾಲದ ಅವಧಿ ಹೆಚ್ಚಳ ಮತ್ತು ಇಎಂಐ ಹೆಚ್ಚಳದಿಂದ ಪಾರಾಗಬೇಕು ಎಂದಾದರೆ, ಅವಧಿಗೆ ಮುನ್ನ ಪಾವತಿಗೆ ಮುಂದಾಗಬೇಕು. ಉತ್ತಮ ಬಡ್ಡಿದರ ಇರುವ ಕಡೆ ಗಮನ ಕೊಡಬಹುದು; ದೀರ್ಘ‌ಕಾಲೀನ ಅವಧಿ ಪಡೆಯುವತ್ತ ಗಮನ ನೀಡಬಹುದು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next