Advertisement

ಮತ್ತೆ ಬಡ್ಡಿದರ ಹೆಚ್ಚಳ ಸಾಧ್ಯತೆ

10:38 PM Dec 04, 2022 | Team Udayavani |

ಹೊಸದಿಲ್ಲಿ: ಸತತ 3 ಬಾರಿ ಸಾಲದ ಮೇಲಿನ ಬಡ್ಡಿ ದರವನ್ನು ತಲಾ ಶೇ.0.50ರಷ್ಟು ಹೆಚ್ಚಳ ಮಾಡಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ), ಬುಧವಾರ ನಡೆಯಲಿರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಮತ್ತೆ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆಯಿದೆ.

Advertisement

ಚಿಲ್ಲರೆ ಹಣದುಬ್ಬರವು ಸ್ವಲ್ಪಮಟ್ಟಿಗೆ ಇಳಿಕೆ ಕಂಡಿರುವ ಹಿನ್ನೆಲೆಯಲ್ಲಿ ಹಾಗೂ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಬೇಕಾದ ಕಾರಣ ಈ ಬಾರಿ ಬಡ್ಡಿ ದರವನ್ನು ಶೇ.0.25ರಿಂದ 0.35ರಷ್ಟು ಮಾತ್ರ ಹೆಚ್ಚಳ ಮಾಡಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಸೋಮವಾರದಿಂದಲೇ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆ ಆರಂಭವಾಗಲಿದ್ದು, ಬುಧವಾರ ರೆಪೋ, ರಿವರ್ಸ್‌ ರೆಪೋ ದರದ ಕುರಿತ ಪ್ರಕಟಣೆ ಹೊರಬೀಳಲಿದೆ. ದೇಶೀಯ ಬೆಳವಣಿಗೆಗಳು ಮಾತ್ರವಲ್ಲದೇ, ಅಮೆರಿಕದ ಫೆಡರಲ್‌ ರಿಸರ್ವ್‌ ಕೈಗೊಳ್ಳುವ ನಿರ್ಧಾರವನ್ನೂ ಆರ್‌ಬಿಐ ಗಣನೆಗೆ ತೆಗೆದುಕೊಳ್ಳಲಿದೆ.

ಕಳೆದ ಮೇ ತಿಂಗಳಿಂದ ಈವರೆಗೆ ಆರ್‌ಬಿಐ ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.190ರಷ್ಟು ಹೆಚ್ಚಳ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next