ನವದೆಹಲಿ:ಕೋವಿಡ್ ನಿಂದಾದ ಆರ್ಥಿಕ ಹೊಡೆತದ ಹಿನ್ನೆಲೆಯಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಮುಂದುವರಿಸಲು ಆರ್ ಬಿಐ ನಿರ್ಧರಿಸಿರುವುದಾಗಿ ಗವರ್ನರ್ (ಆರ್ ಬಿಐ) ಶಕ್ತಿಕಾಂತ್ ದಾಸ್ ಶುಕ್ರವಾರ (ಅಕ್ಟೋಬರ್ 09, 2020) ಘೋಷಿಸಿದ್ದಾರೆ.
ಶೇ.4ಷ್ಟಿರುವ ರೆಪೋ ದರವನ್ನು ಇಳಿಕೆ ಮಾಡದಿರಲು ಆರ್ ಬಿಐನ ಹಣಕಾಸು ನೀತಿ ಸಮಿತಿ ಅವಿರೋಧವಾಗಿ ಒಪ್ಪಿಗೆ ಸೂಚಿಸಿದೆ. ಪ್ರಸಕ್ತ ಆರ್ಥಿಕ ವರ್ಷ ಮತ್ತು ಮುಂದಿನ ವರ್ಷವೂ ಕೂಡಾ ಅಗತ್ಯವಿರುವ ಹಣಕಾಸು ನೆರವನ್ನು ಮುಂದುವರಿಸಲು ಎಂಪಿಸಿ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಪ್ರಸ್ತುತ ಶೇ.4ರಷ್ಟು ರೆಪೋ ದರ ಇದ್ದು, ರಿವರ್ಸ್ ರೆಪೋ ದರದಲ್ಲಿಯೂ ಯಾವುದೇ ಬದಲಾವಣೆ(ಶೇ.3.35) ಆಗಿಲ್ಲ. ಒಂದು ವೇಳೆ ಆರ್ ಬಿಐ ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಪಾಡಿಕೊಂಡಲ್ಲಿ ಚಿಲ್ಲರೆ ಹಣದುಬ್ಬರ ಮತ್ತೆ ಶೇ.4ರಿಂದ 6ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಹಲವು ತಜ್ಞರು ಈಗಾಗಲೇ ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ:ಜೈಲಿಂದಲೇ ಆರ್‌ಜೆಡಿ ಅಭ್ಯರ್ಥಿಗಳ ಸಂದರ್ಶನ ನಡೆಸಿದ ಲಾಲು ಪ್ರಸಾದ್ ಯಾದವ್!
ಕೋವಿಡ್ 19 ಸೋಂಕಿನ ಸಂಕಷ್ಟದ ನಡುವೆಯೂ ದೇಶದ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಅಲ್ಲದೇ 2020-21 ಸಾಲಿನ ಜಿಡಿಪಿ ಶೇ.9.5ರಷ್ಟಿರಲಿದೆ ಎಂದು ಆರ್ ಬಿಐ ಭವಿಷ್ಯ ನುಡಿದಿದೆ.