ಹೊಸದಿಲ್ಲಿ: ಸೇಫ್ ಡೆಪಾಸಿಟ್ ಲಾಕರ್ ಹೊಂದಿರುವವರ ಜತೆಗೆ ಒಪ್ಪಂದ ಪರಿಷ್ಕರಿಸಿಕೊಳ್ಳಲು ಬ್ಯಾಂಕ್‌ಗಳಿಗೆ ನೀಡ ಲಾಗಿದ್ದ ಅಂತಿಮ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಡಿ. 31ರ ತನಕ ವಿಸ್ತರಿಸಿದೆ.
Advertisement
ಬಹುಸಂಖ್ಯೆಯ ಗ್ರಾಹಕರು ಇನ್ನೂ ಒಪ್ಪಂದ ಪರಿಷ್ಕರಿಸಿಕೊಳ್ಳದೆ ಇರುವುದರಿಂದ ಆರ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ.
ಈ ಹಿಂದೆ 2021ರ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿದ್ದ ಆರ್‌ಬಿಐ, ಲಾಕರ್ ಒಪ್ಪಂದ ಪರಿಷ್ಕರಣೆಗೆ ಈ ವರ್ಷದ ಜ. 1 ಅಂತಿಮ ದಿನಾಂಕ ಎಂದು ಹೇಳಿತ್ತು. ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ, ಗ್ರಾಹಕರ ದೂರುಗಳ ಜಾಯಮಾನದಲ್ಲಿ ಆಗಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಒಪ್ಪಂದ ಪರಿಷ್ಕರಣೆಗೆ ಆದೇಶಿಸಲಾಗಿತ್ತು.