Advertisement

2000 ರೂ. ಮುದ್ರಣವೇ ಆಗ್ತಿಲ್ಲ!

11:18 PM Aug 25, 2020 | mahesh |

ಹೊಸದಿಲ್ಲಿ: 2019-20ರಲ್ಲಿ 2000 ರೂ. ಮೌಲ್ಯದ ನೋಟುಗಳನ್ನು ಮುದ್ರಿಸಿಲ್ಲ. ಹಾಗೆಯೇ ಕಳೆದ ಮೂರು ವರ್ಷದಿಂದ ಈ ನೋಟುಗಳ ಪ್ರಸರಣವೂ ತಗ್ಗುತ್ತಿದೆ ಎಂಬ ಮಹತ್ವದ ಮಾಹಿತಿಯನ್ನು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ನೀಡಿದೆ. ತನ್ನ ವಾರ್ಷಿಕ ವರದಿಯಲ್ಲಿ ಹಲವು ಮಹತ್ವದ ಸಂಗತಿ­ಗಳನ್ನು ಪ್ರಸ್ತಾಪಿಸಿರುವ ಆರ್‌ಬಿಐ, 500 ರೂ. ನೋಟಿಗಾಗಿ ಬೇಡಿಕೆ ಹೆಚ್ಚಿರು­ವುದು, ನಕಲಿ ನೋಟುಗಳ ಪತ್ತೆಕಾರ್ಯ ತೀವ್ರವಾಗಿರುವ ಕುರಿತೂ ಮಾಹಿತಿ ನೀಡಿದೆ.

Advertisement

ನೋಟುಗಳ ಪ್ರಮಾಣ ಇಳಿಕೆ: 2000 ರೂ. ಮೌಲ್ಯದ ನೋಟುಗಳ ಸಂಖ್ಯೆ ಇಳಿಕೆಯಾಗಿರುವ ಬಗ್ಗೆ ಆರ್‌ಬಿಐ ವಿಸ್ತೃತ ಮಾಹಿತಿ ನೀಡಿದೆ. 2018ರ ಮಾರ್ಚ್‌ ಅಂತ್ಯದ ಹೊತ್ತಿಗೆ 33,632 ಲಕ್ಷ ನೋಟು ಗಳು, 2019ರ ಮಾರ್ಚ್‌ ಅಂತ್ಯದ ಹೊತ್ತಿಗೆ 32,910 ಲಕ್ಷ ನೋಟುಗಳು, 2020ರ ಮಾರ್ಚ್‌ ಅಂತ್ಯದ ಹೊತ್ತಿಗೆ 27,398 ಲಕ್ಷ 2000 ನೋಟು ಗಳು ಕಂಡುಬಂದಿವೆ. ಎಲ್ಲ ನೋಟುಗಳ ಸಂಖ್ಯೆಗೆ ಹೋಲಿಸಿದರೆ 2000 ನೋಟುಗಳ ಪ್ರಮಾಣ 2020, ಮಾರ್ಚ್‌ ಅಂತ್ಯದ ಹೊತ್ತಿಗೆ ಶೇ.2.4ಕ್ಕೆ ಇಳಿದಿದೆ. 2018 ಮಾರ್ಚ್‌ನಲ್ಲಿ ಇದು ಶೇ.3.3 ರಷ್ಟಿತ್ತು. ಇನ್ನು ಮೌಲ್ಯವನ್ನು ಪರಿಗಣಿಸಿದರೆ 2020 ಮಾರ್ಚ್‌ನಲ್ಲಿ ಈ ಪ್ರಮಾಣ ಶೇ.22.6ರಷ್ಟಿದೆ. 2018 ಮಾರ್ಚ್‌ನಲ್ಲಿ ಇದು ಶೇ.37.3ರಷ್ಟಿತ್ತು.

500, 200 ರೂ. ನೋಟುಗಳು ಹೆಚ್ಚಳ
ಮತ್ತೂಂದು ದಿಕ್ಕಿನಲ್ಲಿ ನೋಡುವುದಾದರೆ 500, 200 ರೂ. ನೋಟುಗಳ ಪ್ರಸರಣ ಹೆಚ್ಚಾಗಿದೆ. ಮೌಲ್ಯ ಮತ್ತು ಪ್ರಮಾಣ ಎರಡನ್ನು ಗಣಿಸಿದರೂ ಬೇಡಿಕೆ, ಪೂರೈಕೆ ಹೆಚ್ಚಿದೆ. 2019-20ರಲ್ಲಿ 1463 ಕೋಟಿ 500 ರೂ. ನೋಟುಗಳಿಗಾಗಿ ಬೇಡಿಕೆಯಿ ಡಲಾಗಿತ್ತು. 1200 ಕೋಟಿ ನೋಟುಗಳನ್ನು ಪೂರೈಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next