Advertisement

ಕೋವಿಡ್ 19 ಎಫೆಕ್ಟ್: ಬ್ಯಾಂಕ್ ಸಾಲದ ಬಡ್ಡಿ ದರ ಕಡಿತಗೊಳಿಸಿದ ಆರ್ ಬಿಐ-ರೆಪೋ ದರ ಇಳಿಕೆ

09:44 AM Mar 28, 2020 | Nagendra Trasi |

ನವದೆಹಲಿ:ಕೋವಿಡ್ 19 ಮಾರಣಾಂತಿಕ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 21 ದಿನಗಳ ದೇಶಾದ್ಯಂತ ಲಾಕ್ ಡೌನ್ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಏತನ್ಮಧ್ಯೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬ್ಯಾಂಕ್ ಗಳ ಸಾಲದ ಮೇಲಿನ ಬಡ್ಡಿದರದ ಕಡಿತ ಘೋಷಿಸಿದ್ದಾರೆ.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಪೋ ದರವನ್ನು 75 ಬೇಸಿಸ್ ಅಂಕಗಳಷ್ಟು ಕಡಿತಗೊಳಿಸಿದ್ದು, ರೆಪೋ ದರ 5.15ರಿಂದ 4.4ಕ್ಕೆ ಇಳಿಸಿರುವುದಾಗಿ ತಿಳಿಸಿದರು.

ರೆಪೋ ದರ ವಾಣಿಜ್ಯ ಬ್ಯಾಂಕ್ ಗಳ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಲು ಸಹಕಾರಿಯಾಗಲಿದೆ. ಗವರ್ನರ್ ಶಕ್ತಿಕಾಂತ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ(ಎಂಪಿಸಿ)ಯು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿಸಿದೆ.

ಕೋವಿಡ್ 19 ತಡೆಗಟ್ಟಲು ದೇಶಾದ್ಯಂತ ಘೋಷಿಸಿರುವ 21 ದಿನಗಳ ಲಾಕ್ ಡೌನ್ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿರುವ ನಡುವೆ ಆರ್ ಬಿಐ ಈ ಘೋಷಣೆ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next