ಬೆಂಗಳೂರು: ಸಚಿವರಾದ ಪುಟ್ಟರಂಗ ಶೆಟ್ಟಿ, ಎಂ.ಟಿ.ಬಿ. ನಾಗರಾಜ್ ನಂತರ ಇದೀಗ ಮಾಜಿ ಸಚಿವ ಬಸವರಾಜ ರಾಯರಡ್ಡಿ ಸಿದ್ದರಾಮಯ್ಯ ಪರ ಬ್ಯಾಂಟಿಂಗ್ ನಡೆಸಿದ್ದು, ಸಿದ್ದರಾಮಯ್ಯರ ನ್ನು ಹೊಗಳಿದರೆ ತಪ್ಪೇನು? ಕಳೆದ 20 ವರ್ಷಗಳಲ್ಲಿ ರಾಜ್ಯ ಕಂಡ ದಿ ಬೆಸ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿಸಿದ್ದಾರೆ. ಜೆಡಿಎಸ್ಗೆ ಅನಿವಾರ್ಯ ತೆಯಿಂದ ನಾವು ಶರಣಾಗಿದ್ದೇವೆ. ಕಾಂಗ್ರೆಸ್ ಔದಾರ್ಯತೆ ಎಚ್.ಡಿ. ಕುಮಾರಸ್ವಾಮಿ ಅರ್ಥಮಾಡಿ ಕೊಳ್ಳಬೇಕು ಎಂದು ಹೇಳಿದ್ದಾರೆ.
ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಚ್.ಡಿ. ದೇವೇಗೌಡರ ನಂತರ ದಿ ಬೆಸ್ಟ್ ಸಿಎಂ ಸಿದ್ದರಾಮಯ್ಯ. ಸಿದ್ದರಾಮಯ್ಯ ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ನಾನೂ ಹೇಳುತ್ತೇನೆ ಎಂದರು. ಸಿದ್ದರಾಮಯ್ಯ ನಿಜಕ್ಕೂ ತ್ಯಾಗ
ಮಾಡಿದ್ದಾರೆ. ಅವರು ರಾಜ್ಯ ಕಂಡ ಪ್ರಶ್ನಾತೀತ ಹಾಗೂ ವರ್ಣರಂಜಿತ ವ್ಯಕ್ತಿತ್ವದ ರಾಜಕಾರಣಿ. ಮುಖ್ಯಮಂತ್ರಿ ಕುಮಾರಸ್ವಾಮಿ ಅರ್ಥ ಮಾಡಿಕೊಳ್ಳಬೇಕು. ಪ್ರಬುದ್ಧತೆಯಿಂದ ವರ್ತಿಸಬೇಕು. ಸಣ್ಣ ಪುಟ್ಟ ವಿಚಾರಗಳಿಗೂ ರಾಜೀನಾಮೆ ಮಾತು ಸರಿಯಲ್ಲ. ಕಾಂಗ್ರೆಸ್ ಶಾಸಕ ರನ್ನು ಕಂಟ್ರೋಲ್ ಮಾಡಿ ಎಂದು ಹೇಳುವುದು ತಪ್ಪು ಎಂದು ಹೇಳಿದರು.
ಬಿಜೆಪಿ ಲಿಂಗಾಯತ ವಿರೋಧಿ: ಡಾ.ಶಿವಕುಮಾರ ಸ್ವಾಮಿಗಳಿಗೆ ಭಾರತರತ್ನ ಕೊಡದೆ ಇರುವುದು ಬಿಜೆಪಿಯ ಲಿಂಗಾಯತ ವಿರೋಧಿ ಧೋರಣೆಗೆ ಸಾಕ್ಷಿ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ದೂರಿದರು.