Advertisement

ರಾಯಚೂರಿಗೆ ನಾಳೆ ರಾಹುಲ್‌

11:21 AM Apr 18, 2019 | Team Udayavani |

ರಾಯಚೂರು: ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ.ನಾಯಕ ಪರ ಪ್ರಚಾರ ಮಾಡಲು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಏ.19ರಂದು ನಗರಕ್ಕೆ ಆಗಮಿಸುವರು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.19ರಂದು ಮಧ್ಯಾಹ್ನ 2ಕ್ಕೆ ನಗರದ ಮಹಾತ್ಮ ಗಾಂಧಿ  ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್‌ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಎರಡು ಪಕ್ಷಗಳ ಮುಖಂಡರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದು, ರಾಹುಲ್‌ ಗಾಂಧಿ ಆಗಮನದಿಂದ ಮತ್ತಷ್ಟು ಬಲ ಬರಲಿದೆ ಎಂದರು.

ಪ್ರಚಾರ ಸಭೆಯಲ್ಲಿ ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು, ಸಿಎಂ ಎಚ್‌.ಡಿ.ಕುಮಾರ ಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೈತ್ರಿ ಪಕ್ಷಗಳ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ವಿವಿಧ ಬ್ಲಾಕ್‌ ಸಮಿತಿಗಳ ಮುಖಂಡರು ಪಾಲ್ಗೊಳ್ಳುವರು. ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿರುವ ಕಾರಣ ಉಭಯ ಪಕ್ಷಗಳಿಂದ ಸುಮಾರು ಒಂದು ಲಕ್ಷಕ್ಕೂ ಅ ಧಿಕ
ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ ಎಂದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ನಮ್ಮ ಪಕ್ಷದ
ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್‌ ಜತೆ ಪ್ರಚಾರ ಮಾಡುತ್ತಿದ್ದೇವೆ. ಆದರೆ, ಕೆಲವರು ಬಂದಿಲ್ಲ ಎಂದ ಮಾತ್ರಕ್ಕೆ ಮೈತ್ರಿ ವಿಫಲ ಎನ್ನುವುದು ಸರಿಯಲ್ಲ. ಗ್ರಾಮೀಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ರವಿ ಪಾಟೀಲ ನಮ್ಮ ಪಕ್ಷದ ಸದಸ್ಯರೇ ಅಲ್ಲ. ಹೀಗಿರುವಾಗ ಅವರೊಬ್ಬರ ವಿಚಾರ ಉಲ್ಲೇಖೀಸುವುದು ಸರಿಯಲ್ಲ. ಆದರೆ, ಗ್ರಾಮೀಣ ಭಾಗದ ಅಧ್ಯಕ್ಷರು, ಮುಖಂಡರು, ಶಾಸಕರು, ಸಚಿವರು ಪ್ರಚಾರ ಮಾಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಮತ್ತೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದಕ್ಕೂ ಮುನ್ನ ಎಲ್ಲಿಂದ ಬಂದಿದ್ದೇನೆ ಎಂಬ ಬಗ್ಗೆ ಅರಿಯಲಿ. ಉಂಡ ಮನೆಗೆ ಎರಡು ಬಗೆಯುವ
ಅಂಥವರಿಂದ ಹಿತೋಪದೇಶಗಳ ಅಗತ್ಯವಿಲ್ಲ. ಶಿವನಗೌಡರ ಆಪರೇಷನ್‌ ಕಮಲ ಆಡಿಯೋ ಪ್ರಕರಣವನ್ನು ಜನ ಮರೆತಿಲ್ಲ. ಈ ಪ್ರಕರಣದಲ್ಲಿ ಚುನಾವಣೆ ಬಳಿಕ ಬಿಎಸ್‌ವೈ ಮತ್ತು ಶಿವನಗೌಡ ಜೈಲಿಗೆ ಹೋಗುತ್ತಾರೆ. ಹಿರಿಯ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡಿರುವ ಶಿವನಗೌಡರ ವಿರುದ್ಧ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಸಿದರು. ಮುಖಂಡರಾದ ಜಯಣ್ಣ, ತಾಯಣ್ಣ ನಾಯಕ,
ರುದ್ರಪ್ಪ ಅಂಗಡಿ ಸೇರಿ ಇತರರು ಇದ್ದರು.

Advertisement

ಸಿರವಾರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾವೇಶದಲ್ಲಿ ದೇವದುರ್ಗ ಶಾಸಕ ಕೆ.ಶಿವನಗೌಡ
ನಾಯಕ ಕಾಂಗ್ರೆಸ್‌ ನಾಯಕರ ಬಗ್ಗೆ ಕೀಳುಮಟ್ಟದ ಟೀಕೆಗಳನ್ನು ಮಾಡಿರುವುದು ಖಂಡನೀಯ. ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿರುವ ಅವರು ಸಾರ್ವಜನಿಕ ಸಭೆಗಳಲ್ಲಿ ನಾಲಗೆ ಹರಿಬಿಟ್ಟು ಮಾತನಾಡುವುದು ಶೋಭೆ ತರುವಂಥದ್ದಲ್ಲ. ನಮಗೂ ಅವರಿಗಿಂತ ಕೀಳು ಭಾಷೆ ಬರುತ್ತದೆ. ಆದರೆ, ಅದು ಸಭ್ಯತೆ‌ ಅಲ್ಲ.
.ರಾಮಣ್ಣ ಇರಬಗೇರಾ,
ರಾಯಚೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next