ಚಂಡೀಗಢ: ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಈಗ ಪಂಜಾಬ್‌ನ ಕಾಂಗ್ರೆಸ್ ಸಂಸದರೊಬ್ಬರಿಗೆ ಕೊಲೆ ಬೆದರಿಕೆ ಬಂದಿದೆ.
Advertisement
ಲುಧಿಯಾನಾ ಕ್ಷೇತ್ರದ ಸಂಸದ ರವನೀತ್ ಸಿಂಗ್ ಬಿಟ್ಟು ಅವರಿಗೆ ಮಂಗಳವಾರ ವಾಟ್ಸ್‌ಆ್ಯಪ್ ಕರೆ ಮೂಲಕ, “ಪಂಜಾಬ್ ಕಾಂಗ್ರೆಸ್ ನಾಯಕ ಮೂಸೆವಾಲಾ ರೀತಿಯಲ್ಲೇ ಕೊಲೆ ಮಾಡಲಾಗುವುದು’ ಎಂದು ಬೆದರಿಸಲಾಗಿದೆ.
ಸಲ್ಮಾನ್‌ಗೆ ಕೊಲೆ ಬೆದರಿಕೆ ಹಾಕಿರುವ ವಿಚಾರದಲ್ಲಿ ಮೂಸೆವಾಲಾ ಕೊಲೆ ಆರೋಪಿ ಲಾರೆನ್ಸ್ ಬಿಷ್ಣೋಯ್‌ನ್ನು ಸೋಮವಾರ ವಿಚಾರಣೆ ನಡೆಸಲಾಗಿದ್ದು, ಆತ ತಾನು ಈ ಬೆದರಿಕೆ ಹಾಕಿಸಿಲ್ಲ ಎಂದು ಹೇಳಿದ್ದಾನೆ.