ಶಿರಸಿ: ಪ್ರಸಕ್ತ ವರ್ಷದ ಬರ ನಿರ್ವಹಣೆ ಪರಿಹಾರಕ್ಕೆ ಸಂಬಂಧಿಸಿ ರಾಜ್ಯ ಸರಕಾರವು 33 ಲಕ್ಷ ರೈತರ ಖಾತೆಗೆ ರೂ. 628 ಕೋಟಿ ಹಣ ನೇರವಾಗಿ ಸಂದಾಯ ಮಾಡಿ, ರೈತರ ಸಮಸ್ಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ ಎಂದು ಕೆನರಾ ಲೋಕಸಭಾ ಕ್ಷೇತ್ರದ ಭೂತ್ ಲೆವೆಲ್ ಏಜೆಂಟ್ ನೇಮಕ ಕಾರ್ಯಕ್ರಮದ ಸಂಚಾಲಕ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವ ರೈತರಿಗೆ ನೇರವಾಗುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಬರ ನಿರ್ವಹಣೆ ಪರಿಹಾರಕ್ಕೆ ರೂ. ಎರಡು ಸಾವಿರ ಕೋಟಿ ಅನುದಾನವನ್ನ ನಿಗದಿಗೊಳಿಸಿರುವುದು ದಾಖಲಾರ್ಹ. ಬರ ಪರಿಹಾರ ವಿತರಣೆಯನ್ನು ಪಾರದರ್ಶಕ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿಯೂ ಸಹಿತ ಬರ ಪರಿಹಾರ ಬಿಡುಗಡೆ ಮಾಡಿರುವ ರೈತರ ಪಟ್ಟಿ ಪ್ರಕಟಿಸಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 223 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿರುವುದರಿಂದ ಕುಡಿಯುವ ನೀರು, ಮೂಲಭೂತ ಸಮಸ್ಯೆಗಳ ನಿರ್ವಹಣೆ, ದನ ಕರುಗಳಿಗೂ ಮೇವು ಮುಂತಾದ ರೈತರಿಗೆ ನೆರವಾಗುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಖಾತೆಗಳಿಗೆ 870 ಕೋಟಿ ಅನುದಾನ ಬಿಡುಗಡೆ ಮಾಡಲಾಗಿರುವುದು ರಾಜ್ಯ ಸರಕಾರದ ರೈತ ಪರ ಚಿಂತನೆಗೆ ಪೂರಕವಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರಕ್ಕೆ ರೂ 18,178 ಕೋಟಿ ಬರ ಪರಿಹಾರ ಅನುದಾನವನ್ನು ಬಿಡುಗಡೆ ಮಾಡಲು ರಾಜ್ಯ ಸರಕಾರ ಈಗಾಗಲೇ ಅಧಿಕೃತವಾಗಿ ಮನವಿ ನೀಡಿದ್ದಾಗಲೂ, ಇಂದಿನವರೆಗೆ ಕೇಂದ್ರ ಸರಕಾರ ನೆರ ಪರಿಹಾರ ಹಣ ಕರ್ನಾಟಕಕ್ಕೆ ಬಿಡುಗಡೆ ಮಾಡದೇ ಇರುವುದು ಖೇದಕರ. ಬರ ಪರಿಹಾರ ಬಿಡುಗಡೆಯಲ್ಲಿಯೂ ಕೇಂದ್ರ ಸರಕಾರ ರಾಜಕೀಯ ಮನೋಭಾವನೆಯಿಂದ ನೋಡುತ್ತಿರುವುದು ವಿಷಾದಕರ ಎಂದೂ ರವೀಂದ್ರ ನಾಯ್ಕ ಅವರು ಹೇಳಿದರು.
ಇದನ್ನೂ ಓದಿ: Hunsur: ಮಂಜುನಾಥ್‌ಗೆ ಸ್ಥಾನಮಾನ, ವರಿಷ್ಟರ ನಿರ್ಧಾರಕ್ಕೆ: ಡಾ.ಯತೀಂದ್ರ ಸಿದ್ದರಾಮಯ್ಯ