Advertisement

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

08:54 AM Dec 01, 2021 | Team Udayavani |

ಮುಂಬೈ: ಕೆಲವು ದಿನಗಳ ಕಾಯುವಿಕೆ ಅಂತ್ಯವಾಗಿದೆ. ಮಂಗಳವಾರ ರಾತ್ರಿ ಐಪಿಎಲ್ ಫ್ರಾಂಚೈಸಿಗಳು ತಮ್ಮಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕು ಆಟಗಾರರನ್ನು ಉಳಿಕೊಂಡಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಮೋಯಿನ್ ಅಲಿ ಮತ್ತು ಋತುರಾಜ್ ಗಾಯಕ್ವಾಡ್ ರನ್ನು ಸಿಎಸ್ ಕೆ ಮುಂದಿನ ಸೀಸನ್ ಗೆ ತನ್ನಲ್ಲಿ ಉಳಿಸಿಕೊಂಡಿದೆ.

ಇದನ್ನೂ ಓದಿ:7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ

ಪ್ರತಿ ಬಾರಿಯಂತೆ ಸಿಎಸ್ ಕೆ ಮೊದಲ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ರಿಟೈನ್ ಮಾಡಿಕೊಂಡಿಲ್ಲ. ಆದರೆ ನಾಯಕ ಧೋನಿ ಇಲ್ಲಿ ತಮ್ಮ ಮೊದಲ ಸ್ಥಾನವನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟಿದ್ದಾರೆ. ಅಂದರೆ ರವೀಂದ್ರ ಜಡೇಜಾ 16 ಕೋಟಿ ರೂ. ಪಡೆದರೆ, ಮಹೇಂದ್ರ ಸಿಂಗ್ ಧೋನಿ ಅವರು 12 ಕೋಟಿ ರೂ. ಗೆ ತೃಪ್ತಿ ಪಟ್ಟಿದ್ದಾರೆ.

ಮೆಗಾ ಹರಾಜು ಜನವರಿಯಲ್ಲಿ ನಡೆಯಲಿದ್ದು, ಎರಡು ಹೊಸ ಫ್ರಾಂಚೈಸಿಗಳು ಡಿಸೆಂಬರ್ 1 ರಿಂದ ಡಿಸೆಂಬರ್ 25 ರವರೆಗೆ ಇಬ್ಬರು ಭಾರತೀಯ ಮತ್ತು ಒಬ್ಬ ವಿದೇಶಿ ಆಟಗಾರರಿಗೆ ಸಹಿ ಹಾಕಲು ಸಮಯವನ್ನು ಹೊಂದಿವೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next