Advertisement

ರವಿ ಪೂಜಾರಿ ಭಾರತಕ್ಕೆ ಗಡೀಪಾರು ಸನ್ನಿಹಿತ !

01:00 AM Feb 25, 2019 | Team Udayavani |

ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಅಗತ್ಯ ವಿರುವ ಮಹತ್ವದ ದಾಖಲೆಗಳನ್ನು ಸೆನಗಲ್‌ ದೇಶದ ಪೊಲೀಸರಿಗೆ ಸಲ್ಲಿಸುವಲ್ಲಿ ಮುಂಬಯಿ ಪೊಲೀಸರು ಯಶಸ್ವಿಯಾಗಿದ್ದು, ಗಡೀಪಾರಿಗೆ ದಿನಗಣನೆ ಆರಂಭವಾಗಿದೆ ಎನ್ನಲಾಗಿದೆ.

Advertisement

ಉನ್ನತ ಮೂಲಗಳ ಪ್ರಕಾರ ಮುಂಬಯಿ ಪೊಲೀಸರು ರವಿ ಪೂಜಾರಿಯ ಬೆರಳಚ್ಚು, ಡಿಎನ್‌ಎ ಮಾದರಿ ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ಈ ಮೊದಲೇ ಕಳುಹಿ ಸಿದ್ದರು. ಆ ಬಳಿಕ ಮಹಾರಾಷ್ಟ್ರದಲ್ಲಿ ಆತನ ಮೇಲಿರುವ ಹಲವಾರು ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ, ದಾಖಲೆಗಳನ್ನು ಇಂಗ್ಲಿಷ್‌ ಹಾಗೂ ಫ್ರೆಂಚ್‌ ಭಾಷೆಗೆ ತರ್ಜುಮೆ ಮಾಡಿ ಸೆನಗಲ್‌ ಪೊಲೀಸರಿಗೆ ಸಲ್ಲಿಸಿದ್ದಾರೆ.

ಅಧಿಕಾರಿ ವರ್ಗ
ಈ ನಡುವೆ ರವಿ ಪೂಜಾರಿಯನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಹಾಗೂ ಆತನ ಭೂಗತ ಚಟುವಟಿಕೆಗಳ ಬಗ್ಗೆ ಮಹತ್ವದ ಸುಳಿವು ನೀಡುವಲ್ಲಿ ರಾಜ್ಯ ಗುಪ್ತಚರ ವಿಭಾಗ ಎಡಿಜಿಪಿಯಾಗಿದ್ದ ಅಮರ್‌ ಕುಮಾರ್‌ ಪಾಂಡೆ ಮಹತ್ವದ ಪಾತ್ರ ವಹಿಸಿದ್ದರು. ಇಷ್ಟು ದೊಡ್ಡ ಹಾಗೂ ಮಹತ್ವದ ಪ್ರಕರಣದ ಕಾರ್ಯಾಚರಣೆ ಹಿಂದೆ ಕೆಲಸ ಮಾಡುತ್ತಿರಬೇಕಾದರೆ ಅಮರ್‌ ಕುಮಾರ್‌ ಪಾಂಡೆ ಅವರನ್ನು ರಾಜ್ಯ ಸರಕಾರ ಬೇರೆಡೆಗೆ ವರ್ಗಾಯಿಸಿದೆ.

ಈ ನಡುವೆ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಆತನ ಪ್ರಕರಣಗಳ ಮಾಹಿತಿ ಕಲೆಹಾಕುವಲ್ಲಿ ಇಲ್ಲಿನ ಪೊಲೀಸರ ತಂಡಗಳು ಕಾರ್ಯಪ್ರವೃತ್ತವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next