Advertisement

ರವಿ ಕೆ.ಶೆಟ್ಟಿ ಪುಣೆ ಬಂಟರ ಸಂಘ:ದ.ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ

12:08 PM Jan 05, 2019 | |

 ಪುಣೆ: ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ 2018-2020ರ ಕಾರ್ಯಾವಧಿಗೆ ನೂತನ ಕಾರ್ಯಾಧ್ಯಕ್ಷರಾಗಿ ಹೊಟೇಲ್‌ ಉದ್ಯಮಿ ರವಿ ಕೆ. ಶೆಟ್ಟಿ ಆಯ್ಕೆಗೊಂಡಿರುತ್ತಾರೆ. ಅದೇ ರೀತಿ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಹೊಟೇಲ್‌ ವ್ಯವಸಾಯದಲ್ಲಿ ತೊಡಗಿಸಿಕೊಂಡಿರುವ ಗಣೇಶ್‌ ಪೂಂಜಾ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ.

Advertisement

ಸಂಘದ ಪ್ರಾದೇಶಿಕ ಸಮಿತಿಗಳೊಂದಿಗೆ ಬಹಳಷ್ಟು ವರ್ಷಗಳಿಂದ ಕಾರ್ಯನಿರ್ವಹಿಸಿದ ಅನುಭವ ಹೊಂದಿದ ಇವರುಗಳ ಆಯ್ಕೆಯನ್ನು ಜ. 2ರಂದು ಬಂಟರ ಸಂಘದ ಕಚೇರಿಯಲ್ಲಿ ನಡೆದ  ಪುಣೆ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ ಅವರು ಪ್ರಕಟಿಸಿದರು. ಸಂಘದ  ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ನೂತನ ಕಾರ್ಯಾಧ್ಯಕ್ಷರುಗಳಿಗೆ ಪುಷ್ಪಗುತ್ಛ ನೀಡಿ ಅಭಿನಂದಿಸಿದರು.

ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ನೂತನ ಕಾರ್ಯಧ್ಯಕ್ಷೆಯಾಗಿ ಅಂಬಿಕಾ ವಿ. ಶೆಟ್ಟಿ ಅವರು ಆಯ್ಕೆಗೊಂಡರೆ ಉತ್ತರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಪ್ರಮೀಳಾ ಎಸ್‌. ಶೆಟ್ಟಿ ಅವರು ಆಯ್ಕೆಗೊಂಡರು. ಪ್ರಾದೇಶಿಕ ಸಮಿತಿಗಳ ನೂತನ ಕಾರ್ಯಾಧ್ಯಕ್ಷೆಯರಾದ ಅಂಬಿಕಾ ವಿ. ಶೆಟ್ಟಿ ಹಾಗೂ ಪ್ರಮೀಳಾ ವಿ. ಶೆಟ್ಟಿ ಅವರನ್ನು ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್‌. ಶೆಟ್ಟಿ ಅವರು ಪುಷ್ಪಗುತ್ಛ  ನೀಡಿ ಅಭಿನಂದಿಸಿದರು.

ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು  ನೂತನ ಕಾರ್ಯಾಧ್ಯಕ್ಷರುಗಳನ್ನು ಅಭಿನಂದಿಸುತ್ತಾ ಮಾತನಾಡಿ, ನಮ್ಮ ಸಂಘದ ಎರಡು ಪ್ರಾದೇಶಿಕ  ಸಮಿತಿಗಳು ಸಂಘದ ಆಶಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಿ ಸಂಘದ ಬೆಳವಣಿಗೆಗೆ ಮಹತ್ತರ ಕೊಡುಗೆಯನ್ನು ನೀಡಿದ್ದಲ್ಲದೆ ಭವನ ನಿರ್ಮಾಣದಲ್ಲೂ ಪ್ರತಿಯೊಂದು ಹಂತದಲ್ಲೂ ಸಹಕಾರವನ್ನು ನೀಡುತ್ತಾ ಬಂದಿರುತ್ತಾರೆ. ಇದೀಗ ಮುಂದಿನ ಎರಡು ವರ್ಷಗಳಿಗೆ ನೂತನವಾಗಿ ಆಯ್ಕೆಗೊಂಡ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರುಗಳು ತಮಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಸಂಘದ ಹಿತಚಿಂತನೆಗಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಸಂಘದ ಆಡಳಿತ ಮಂಡಳಿಯು ಸಮಿತಿಗೆ ಪೂರ್ಣ ಸಹಕಾರ ನೀಡಲಿದೆ ಎಂದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸತೀಶ್‌ ಶೆಟ್ಟಿ, ಮೋಹನ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಗೌರವ ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ಜತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ,  ಕಟ್ಟಡ ಸಮಿತಿ ಕಾರ್ಯಾ ಧ್ಯಕ್ಷರಾದ  ರಾಮಕೃಷ್ಣ ಎಂ. ಶೆಟ್ಟಿ,  ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ³ ಪ್ರವೀಣ್‌  ಶೆಟ್ಟಿ ಪುತ್ತೂರು,  ಕಾನೂನು ವಿಭಾಗದ ಕಾರ್ಯಾಧ್ಯಕ್ಷ ಗಣೇಶ್‌ ಶೆಟ್ಟಿ, ಸದಸ್ಯತ್ವ ನೋಂದಣಿ ಕಾರ್ಯಾಧ್ಯಕ್ಷ  ವಿವೇಕಾನಂದ ಶೆಟ್ಟಿ ಆವರ್ಸೆ, ಕ್ಯಾಟರಿಂಗ್‌ ಸಮಿತಿ ಕಾರ್ಯಾಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು, ಮ್ಯಾರೇಜ್‌ ಬ್ಯೂರೊ ಕಾರ್ಯಾಧ್ಯಕ್ಷ ಮಾಧವ ಆರ್‌. ಶೆಟ್ಟಿ,  ಜನಸಂಪರ್ಕ ಸಮಿತಿಯ ಸದಸ್ಯ ವಿಶ್ವನಾಥ ಎಸ್‌. ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿ ಸಮನ್ವಯಕರಾದ  ವಸಂತ್‌ ಶೆಟ್ಟಿ ಬೈಲೂರು, ಉದ್ಯಮ ಅಭಿವೃದ್ಧಿ ಹಾಗೂ ಕಟ್ಟಡ ಉಪಕಾ ರ್ಯಧ್ಯಕ್ಷ  ಪ್ರಶಾಂತ್‌ ಎ. ಶೆಟ್ಟಿ, ಮಹಿಳಾ ವಿಭಾಗದ ಪದಾಧಿಕಾರಿಗಳು, ಯುವ ವಿಭಾಗದ  ಸದಸ್ಯರು, ಉ. ಪ್ರಾದೇಶಿಕ ಸಮಿತಿ ಹಾಗೂ ದ.ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ನೂತನ ಕಾರ್ಯಾಧ್ಯಕ್ಷರನ್ನು ಅಭಿನಂದಿಸಿದರು. 

Advertisement

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next