ವಾಷಿಂಗ್ಟನ್: ಅಮೆರಿಕ ವಾಯುಪಡೆಯ ರಕ್ಷಣಾ ಸಹಾಯಕ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ರವಿ ಚೌಧರಿ ಆಯ್ಕೆಯಾಗಿದ್ದಾರೆ. ಇದನ್ನು ಯುನೈಟೆಡ್ ಸ್ಟೇಟ್ಸ್ ಸೆನೆಟ್ ದೃಢಪಡಿಸಿದೆ.
ಅಮೆರಿಕದ ಸಾರಿಗೆ ಇಲಾಖೆಯಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದ ಚೌಧರಿ, ಅಲ್ಲಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ನಲ್ಲಿ, ಸುಧಾರಿತ ಕಾರ್ಯಕ್ರಮಗಳು ಮತ್ತು ನಾವೀನ್ಯತೆ ಕಛೇರಿಯ ನಿರ್ದೇಶಕರಾಗಿದ್ದರು.
ಸಾರಿಗೆ ಇಲಾಖೆಯಲ್ಲಿದ್ದಾಗ ಅವರು ಉನ್ನತ ಮಟ್ಟದ ಕಾರ್ಯಾಚರಣೆಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
1993 ರಿಂದ 2015ರವರೆಗೆ ಯುಎಸ್ ಏರ್‌ಫೋರ್ಸ್‌ನಲ್ಲಿ ಅವರು ವಿವಿಧ ಕಾರ್ಯಾಚರಣೆ, ಎಂಜನಿಯರಿಂಗ್, ಹಿರಿಯ ಸಿಬ್ಬಂದಿ ಕಾರ್ಯಯೋಜನೆಗಳ ಜವಾಬ್ದಾರಿಗಳನ್ನು ಹೊತ್ತಿದ್ದರು ಎಂದು ವೈಟ್ ಹೌಸ್ ಹೇಳಿಕೊಂಡಿದೆ.
Related Articles
C-17 ನ ಪೈಲಟ್ ಆಗಿದ್ದುಕೊಂಡು ಅಫ್ಘಾನಿಸ್ಥಾನ, ಇರಾಖ್ ಮುಂತಾದ ಜಗತ್ತಿನ ಪ್ರಮುಖ ವೈಮಾನಿಕ ಕಾರ್ಯಾಚರಣೆಯ ಪ್ರಮುಖ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದರು.
ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ, ಮಿಲಿಟರಿ ಏವಿಯಾನಿಕ್ಸ್ ಮತ್ತು ಹಾರ್ಡ್‌ವೇರ್‌ನ ಹಾರಾಟದ ಪ್ರಮಾಣೀಕರಣದ ಜವಾಬ್ದಾರಿಯನ್ನು ಹೊತ್ತಿದ್ದರು ಎಂದು ವೈಟ್ ಹೌಸ್ ವರದಿ ಮಾಡಿದೆ.
ಇದನ್ನೂ ಓದಿ: ವಿಶ್ವದ ಅತ್ಯುತ್ತಮ ಏರ್ಪೋರ್ಟ್ ಗಳ ಪಟ್ಟಿ ಬಿಡುಗಡೆ; ಇಲ್ಲಿದೆ ಟಾಪ್ 20 ವಿ.ನಿಲ್ದಾಣಗಳ ಪಟ್ಟಿ