Advertisement

ಕ್ರೂಸ್ ಶಿಪ್ ನಲ್ಲಿ ರೇವ್ ಪಾರ್ಟಿ: ಬಾಲಿವುಡ್ ಸೂಪರ್ ಸ್ಟಾರ್ ಪುತ್ರ ಸೇರಿ 10 ಮಂದಿ ವಶಕ್ಕೆ

04:31 PM Oct 03, 2021 | Team Udayavani |

ಮುಂಬೈ: ಮುಂಬೈ ಕರಾವಳಿ ತೀರದಲ್ಲಿ ಕ್ರೂಸ್ ಶಿಪ್ ಒಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಹತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಒಬ್ಬರ ಪುತ್ರನೂ ಸೇರಿದ್ದಾನೆ ಎನ್ನಲಾಗಿದೆ.

Advertisement

ದಾಳಿಯ ವೇಳೆ ಅಧಿಕಾರಿಗಳು ಕೊಕೇನ್‌, ಹಶೀಶ್‌ ಹಾಗೂ ಎಂಡಿಎಂಎ ಸೇರಿ ಹಲವು ರೀತಿಯ ನಿಷೇಧಿತ ಮಾದಕ ದ್ರವ್ಯಗಳು ಪತ್ತೆಯಾಗಿದ್ದು ವಶಕ್ಕೆ ಪಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

ಕಾರ್ಡೆಲಿಯಾ ಕ್ರೂಸ್ ಲೈನರ್ ಎಂಪ್ರೆಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿದ್ದವರು ಡ್ರಗ್ಸ್ ಸೇವಿಸುತ್ತಿದ್ದರು. ಎನ್‌ಸಿಬಿ ಅಧಿಕಾರಿಗಳು ಬಾಂಬೆಯಿಂದ ಪ್ರಯಾಣಿಕರಂತೆ ಹಡಗು ಹತ್ತಿದ್ದರು.

ಇದನ್ನೂ ಓದಿ:ದೀದಿ ಭವಿಷ್ಯ ಇಂದೇ ನಿರ್ಧಾರ : ಭವಾನಿಪುರ ಉಪಚುನಾವಣೆ ಮತ ಎಣಿಕೆ ಆರಂಭ

ಹಡಗು ಮುಂಬೈ ತೀರದಿಂದ ಹೊರಟು ಸಮುದ್ರವನ್ನು ತಲುಪಿದ ನಂತರ ರೇವ್ ಪಾರ್ಟಿ ಆರಂಭವಾಗಿದೆ. ಪಾರ್ಟಿ ಆರಂಭವಾಗುತ್ತಿದ್ದಂತೆ ಹಡಗಿನಲ್ಲಿದ್ದ ಎನ್ ಸಿಬಿ ಅಧಿಕಾರಿಗಳು ತಕ್ಷಣ ದಾಳಿ ನಡೆಸಿದರು ಮತ್ತು ಬಹಿರಂಗವಾಗಿ ಅಕ್ರಮ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದ ಹಲವರನ್ನು ಬಂಧಿಸಿದ್ದಾರೆ.

Advertisement

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 10 ಮಂದಿಯನ್ನು ಎನ್ ಸಿಬಿ ಬಂಧಿಸಿದೆ ಎನ್ನಲಾಗಿದೆ. ಬಂಧಿತರನ್ನು ಇದೀಗ ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ

Advertisement

Udayavani is now on Telegram. Click here to join our channel and stay updated with the latest news.

Next