ತೀರ್ಥಹಳ್ಳಿ: ದೀಪಾವಳಿ ಹಬ್ಬದ ಅಂಗವಾಗಿ ಹಾವೇರಿ ಜಿಲ್ಲೆಯ ಕನಕಪುರ ಮೂಲದ ರಾವಣ ವೇಷದಾರಿ ಶಿರಸಿ,ಸಿದ್ದಪುರ ಮಂಗಳೂರು ಸೇರಿದಂತೆ ಅನೇಕ ಊರುಗಳಲ್ಲಿ ವೇಷ ಧರಿಸಿ ಹೊಟ್ಟೆ ಪಾಡಿಗೆ ತಿರುಗಿ ತೀರ್ಥಹಳ್ಳಿಗೆ ಬಂದಿದ್ದ ಹಕ್ಕಿ ಪಿಕ್ಕಿ ಜನಾಂಗದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತುಂಗಾ ನದಿಯ ಜಯಚಾಮರಾಜೇಂದ್ರ ಕಮಾನು ಸೇತುವೆ ಪಕ್ಕ ಸಿನಿಮೀಯ ರೀತಿಯಲ್ಲಿ ನೀರಿಗಿಳಿದು ನದಿಯಲ್ಲಿ ನಾಪತ್ತೆಯಾದ ಘಟನೆ ಗುರುವಾರ ಸಂಜೆ ನಾಲ್ಕು ಘಂಟೆಗಳ ಅವಧಿಯಲ್ಲಿ ನಡೆದಿದ್ದು, ಆತನಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:- ಜೊತೆಗಿರದ ಜೀವ ಎಂದಿಗೂ ಜೀವಂತ…! ‘ಕೋಟ್ಯಾಧಿಪತಿ’ಯನ್ನು ಕಳೆದುಕೊಂಡ ಕರುನಾಡು
ರಾಮ, ಲಕ್ಷ್ಮಣ, ಆಂಜನೇಯ, ರಾವಣ ವೇಷ ಹಾಕಿ ಕೈಯಲ್ಲಿ ಶೃತಿ ಪೆಟ್ಟಿಗೆ ಹಿಡಿದು ತಮ್ಮದೇ ಕಂಠಸಿರಿಯಲ್ಲಿ ಹಾಡುತ್ತ ದಸರಾದಲ್ಲಿ ಉತ್ತಮ ಕಲೆ ಬಿಂಬಿಸುವ ಮೂಲಕ ಈ ಜೋಡಿ ಗಮನ ಸೆಳೆದಿತ್ತು.
ಕುಡಿದ ಮತ್ತಿನಲ್ಲಿ ರಾವಣನ ಸ್ಟೈಲ್ ಅಲ್ಲಿ ನದಿಗೆ ಹಾರಿದ!
ಪಟ್ಟಣದ ಕುರುವಳ್ಳಿ ಗಣಪತಿ ಪೆಂಡಲ್ ಹಿಂಬದಿಯ ಮರಳು ದಂಡೆಬಳಿಯ ತುಂಗಾ ನದಿಯಲ್ಲಿ ಈ ಘಟನೆ ನಡೆದಿದ್ದು, ರಾವಣನ ವೇಷಧಾರಿ ಗೋವಿಂದ 45 ವರ್ಷ ವ್ಯಕ್ತಿ ಪಕ್ಕದ ಸೇತುವೆ ಮೇಲೆ ನಡೆದುಕೊಂಡು ಹೊಗುವಬದಲು ಕುಡಿದ ಮತ್ತಲ್ಲಿ ರಾವಣನ ವೇಷದಲ್ಲೇ ನದಿದಾಟಲು ಆಳದ ಅರಿವು ಇಲ್ಲದೆ ಹೊಳೆಗೆ ಇಳಿದಿದ್ದಾನೆ. ಈತ ಸ್ಥಳೀಯ ಮದ್ಯದ ಅಂಗಡಿಯಲ್ಲಿ ಹೇಳಿ ಬಂದಿದ್ದು, ಹೊಳೆ ದಂಡೆಯಲ್ಲೂ ನಾನು ರಾವಣನ ರೀತಿ ಹೊಳೆ ದಾಟುತ್ತೇನೆ ನೋಡಿ ಎಂದಿದ್ದಾನೆ. ಬಳಿಕ ನೀರಿಗೆ ಇಳಿದು ನಾಪತ್ತೆಯಾಗಿದ್ದಾನೆ.
ಶೋಧ ಕಾರ್ಯ
ತೀರ್ಥಹಳ್ಳಿ ಪೊಲೀಸರು, ಅಗ್ನಿ ಶಾಮಕ ದಳದವರು ಗುರುವಾರ ದಿಂದ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದು ಆದರೆ ಶುಕ್ರವಾರ ಮಧ್ಯಾಹ್ನ ಆದರು ಇನ್ನು ಮೃತದೇಹ ಪತ್ತೆಯಾಗಿಲ್ಲ.