Advertisement

ಮುಖ್ಯ ಕಾರ್ಯದರ್ಶಿ ಹುದ್ದೆಗೆ ರತ್ನಪ್ರಭ ?

06:00 AM Nov 28, 2017 | |

ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎರಡು ಉನ್ನತ ಹುದ್ದೆಗಳಿಗೆ ಮಹಿಳೆಯರೇ ನೇಮಕವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

Advertisement

ಈಗಾಗಲೇ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಹುದ್ದೆ ನೀಲಮಣಿ ರಾಜು ಅವರ ಪಾಲಾಗಿದೆ. ಒಂದು ವೇಳೆ ಮುಖ್ಯ ಕಾರ್ಯದರ್ಶಿ ಹುದ್ದೆಗೂ ರತ್ನಪ್ರಭ ಅವರೇ ನೇಮಕವಾದಲ್ಲಿ, ಹೊಸ ಇತಿಹಾಸವೊಂದು ಸೃಷ್ಟಿಯಾ ಗಲಿದೆ. ಸದ್ಯ ಈ ಹುದ್ದೆಗೆ ಮೂವರು ಹಿರಿಯ ಅಧಿಕಾರಿಗಳ ನಡುವೆ ಪೈಪೋಟಿಯಿದೆ. ಆದರೆ ಬಹುತೇಕ ಕೆ.ರತ್ನಪ್ರಭ ಅವರೇ ನೂತನ ಮುಖ್ಯ ಕಾರ್ಯದರ್ಶಿಯಾಗುವುದು ಖಚಿತ ಎಂದು ಹೇಳಲಾಗಿದೆ.

ಮುಖ್ಯ ಕಾರ್ಯದರ್ಶಿ ನೇಮಕ ಸಂಬಂಧ ರಾಜ್ಯ ಸಚಿವ ಸಂಪುಟ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಧಿಕಾರ ನೀಡಿದೆ. ಈ ಸಂಬಂಧ ಒಂದೆರಡು ದಿನಗಳಲ್ಲಿ ಆದೇಶ ಹೊರಬೀಳಲಿದೆ. ಕೆ.ರತ್ನಪ್ರಭ, ಕೇಂದ್ರ ಸೇವೆಯಲ್ಲಿರುವ ಎಸ್‌.ಕೆ.ಪಟ್ಟಾನಾಯಕ್‌, ಲತಾ ಕೃಷ್ಣರಾವ್‌, ಟಿ.ಎಂ.ವಿಜಯಭಾಸ್ಕರ್‌ ಹಿರಿತನದ ಲಿಸ್ಟ್‌ನಲ್ಲಿದ್ದು, ರತ್ನಪ್ರಭ ಹೆಸರು ಮುಂಚೂಣಿಯಲ್ಲಿದೆ.

ಈಗಾಗಲೇ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಸ್ಥಾನ ಮಹಿಳಾ ಅಧಿಕಾರಿಗೆ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಸಹ ಮಹಿಳಾ ಅಧಿಕಾರಿಗೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ಸುಭಾಷ್‌ಚಂದ್ರ ಕುಂಟಿಯಾ ಅವರು ಇದೇ 30 ರಂದು ನಿವೃತ್ತಿಯಾಗಲಿದ್ದು, ಮಂಗಳವಾರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next