Advertisement

ಅಂತಾರಾಜ್ಯದವರಿಗೂ ಪಡಿತರ

12:45 PM Apr 21, 2020 | Suhan S |

ಧಾರವಾಡ: ಲಾಕ್‌ಡೌನ್‌ ಜಾರಿಯಾಗಿರುವ ಹಿನ್ನೆಲೆಯಲ್ಲಿ ಅಂತಾರಾಜ್ಯ ಪಡಿತರ ಚೀಟಿದಾರರಿಗೆ ರಾಜ್ಯದ ನ್ಯಾಯಬೆಲೆ ಅಂಗಡಿಗಳಿಂದ ಪೋರ್ಟೆಬಿಲಿಟಿ ಅಡಿ ಪಡಿತರ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಇತ್ಯಾದಿ ಪ್ರದೇಶಗಳಲ್ಲಿ ಹೊರ ರಾಜ್ಯಗಳಿಂದ ಕಾರ್ಯ ನಿರ್ವಹಿಸಲು ಬಂದ ಕಾರ್ಮಿಕರು, ಕುಶಲಕರ್ಮಿಗಳು ಮೂಲ ರಾಜ್ಯದಲ್ಲಿನ ಪಡಿತರ ಚೀಟಿ ಹೊಂದಿದ್ದಲ್ಲಿ, ಪಡಿತರ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ಅಂತಾರಾಜ್ಯ ಪಡಿತರ ಚೀಟಿ ಹೊಂದಿರುವವರು ಉಚಿತವಾಗಿ ಆಹಾರಧಾನ್ಯ ಪಡೆಯುವಂತಿರುವುದಿಲ್ಲ. ಪ್ರತಿ ಕೆಜಿಗೆ 3ರೂ.ರಂತೆ ಹಣ ಪಾವತಿಸಿ ಬಿಪಿಎಲ್‌ ಕಾರ್ಡ್‌ನ ಪ್ರತಿ ಸದಸ್ಯರು ತಲಾ 5 ಕೆಜಿ ಅಕ್ಕಿ, ಅಂತ್ಯೋದಯ ಕಾರ್ಡ್‌ದಾರರು ಪ್ರತಿ ಕಾರ್ಡ್ ಗೆ 35ಕೆಜಿ ಅಕ್ಕಿ ಪಡೆಯಬಹುದಾಗಿರುತ್ತದೆ. ಅಂತಾರಾಜ್ಯ ಪಡಿತರ ಚೀಟಿದಾರರು ಅವರ ಆಧಾರ್‌ ದೃಢೀಕೃತ ಬೆರಳಚ್ಚು ಬಯೋಮೆಟ್ರಿಕ್‌ ಅಥವಾ ಆಧಾರ್‌ ಒಟಿಪಿ ಮೂಲಕವೇ ಪಡಿತರ ಪಡೆಯುವಂತೆ ಸೂಚಿಸಲಾಗಿರುತ್ತದೆ.

Advertisement

ರಾಜ್ಯದ ಕಾರ್ಮಿಕರು, ಕುಶಲಕರ್ಮಿಗಳು ಕಾರ್ಯ ನಿರ್ವಹಿಸುವ ಕಾರ್ಖಾನೆಗಳು ಅಥವಾ ಸಂಸ್ಥೆಗಳ ಮಾಲೀಕರು ಸಂಬಂಧಿಸಿದ ಕಾರ್ಮಿಕ, ಕುಶಲಕರ್ಮಿಗಳಿಗೆ ತಿಳಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next