Advertisement

ಡಿಸಿಎಂ ಡಿಕೆಶಿ ಸ್ವಕ್ಷೇತ್ರದಲ್ಲಿ ಪಡಿತರ ಅಕ್ಕಿ ದಂಧೆ

03:15 PM Jul 27, 2023 | Team Udayavani |

ಕನಕಪುರ: ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಸರಕು ಸಾಗಾಣೆ ವಾಹನದ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ 86 ಬ್ಯಾಗ್‌ 4750 ಕೆ.ಜಿ. ಅಕ್ಕಿ ಮತ್ತು ಸಾಗಾಣೆ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.

Advertisement

ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಜನರಿಗೆ ಕೊಟ್ಟಿದ್ದ ಐದು ಗ್ಯಾರಂಟಿಗಳ ಪೈಕಿ ಅನ್ನ ಭಾಗ್ಯವೂ ಒಂದು. ರಾಜ್ಯದ ಜನರಿಗೆ ಅನ್ನಭಾಗ್ಯ ಯೋಜನೆಯಲ್ಲಿ 10 ಕೆ.ಜಿ. ಕೊಡುವ ಚುನಾವಣಾ ಪೂರ್ವದಲ್ಲಿ ಜನರಿಗೆ ಕೊಟ್ಟಿದ್ದ ಭರವಸೆಯನ್ನು ಈಡೇರಿಸಬೇಕು. ಬಡವರಿಗೆ ಹಸಿವನ್ನು ನೀಗಿಸಬೇಕು ಎಂದು ನೆರೆ ರಾಜ್ಯಗಳಿಂದ ಅಕ್ಕಿ ತಂದು ವಿತರಣೆ ಮಾಡುವ ಪ್ರಯತ್ನವನ್ನು ಮಾಡಿತ್ತು. ಆದರೆ, ರಾಜ್ಯ ಸರ್ಕಾರಕ್ಕೆ ಅಗತ್ಯ ಪಡಿತರ ಸಿಗದೆ ಪಡಿತರ ಬದಲು ರಾಜ್ಯ ಸರ್ಕಾರ ಅಕ್ಕಿ ಬದಲಾಗಿ ಹಣವನ್ನು ಕೊಡುತ್ತಿದೆ. ಆದರೆ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಸ್ವಕ್ಷೇತ್ರದಲ್ಲಿ ಮಾತ್ರ ಬಡವ ಹಸಿವು ನೀಗಿಸಬೇಕಾದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ ಎಂಬ ದೂರು ಆರೋಪಗಳು ಸಾಕಷ್ಟು ಕೆಳಿ ಬಂದಿದ್ದವು.

ಅಧಿಕಾರಿಗಳಿಗೆ ಮಾಹಿತಿ: ನಗರದ ಪೈಪ್‌ಲೈನ್‌ ರಸ್ತೆಯ ಮೂಲಕ ಹಲಗೂರು ಕಡೆಗೆ ಟಾಟಾ 207 ಕೆ.ಎ.07 ಎ 7108 ಸಂಖ್ಯೆಯ ಸರಕು ಸಾಗಾಣೆ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಹಾಗೂ ಶ್ರೀರಾಮ ಸೇನೆ ಸಂಘಟನೆ ಪದಾಧಿಕಾರಿಗಳು ಹೌಸಿಂಗ್‌ ಬೋರ್ಡ್‌ ಬಳಿ ಅಕ್ರಮವಾಗಿ ಪಡಿತರ ಸಾಗಾಣೆ ಮಾಡುತ್ತಿದ್ದ ವಾಹವನ್ನು ಅಡ್ಡಗಟ್ಟಿ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕ್ರಮಕ್ಕೆ ಸಾರ್ವಜನಿಕರ ಆಗ್ರಹ: ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಹಾರ ಇಲಾಖೆ ಶಿರಸ್ತೆದಾರ್‌ ಪ್ರಕಾಶ್‌ ಹಾಗೂ ಪೊಲೀಸರು ಸ್ಥಳ ಮಹಜರು ಮಾಡಿ ಪಡಿತರ ಅಕ್ಕಿ ಹಿಸತ ಸಾಗಾಣೆ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಅಕ್ಕಿ ಸಾಗಾಣೆ ಮಾಡಲು ಯಾವುದೇ ಅನುಮಾನ ಬಾರದಂತೆ ಬಿಸ್ಮಿಲ್ಲಾ ಟ್ರೆಂಡರ್ ಹೆಸರಿನಲ್ಲಿದ್ದ ಜಿಎಸ್‌ಟಿ ರಹಿತ ಬಿಲ್‌ನ್ನು ವಶಕ್ಕೆ ಪಡೆದಿದ್ದಾರೆ. ಅವರ ಮೇಲೂ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next