ಬೆಂಗಳೂರು: ಕುಚ್ಚಲಕ್ಕಿ ಅನ್ನ, ಗಂಜಿ ಹೆಚ್ಚು ಚಾಲ್ತಿಯಲ್ಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಡಿತರ ದಾರ ರಿಗೆ ಸ್ಥಳೀಯ ಕೆಂಪು ಕುಚ್ಚಲಕ್ಕಿ ವಿತರಿಸುವ ಸಂಬಂಧ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ಗುರುವಾರ ವಿಧಾನ ಸೌಧ ದಲ್ಲಿ ನಡೆದ ಕರಾವಳಿ ಭಾಗದ ಜನಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಎರಡೂ ಜಿಲ್ಲೆಗಳಿಗೆ ಪೂರೈಸಲು ವಾರ್ಷಿಕ 12 ಲಕ್ಷ ಕ್ವಿಂಟಾಲ್ ಕೆಂಪು ಕುಚ್ಚಲಕ್ಕಿ ಬೇಕಿದ್ದು, ರಾಜ್ಯದ ಎಂಒ 4, ಜಯಾ, ಅಭಿಲಾಷಾ, ಭದ್ರಾ ಕಜೆ, ಜ್ಯೋತಿ ತಳಿಯ ಭತ್ತ ಖರೀದಿಸಲು ಚರ್ಚೆ ನಡೆಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು.
ಉಭಯ ಜಿಲ್ಲೆಗಳಿಗೆ ಕೆಂಪು ಕುಚ್ಚಲಕ್ಕಿ ಪೂರೈಸಲು ತೀರ್ಮಾನಿಸಲಾಗಿದೆ. ಎರಡೂ ಜಿಲ್ಲೆಗಳ ಬೇಡಿಕೆ ಪೂರೈಸಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಗಳಿಂದ ಭತ್ತ ಖರೀದಿಸಲಾಗುವುದು. ಇಲ್ಲಿಂದ ಪೂರೈಕೆ ಕಡಿಮೆಯಾದರೆ ಮಂಡ್ಯ, ಮೈಸೂರು, ರಾಮನಗರ, ಬೆಳಗಾವಿ ಜಿಲ್ಲೆಗಳಿಂದ ಭತ್ತ ಖರೀದಿ ಸಲು ಚರ್ಚೆ ನಡೆದಿದೆ. ಕೇಂದ್ರದ ಅನುಮತಿ ಪಡೆದು ನವೆಂಬರ್‌ನಿಂದ ಅಕ್ಕಿ ಗಿರಣಿಗಳ ಮೂಲಕ ಕೆಂಪು ಕುಚ್ಚಲಕ್ಕಿ ಉತ್ಪಾದಿಸಿ ಪಡಿತರದಾರರಿಗೆ ವಿತರಿಸಲಾಗುವುದು ಎಂದು ಸಭೆಯ ಅನಂತರ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉಡುಪಿ, ದ.ಕ.ದಲ್ಲಿ ಬೇಡಿಕೆಯಷ್ಟು ಭತ್ತ ಲಭ್ಯ ವಿಲ್ಲ ವಾದರೆ ಇತರ ಜಿಲ್ಲೆಗಳಿಂದ ಖರೀದಿಸ ಲಾಗುವುದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.