ನಂಜನಗೂಡು: ಗ್ರಾಮೀಣ ಸೊಗಡಿನ ಸಂಸ್ಕೃತಿಯ ಜೊತೆಗೆ ಆಧುನಿಕತೆಯ ಅವಿ ಷ್ಕಾರಗಳನ್ನೂ ಪ್ರದರ್ಶಿಸುತ್ತಾ ವಾರಗಳ ಕಾಲ ಲಕ್ಷಾಂತರ ಜನರ ಆಕರ್ಷಣೆ ಕೇಂದ್ರ ವಾಗುತ್ತಿದ್ದ ಸುತ್ತೂರು ಜಾತ್ರೆ ಈ ಬಾರಿ ಒಂದೇ ದಿನಕ್ಕೆ ಧಾರ್ಮಿಕ ಆಚÃ ಣೆಗೆ ಸೀಮಿತವಾಗಿ ಸಂಪನ್ನಗೊಂಡಿದೆ.
ವರ್ಷದಿಂದ ವರ್ಷಕ್ಕೆ ಬಸವತತ್ವ ಹಾಗೂ ದಾಸೋಹವನ್ನು ಹೆಚ್ಚಿಸುತ್ತಲೇ ಬಂದಿದ್ದ ಇಲ್ಲಿನ ಆದಿಗುರು ಶಿವರಾತ್ರೀಶ್ವರ ಜಾತ್ರಾ ಮಹೋñವ Õ ಈ ವರ್ಷ ಕೊರೊನಾ ಹಿನ್ನೆಲೆ ಯಲ್ಲಿ ಸಾಂಪ್ರ ದಾಯಕ ವಾಗಿ ಜರುಗಿತು. ಮಂಗಳವಾರ ಸಂಜೆಯಿ ಂದ ಜಾತ್ರೆ ಆರಂಭ ಗೊಂಡು ಬುಧವಾರ ಉತ್ಸವ ಮೂರ್ತಿ ಯನ್ನು ಮೂಲ ಮಠಕ್ಕೆ ತರುವುದರೊಂದಿಗೆ ಪೂರ್ಣ ಗೊಳಿಸಲಾಯಿತು.
ಬುಧವಾರ ಮುಂಜಾನೆ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳ ನೇತೃತ್ವದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಆದಿ ಜಗದ್ಗು ರು ಗಳ ಉತ್ಸವ ಮೂರ್ತಿಗೆ ಧಾರ್ಮಿಕ ಪೂಜೆ ನೆರವೇರಿಸ ಲಾ ಯಿತು. ನಂತರ 10.30ಕ್ಕೆ ಸರಿಯಾಗಿ ಉತ್ಸವ ಮೂರ್ತಿಯನ್ನು ಗದ್ದುಗೆ ಮುಂಭಾಗದಲ್ಲಿರುವ ರಥದಲ್ಲಿ ಪ್ರತಿಷ್ಠಾಪಿಸಿ, ಗದ್ದುಗೆ ಆವರಣಕ್ಕೆ ಸಿಮಿತ ವಾಗಿಸಿ ರಥೋತ್ಸವ ನಡೆಸಲಾಯಿತು. ಸಂಜೆ ಶ್ರೀಯವರ ಮೂರ್ತಿಯನ್ನು ಮಠದ ಬಿರುದು ಬಾವಲಿಗ ಳೊಂದಿಗೆ ಮೂಲ ಮಠಕ್ಕೆ ವಾಪಸ್ ಕರೆ ತರುವುದ ರೊಂದಿಗೆ 2021ನೇ ಸಾಲಿನ ಸುತ್ತೂರು ಜಾತ್ರೆಗೆ ಮಂಗಳ ಹಾಡಲಾಯಿತು.
ಇದನ್ನೂ ಓದಿ:ಮದ್ದೂರು ಪುರಸಭೆ ಸದಸ್ಯೆ ಏಕಾಂಗಿ ಪ್ರತಿಭಟನೆ
ಪ್ರತಿ ವರ್ಷ ಬರೋಬ್ಬರಿ ಒಂದು ವಾರಗಳ ಕಾಲ ಅಕ್ಷರದ ಉತ್ಸವದೊಂದಿಗೆ ಆಧುನಿಕ ವಿಜ್ಞಾನದ ಆವಿಷ್ಕಾರಗಳ ಜೊತೆ ಕೃಷಿ, ನಾಟಕ, ದೇಸಿ ಆಟಗಳನ್ನು ನಡೆಸ ಲಾಗುತ್ತಿತ್ತು. ಹತ್ತೂರಿನ ಜಾತ್ರೆಗಿಂತ ಸುತ್ತೂ ರಿನ ಜಾತ್ರೆಯೇ ಲೇಸು ಎಂಬಂತಿದ್ದ ಜಾತ್ರೆ ಈ ಬಾರಿ ಕೇವಲ ಧಾರ್ಮಿಕ ಸಂಪ್ರ ದಾಯಕ ಆಚರಣೆಗೆ ಸೀಮಿತವಾಯಿತು.