Advertisement

ಮಂಗಳೂರು: ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ: ಅವಭೃಥ ಉತ್ಸವ

04:04 PM Jan 30, 2023 | Team Udayavani |

ರಥಬೀದಿ(ಮಂಗಳೂರು):ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಪ್ರಯುಕ್ತ ರವಿವಾರ ಶ್ರೀ ದೇವರ ಅವಭೃಥ ಉತ್ಸವ (ಓಕುಳಿ) ನಡೆಯಿತು.

Advertisement

ಇದನ್ನೂ ಓದಿ:ಏಪ್ರಿಲ್ 1 ರಿಂದ 15 ವರ್ಷಕ್ಕಿಂತ ಹಳೆಯದಾದ 9 ಲಕ್ಷ ವಾಹನಗಳು ಗುಜರಿಗೆ: ಗಡ್ಕರಿ

ಪ್ರಾರಂಭದಲ್ಲಿ ಶ್ರೀ ದೇವರ ವಸಂತ ಮಂಟಪದಲ್ಲಿ ಅವಭೃಥ ಪೂಜೆಯ ಬಳಿಕ ಕಾಶೀ ಮಠಾಧೀಶರಾದ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಚನ ನೆರವೇರಿತು. ಭಕ್ತರಿಂದ ಉರುಳು ಸೇವೆ ನಡೆದು ಬಳಿಕ ಶ್ರೀ ದೇವರ 5 ಪೇಟೆಗಳ ಉತ್ಸವ ಸಾವಿರಾರು ಭಜಕರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು.

ರಾತ್ರಿ ದೇವರ ಕೆರೆಯಲ್ಲಿ ಅವಭೃಥ ಸ್ನಾನ, ಧ್ವಜಾವರೋಹಣ ಮತ್ತು ಪೂಜೆ ನೆರವೇರಿತು. ಅವಭೃಥ ಉತ್ಸವದ ಅಂಗವಾಗಿ ಭಕ್ತರು ಗುಲಾಬಿ ಬಣ್ಣದ ನೀರನ್ನು ಪರಸ್ಪರ ಎರಚಿ ಸಂಭ್ರಮಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next