Advertisement

ಸೆ. 26 : ರಥಬೀದಿ ಶಾರದಾ ಮಹೋತ್ಸವ; ಶತಮಾನೋತ್ಸವದ ಹೊರೆ ಕಾಣಿಕೆ ಮೆರವಣಿಗೆ

03:57 PM Sep 24, 2022 | Team Udayavani |

ಮಂಗಳೂರು : ನಗರದ ರಥಬೀದಿ ಆಚಾರ್ಯ ಮಠ ವಠಾರದ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವ ಶತಮಾನೋತ್ಸವದ ಪ್ರಯುಕ್ತ ಬೃಹತ್‌ ಹೊರೆಕಾಣಿಕೆಯು ಸೆ.25ರ ಬೆಳಗ್ಗೆ 10.30ಕ್ಕೆ ನೆಹರೂ ಮೈದಾನದಿಂದ ಹೊರಡಲಿದೆ.

Advertisement

ವಾಹನ ಜಾಥಾದಲ್ಲಿ ಶ್ರೀ ಶಾರದಾ ಮಾತೆಗೆ ಅರ್ಪಿಸುವ ರಜತಪೀಠ, ಪ್ರಭಾವಳಿ, ಸ್ವರ್ಣ ಆರತಿ, ಸ್ವರ್ಣ ನವಿಲು, ಸ್ವರ್ಣ ವೀಣೆ, ಸ್ವರ್ಣ ಕೈಬಳೆ ಇತ್ಯಾದಿಗಳೊಂದಿಗೆ ಹೊರಟು ಕ್ಲಾಕ್‌ ಟವರ್‌, ಹಂಪನಕಟ್ಟೆ ಸಿಗ್ನಲ್‌, ಕೆ.ಎಸ್‌.ರಾವ್‌ ರಸ್ತೆ, ನವಭಾರತ ವೃತ್ತ, ಪಿವಿಎಸ್‌ ಜಂಕ್ಷನ್‌,ಎಂ.ಜಿ.ರಸ್ತೆ, ನಾರಾಯಣ ಗುರು ವೃತ್ತ, ಮಣ್ಣಗುಡ್ಡೆ, ಕುದ್ರೋಳಿ, ನ್ಯೂಚಿತ್ರಾ ರಥಬೀದಿಯಾಗಿ ಶ್ರೀ ವೆಂಕಟರಮಣ ದೇವಸ್ಥಾನ ತಲುಪಲಿರುವುದೆಂದು ಆಡಳಿತ ಮಂಡಳಿ ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ ಅವರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next