Advertisement

ರಥಬೀದಿ  ಶಾರದಾ ಮಾತೆಯ ಶೋಭಾಯಾತ್ರೆ

09:34 AM Oct 21, 2018 | |

ಮಂಗಳೂರು: ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠ ವಠಾರ
ದಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ 96ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಅ. 10ರಿಂದ 20ರ ವರೆಗೆ ವಿಜೃಂಭಣೆಯಿಂದ ಜರಗಿತು.

Advertisement

ಶನಿವಾರ ಭವ್ಯ ಶೋಭಾಯಾತ್ರೆಯೊಂದಿಗೆ ಉತ್ಸವ ಸಂಪನ್ನಗೊಂಡಿತು. ಶ್ರೀ ಶಾರದಾ ಮಾತೆಯ ಬೃಹತ್‌ ಶೋಭಾಯಾತ್ರೆ ಶ್ರೀ ಮಹಾಮ್ಮಾಯ ದೇವಸ್ಥಾನ, ಗದ್ದೆಕೇರಿ, ಕೆನರಾ ಹೈಸ್ಕೂಲ್‌ ಹಿಂಬದಿ ರಸ್ತೆಯಿಂದ ನವಭಾರತ್‌ ವೃತ್ತ, ಅಮ್ಮೆಂಬಳ ಸುಬ್ಟಾರಾವ್‌ ಪೈ ರಸ್ತೆ, ಡೊಂಗರಕೇರಿ, ನ್ಯೂ ಚಿತ್ರಾ, ಬಸವನಗುಡಿ, ಚಾಮರಗಲ್ಲಿ, ರಥಬೀದಿಯಾಗಿ ಸಾಗಿ ಬಂದು ಶ್ರೀ ಮಹಾಮ್ಮಾಯ ತೀರ್ಥದಲ್ಲಿ ಜಲಸ್ತಂಭನ (ವಿಸರ್ಜನೆ) ಮಾಡಲಾಯಿತು. ಸೇವಾ ರೂಪದಲ್ಲಿ, ಹರಕೆ ರೂಪದಲ್ಲಿ ವೇಷಧಾರಿಗಳು ತಮ್ಮ ಸೇವೆ ಸಲ್ಲಿಸಿದರು. 

ದ.ಕ. ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ರಥಬೀದಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದಲ್ಲಿ 
ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಶ್ರೀ ಶಾರದಾ ಮಾತೆಗೆ ವಿಶೇಷ ಮಂಗಳೂರು ಮಲ್ಲಿಗೆಯ ಜಲ್ಲೆ ಮುಡಿಸಿ ಭಕ್ತರ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ವರ್ಣರಂಜಿತ ಶೋಭಾಯಾತ್ರೆ ಸಾಗಿತು.

Advertisement

Udayavani is now on Telegram. Click here to join our channel and stay updated with the latest news.

Next