Advertisement

ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್‌ ಹೋಟೆಲ್‌ಗೆ ಬಂದ ರತನ್ ಟಾಟಾ

12:01 PM May 19, 2022 | sudhir |

ಮುಂಬಯಿ : ಸರಳತೆ ಹಾಗೂ ವಿನಮ್ರತೆಯ ನಡೆ-ನುಡಿ­ಯಿಂದಾಗಿ ನೆಟ್ಟಿಗರ ಮನ ಗೆದ್ದಿರುವ ಟಾಟಾ ಸಮೂಹ ಸಂಸ್ಥೆಗಳ ಧುರೀಣ ರತನ್‌ ಟಾಟಾ, ಮತ್ತೊಮ್ಮೆ ನೆಟ್ಟಿಗರ ಹೃದಯ ಮುಟ್ಟಿದ್ದಾರೆ.

Advertisement

ಬುಧವಾರದಂದು ಮುಂಬಯಿಯಲ್ಲಿರುವ ಟಾಟಾ ಕಂಪೆನಿ ಮಾಲಕತ್ವದ ತಾಜ್‌ ಹೊಟೇಲ್‌ಗೆ ತಮ್ಮ ಸಂಸ್ಥೆಯಿಂದ ಈ ಹಿಂದೆ ಹೊರತರಲಾ­ಗಿದ್ದ ಬಜೆಟ್‌ ಕಾರಾದ ಟಾಟಾ ನ್ಯಾನೋದಲ್ಲಿ ಆಗಮಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬಿಳಿ ಬಣ್ಣದ ನ್ಯಾನೋ ಕಾರಿನಲ್ಲಿ, ಯಾವುದೇ ಭದ್ರತಾ ಸಿಬಂದಿ ಇಲ್ಲದೆ ಆಗಮಿಸಿ­ದರು.

ಹೊಟೇಲ್‌ ಪ್ರವೇಶಿಸುತ್ತಿದ್ದಂತೆ ಅವರನ್ನು ಹೊಟೇಲ್‌ನ ಸಿಬಂದಿ ಸುತ್ತುವರಿದು ಅವರಿಗೆ ಭದ್ರತೆ ಒದಗಿಸಿದರು. ವೈರಲ್‌ ಭಯಾನಿ ಎಂಬ ಛಾಯಾಗ್ರಾಹಕರು ಇದಿಷ್ಟನ್ನೂ ಚಿತ್ರೀಕರಿಸಿ, ತಮ್ಮ ಇನ್‌ಸ್ಟಾ ಗ್ರಾಂನಲ್ಲಿ ಹಂಚಿ­ ಕೊಂಡಿದ್ದು, ಆ ವೀಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಬುಧವಾರ ರಾತ್ರಿಯ ಹೊತ್ತಿಗೆ 1.29 ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ. ಟಾಟಾರವರ ಸರಳ ವ್ಯಕ್ತಿತ್ವನ್ನು ನೆಟ್ಟಿಗರು ಹಾಡಿ ಕೊಂಡಾಡಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next