ಕಾಸರಗೋಡು: ಕೀಯೂರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಗೆ ಆಳೆತ್ತರದ ಅಲೆ ಅಪ್ಪಳಿಸಿ ಅದರಲ್ಲಿದ್ದ ಮೂವರು ಬೆಸ್ತರು ಸಮುದ್ರ ಪಾಲಾದಾಗ ಅವರನ್ನು ಸಾಹಸದಿಂದ ರಕ್ಷಿಸಿದ ಬೇಕಲದ ಬಬೀಶ್ ಅವರನ್ನು ರಾಷ್ಟ್ರಪತಿಯವರ ರಕ್ಷಾ ಕವಚ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
Advertisement
2021ರ ಆಗಸ್ಟ್ 21ರಂದು ಘಟನೆ ಸಂಭವಿಸಿದ್ದು, ಬೇಕಲದ ಶ್ರೀ ಕುರುಂಬಾ ಭಗವತೀ ಕ್ಷೇತ್ರ ಪರಿಸರದ ಬಬೀಶ್ ಬೆಸ್ತರ ಪ್ರಾಣ ರಕ್ಷಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದರು.