Rashtrotthana Parishat : ಚೇರ್ಕಾಡಿಯಲ್ಲಿ ಸಿಬಿಎಸ್‌ಇ ಶಾಲೆ, ಪ.ಪೂ. ಕಾಲೇಜು ಪ್ರಾರಂಭ
ಸಮಗ್ರ ಶಿಕ್ಷಣ, ಸಾಂಸ್ಕೃತಿಕ ಜಾಗೃತಿಗೆ ವಿದ್ಯಾರ್ಥಿಗಳ ಸಜ್ಜು... ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ...
Team Udayavani, Dec 13, 2024, 6:38 PM IST
ಬ್ರಹ್ಮಾವರ: ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿ ಸಂಸ್ಕಾರಯುತ, ರಾಷ್ಟ್ರನಿಷ್ಠ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣವಾಗುತ್ತಿರುವ ರಾಷ್ಟ್ರೋತ್ಥಾನ ಪರಿಷತ್‌ನಿಂದ ಉಡುಪಿ ಜಿಲ್ಲೆಯ ಚೇರ್ಕಾಡಿಯಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಪ್ರಾರಂಭವಾಗುತ್ತಿದೆ.
ಶಾಲಾ ಕಟ್ಟಡ ನಿರ್ಮಾಣ ಭರದಿಂದ ಸಾಗುತ್ತಿದ್ದು, ಬ್ರಹ್ಮಾವರ ಎಸ್.ಎಂ.ಎಸ್. ಬಳಿಯ ಮಧುವನ ಕಾಂಪ್ಲೆಕ್ಸ್‌ನಲ್ಲಿರುವ ಕಾರ್ಯಾಲಯದಲ್ಲಿ ಪ್ರಿ ಕೆ.ಜಿಯಿಂದ 6ನೇ ತರಗತಿ ವರೆಗಿನ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. 2025ರ ಮೇ ಯಲ್ಲಿ ಶಾಲಾರಂಭಗೊಳ್ಳಲಿದೆ.
ಪ.ಪೂ. ಕಾಲೇಜು ಪ್ರಾರಂಭ
ಪರಿಪೂರ್ಣ ಶಿಕ್ಷಣದ ಗುರಿಯೊಂದಿಗೆ ಪ.ಪೂ. ಕಾಲೇಜು ಪ್ರಾರಂಭಿಸಲಾಗುತ್ತಿದೆ. ಸುಸಜ್ಜಿತ ಕಟ್ಟಡ, ಅತ್ಯಾಧುನಿತ ಸೌಲಭ್ಯ, ಸಮಗ್ರ ಅಭಿವೃದ್ದಿಯ ಕಲಿಕೆಯೊಂದಿಗೆ 2025-26ರ ಶೆಕ್ಷಣಿಕ ವರ್ಷದಲ್ಲಿ ಕಾಲೇಜು ಆರಂಭಗೊಳ್ಳಲಿದೆ.
ವಿಜ್ಞಾನ ವಿಭಾಗದಲ್ಲಿ ಪಿ.ಸಿ.ಎಂ.ಬಿ./ಪಿ.ಸಿ.ಎಂ.ಸಿ., ವಾಣಿಜ್ಯ ವಿಭಾಗದಲ್ಲಿ ಎ.ಬಿ.ಇ.ಸಿ. ಆಯ್ಕೆಗಳಿವೆ. ಜತೆಗೆ ನೀಟ್, ಜೆಇಇ, ಕೆಸಿಇಟಿ, ಸಿ.ಎ, ಸಿ.ಎಸ್. ಮತ್ತು ಇತರ ಪರೀಕ್ಷೆಗಳಿಗೆ ವಿಶೇಷ ತರಬೇತಿ ದೊರೆಯಲಿದೆ.
ಸ್ಪರ್ಧಾತ್ಮಕ ಪರೀಕ್ಷೆ
ವಿದ್ಯಾರ್ಥಿಗಳನ್ನು ಪೋಷಿಸುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಅವರನ್ನು ಸಿದ್ಧಪಡಿಸುವುದು ಸಂಸ್ಥೆಯ ಗುರಿ. ವಿಜ್ಞಾನ ಮತ್ತು ಗಣಿತದ ಬಗ್ಗೆ ಉತ್ಸಾಹವನ್ನು ಹುಟ್ಟುಹಾಕುವುದು, ನಾವೀನ್ಯತೆಗಳಲ್ಲಿ ಭವಿಷ್ಯದ ನಾಯಕರಾಗಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು. ನವೀನ ಬೋಧನಾ ವಿಧಾನಗಳ ಮೂಲಕ ಪರಿಣಾಮಕಾರಿ ಸಂವಹನವನ್ನು ಬೆಳೆಸುವುದು ಮತ್ತು ವಿದ್ಯಾರ್ಥಿಗಳನ್ನು ಮುಂಬರುವ ಸವಾಲುಗಳಿಗೆ ಉತ್ತಮವಾಗಿ ಸಿದ್ಧಪಡಿಸುವುದು, ಜತೆಗೆ ಸಾಂಸ್ಕೃತಿಕ ಜಾಗೃತಿ ಮೂಡಿಸುವುದು ಸಂಸ್ಥೆಯ ಉದ್ದೇಶ.
ಫೌಂಡೇಶನ್ ಕೋರ್ಸ್
ಪರೀಕ್ಷೆಯ ಒಳನೋಟ, ವಿವರವಾದ ಕಲಿಕಾ ಸಾಮಾಗ್ರಿ, ಪಾವಿತ್ರಿಕ ಪರಿಸರ, ವೈಯಕ್ತಿಕ ಮಾರ್ಗದರ್ಶನ, ನಿಯಮಿತ ಮೌಲ್ಯಮಾಪನ, ಮುಂಚಿತ ತಯಾರಿ, ವೃತ್ತಿ ಮಾರ್ಗದರ್ಶನ, ಮಾಸಿಕ ಪರೀಕ್ಷೆ, ಅನುಭವಿ ಅಧ್ಯಾಪಕರಿಂದ ಮಾಹಿತಿ, ಸಮಸ್ಯೆ ಪರಿಹರಿಸುವ ಕೌಶಲ್ಯಗಳಿಗೆ ಸಂಸ್ಥೆಯ ಫೌಂಡೇಶನ್ ಕೋರ್ಸ್ ಸಹಕಾರಿಯಾಗಲಿದೆ. ವೈದ್ಯಕೀಯ ಆಕಾಂಕ್ಷಿಗಳಿಗೆ ದೀರ್ಘಾವ ಧಿಯ ತರಬೇತಿ, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಫೌಂಡೇಶನ್ ಕೋರ್ಸ್ ನಡೆಯಲಿದೆ. ಸ್ಕಾಲರ್‌ಶಿಪ್ ಪರೀಕ್ಷೆಯು ಅ.20ರಂದು ನಡೆಯಲಿದೆ.
ಹಾಸ್ಟೆಲ್ ವ್ಯವಸ್ಥೆ
ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಸೌಲಭ್ಯವಿದೆ. 24/7 ಭದ್ರತೆ, ವಿಶಾಲವಾದ ಕೊಠಡಿ, ಪೌಷ್ಟಿಕ ಊಟ ಮತ್ತು ಲಾಂಡ್ರಿ, ವೈದ್ಯಕೀಯ ಸಹಾಯದಂತಹ ಅನುಕೂಲಕರ ಸೇವೆಗಳೊಂದಿಗೆ ಸುರಕ್ಷಿತ ವಾತಾವರಣವನ್ನು ನೀಡುತ್ತದೆ.
ಅತ್ಯಾಧುನಿಕ ಮೂಲಸೌಕರ್ಯ
ಪ್ರಶಾಂತ ಹಾಗೂ ನಿರ್ಮಲ ವಾತಾವರಣ, ಸುರಕ್ಷಿತ ಮತ್ತು ಶಿಕ್ಷಣ ಸ್ನೇಹಿ ಪರಿಸರ, ಒಳ್ಳೆಯ ಗಾಳಿ ಬೆಳಕು ಇರುವ, ವಿದ್ಯಾರ್ಥಿ ಸ್ನೇಹಿ ವಿಶಾಲವಾದ ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನಾಧಾರಿತ ತರಗತಿ ಕೊಠಡಿ, ಸುವ್ಯವಸ್ಥಿತವಾದ ಪ್ರಯೋಗಾಲಯ, ಸುಸಜ್ಜಿತ ಗ್ರಂಥಾಲಯ, ಹೊರಾಂಗಣ ಮತ್ತು ಒಳಾಂಗಣ ಆಟದ ಮೈದಾನ- ವಾಲಿಬಾಲ್, ಥ್ರೋ ಬಾಲ್, ಅಥ್ಲೆಟಿಕ್ಸ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ಪುಟಾಣಿಗಳಿಗೆ ಪೂರಕವಾದ ಕ್ರೀಡಾ ವಲಯ ಮತ್ತು ಮರಳು ದಿಣ್ಣೆಯ ಬಾಲಕ್ರೀಡಾಂಗಣ ವ್ಯವಸ್ಥೆ, ಮಕ್ಕಳಿಗೆ ಪ್ರಕೃತಿಯಲ್ಲಿ ಕಲಿಯಲು ಅನುಕೂಲವಾಗುವಂತೆ ತೋಟಗಾರಿಕೆ, ನರ್ಸರಿ ವ್ಯವಸ್ಥೆ, ದೃಶ್ಯ ಮತ್ತು ಪ್ರದರ್ಶನ, ಕಲೆ-ಸಂಗೀತ, ನಾಟಕ, ನೃತ್ಯ ಮತ್ತು ಯೋಗ ಶಾಲೆ, ಸುರಕ್ಷತೆಗಾಗಿ ಜಿಪಿಎಸ್ ಅಳವಡಿಸಿದ ಸುಸಜ್ಜಿತ ಸಾರಿಗೆ ವ್ಯವಸ್ಥೆ ಇದೆ. ಉಡುಪಿ, ಮಣಿಪಾಲ, ಕುಂದಾಪುರ, ಮೂಲ್ಕಿ, ಹೆಬ್ರಿ, ಮಲ್ಪೆ ಮತ್ತು ಕಾರ್ಕಳದಿಂದ ಶಾಲಾ ಬಸ್ಸಿನ ವ್ಯವಸ್ಥೆ ಲಭ್ಯವಿದೆ.
ವಿಶೇಷತೆಗಳು
ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ) ಆಧಾರಿತ ಪಠ್ಯಕ್ರಮ, ಶಿಶು/ವಿದ್ಯಾರ್ಥಿ ಕೇಂದ್ರಿತ ಪಠ್ಯವಿಧಾನ, ಅರ್ಹ, ತರಬೇತಿ ಹೊಂದಿದ ಮತ್ತು ಬದ್ಧತೆ ಇರುವ ಅಧ್ಯಾಪಕ ವೃಂದ, ವಿದ್ಯಾರ್ಥಿ-ಶಿಕ್ಷಕರ ಅನುಕೂಲಕರ ಅನುಪಾತ ಹೊಂದಿತ ತರಗತಿ ವ್ಯವಸ್ಥೆ, ವೈಯಕ್ತಿಕ ಕಾಳಜಿ ಮತ್ತು ಮಾರ್ಗದರ್ಶನ, ಸಲಹೆ ಮತ್ತು ಆಪ್ತ ಸಮಾಲೋಚನೆ, ಪೋಷಕ ಸಮುದಾಯದೊಂದಿಗೆ ಉತ್ತಮವಾದ ಬಾಂಧವ್ಯ, ರಚನಾತ್ಮಕ ಸಹಪಠ್ಯ ಚಟುವಟಿಕೆಗಳು, ಕ್ರೀಡೆ ಮತ್ತು ವೃತ್ತಿಪರ ತರಬೇತಿ ಇರುತ್ತದೆ.
ಪಂಚಮುಖಿ ಶಿಕ್ಷಣ
ಮಕ್ಕಳ ಸಮಗ್ರ ವಿಕಾಸಕ್ಕಾಗಿ ದೈಹಿಕ, ಮಾನಸಿಕ, ಭಾವನಾತ್ಮಕ, ಬೌದ್ಧಿಕ, ಆಧ್ಯಾತ್ಮಿಕವೆನ್ನುವ ಪಂಚಮುಖಿ ಶಿಕ್ಷಣ ದೊರೆಯುವುದು ಸಂಸ್ಥೆಯ ವಿಶೇಷ.
ಹೆಚ್ಚಿನ ಮಾಹಿತಿಗೆ ಇ-ಮೇಲ್: info.udupi@rvkcbse.in ವೆಬ್‌ಸೈಟ್ : www.rvkcbse.in / udupi.rpuc.in ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ರಾಷ್ಟ್ರ ನಿರ್ಮಾಣ ಆಶಯ
ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಎನ್ನುವ ಆಶಯದೊಂದಿಗೆ ವಿದ್ಯಾರ್ಥಿಗಳನ್ನು ಸಮರ್ಥ, ಸುಯೋಗ್ಯ ನಾಗರಿಕನ್ನಾಗಿ ರೂಪಿಸುವುದೇ ರಾಷ್ಟ್ರೋತ್ಥಾನ ಶೈಕ್ಷಣಿಕ ಚಟುವಟಿಕೆಗಳ ಉದ್ದೇಶ. ಇಂತಹ ಶಿಕ್ಷಣದ ಮೂಲಕ ಸಮಾಜವನ್ನು ಜಾಗೃತಗೊಳಿಸುವ, ದೇಶವನ್ನು ಕಟ್ಟುವ ಕೆಲಸವನ್ನು ರಾಷ್ಟ್ರೋತ್ಥಾನ ಪರಿಷತ್ ಕಳೆದ ಹಲವು ದಶಕಗಳಿಂದ ಮಾಡಿಕೊಂಡು ಬರುತ್ತಿದೆ.
–ನಾ. ದಿನೇಶ್ ಹೆಗಡೆ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೋತ್ಥಾನ ಪರಿಷತ್
ಸುಶಿಕ್ಷಿತ ಸಮಾಜ
ಸುಶಿಕ್ಷಿತ ಸಮಾಜದ ನಿರ್ಮಾಣವೆಂಬ ಧ್ಯೇಯದೊಂದಿಗೆ ಮಗುವಿನ ಸಮಗ್ರ ಸಮತೋಲಿತ ಬೆಳವಣಿಗೆಯತ್ತ ಚಿತ್ತ ಹರಿಸಿ, ಮಗುವಿನ ಪ್ರಗತಿಯಲ್ಲಿ ಯಶಸ್ಸು ಕಾಣುವ ಗುರಿಯನ್ನು ಹೊಂದಿ ನಮ್ಮ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಸಂಸ್ಕೃತಿ, ಸಂಸ್ಕಾರ, ಮೌಲ್ಯ, ಚಿಂತನೆಗಳೊಂದಿಗೆ ಮಗುವಿನ ಪೂರ್ಣ ಅಭಿವೃದ್ದಿಯನ್ನು ಬಯಸುವ ಶಿಕ್ಷಣ ನಮ್ಮ ಸಂಸ್ಥೆಯ ಧ್ಯೇಯ.
–ಭಾಗ್ಯಶ್ರೀ ಐತಾಳ್ ಕರಂಬಳ್ಳಿ, ಪ್ರಾಂಶುಪಾಲರು, ರಾಷ್ಟ್ರೋತ್ಥಾನ ಪ.ಪೂ. ಕಾಲೇಜು
ಏನಿದು ರಾಷ್ಟ್ರೋತ್ಥಾನ ಪರಿಷತ್ ?
ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣದ ಲಕ್ಷ್ಯವನ್ನಿಟ್ಟುಕೊಂಡು 1965ರಿಂದ ಕರ್ನಾಟಕದಲ್ಲಿ ಸಕ್ರಿಯವಾಗಿರುವ ಪ್ರಮುಖ ಸ್ವಯಂಸೇವಾ ಸಂಸ್ಥೆಯಾಗಿದೆ. ಭಾರತದ ನೈಜ ಇತಿಹಾಸ, ಸಂಸ್ಕೃತಿ-ಪರಂಪರೆಗಳನ್ನು ಸಮಾಜದಲ್ಲಿ ಮತ್ತೆ ಜಾಗೃತಗೊಳಿಸಲು ರಾಷ್ಟ್ರೋತ್ಥಾನ ಸಾಹಿತ್ಯದೊಂದಿಗೆ ಪ್ರಾರಂಭವಾದ ಪರಿಷತ್‌ನ ಸಮಾಜಕಾರ್ಯ ಇಂದು ಸಾಹಿತ್ಯ, ಶಿಕ್ಷಣ, ಆರೋಗ್ಯ, ಸೇವೆ ಎಂಬ ನಾಲ್ಕು ಆಯಾಮಗಳೊಂದಿಗೆ ರಾಜ್ಯಾದ್ಯಂತ ಸಕ್ರಿಯವಾಗಿದ್ದು, 18ಕ್ಕೂ ಹೆಚ್ಚು ಪ್ರಕಲ್ಪಗಳು ಹಾಗೂ 60ಕ್ಕೂ ಮಿಕ್ಕಿ ಚಟುವಟಿಕೆಗಳಾಗಿ ಕವಲೊಡೆದಿದೆ. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆಗಳ ಸಮೂಹವಾಗಿದೆ. 2005ರಲ್ಲಿ ಮೊದಲ ಶಾಲೆ ಪ್ರಾರಂಭಗೊಂಡರೆ, ಪ್ರಸ್ತುತ ಕರ್ನಾಟಕದಾದ್ಯಂತ 17 ಕಡೆಗಳಲ್ಲಿ 15,000ಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maha Kumbh Mela: ಮೌನಿ ಅಮಾವಾಸ್ಯೆ ಶಾಹಿ ಸ್ನಾನಕ್ಕಾಗಿ ಜನಸಾಗರ…ಡ್ರೋನ್ ನಲ್ಲಿ ಸೆರೆ!
ಬೆಳ್ತಂಗಡಿ: ಸೋಮಂತ್ತಡ್ಕ ಬಳಿ ಬಸ್ ಅಪಘಾತ;ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿಗಳು,ಪ್ರಯಾಣಿಕರು
Dharwad: ಅನುದಾನ ವಾಪಸ್ ಹೋದರೆ ಅಧಿಕಾರಿಗಳಿಂದ ವಸೂಲಿ: ಲಾಡ್ ಖಡಕ್ ಸೂಚನೆ
Chikkamagaluru: ಅಕ್ರಮ ಮಣ್ಣು ಸಾಗಾಟ ಪ್ರಕರಣ; 3 ಲಾರಿ, 1 ಹಿಟಾಚಿ ವಶ
Udupi: ಫೆ. 9 ರಂದು ಡ್ರಾಯಿಂಗ್, ಮಾಸ್ಕ್ ಮೇಕಿಂಗ್ ಸ್ಪರ್ಧೆ