Advertisement

ರಾಷ್ಟ್ರೀಯ ಲೋಕ ಅದಾಲತ್‌; 1942 ಪ್ರಕರಣ ಇತ್ಯರ್ಥ

05:40 PM Aug 18, 2022 | Team Udayavani |

ಆಳಂದ: ಇಲ್ಲಿನ ನ್ಯಾಯಾಲಯದಲ್ಲಿ ಬಹುದಿನಗಳಿಂದ ಇತ್ಯರ್ಥವಾಗದೆ ಉಳಿದುಕೊಂಡಿದ್ದ ಕಕ್ಷಿದಾರರ ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪರಸ್ಪರ ರಾಜೀ ಸಂಧಾನದ ಮೂಲಕ ಇಲ್ಲಿನ ಮೂವರು ನ್ಯಾಯಾಧೀಶರು ಪ್ರತ್ಯೇಕವಾಗಿ ತಮ್ಮ ವ್ಯಾಪ್ತಿಯ ಒಟ್ಟು 1942 ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು.

Advertisement

ನ್ಯಾಯಾಲಯ ಸಭಾಂಗಣದಲ್ಲಿ ಲೋಕ ಅದಾಲತ್‌ ನಡೆಸಿದ ಹಿರಿಯ ಶ್ರೇಣಿಯ ನ್ಯಾಯಾಧೀಶ ಎಸ್‌.ಎಂ. ಅರುಟಗಿ ಹಲವು ರೀತಿಯ ಪ್ರಕರಣಗಳ ವಿಚಾರಣೆ ನಡೆಸಿ, ಸಂಧಾನ ಮೂಲಕ ಬ್ಯಾಂಕ್‌ಗಳ ಮತ್ತು ಗ್ರಾಹಕರ ನಡುವಿನ ವ್ಯಾಜಗಳು, ಸಿವಿಲ್‌ ಪ್ರಕರಣ, ಆಸ್ತಿ ಇಬ್ಭಾಗ ಪ್ರಕರಣ, ಭೂ ಕಬ್ಜೆ ಪ್ರಕರಣ, ವಾಹನ ಅಪಘಾತ ಪ್ರಕರಣಗಳು ಹೀಗೆ ಒಟ್ಟು 12 ಪ್ರಕರಣಗಳನ್ನು ಇತ್ಯರ್ಥಪಡಿಸಿದರು.

ಮತ್ತೊಂದೆಡೆ ಪ್ರಧಾನ ಸಿವಿಲ್‌ ನ್ಯಾಯಾಲಯ ಸಭಾಂಗಣದಲ್ಲಿ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪೂರ ಅವರು, ಪ್ರಕರಣ ಪೂರ್ವ ವ್ಯಾಜ್ಯಗಳ ಆಸ್ತಿ ವಿವಾದ, ಜೀವನಾಂಶ ಭತ್ಯೆ ಪ್ರಕರಣ ಹಾಗೂ ಜನನ ಮತ್ತು ಮರಣ ದಾವೆಗಳು, ಕ್ರಿಮಿನಲ್‌ ಪ್ರಕರಣ, ಎನ್‌ಐಎ ಆ್ಯಕ್ಟ್ ಪ್ರಕರಣ ಸೇರಿ 1095 ಪ್ರಕರಣ ಇತ್ಯರ್ಥಗೊಳಿಸಿದರು.

ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಕು. ಸ್ನೇಹ ಪಾಟೀಲ ವಿವಿಧ ರೀತಿಯ 835 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ಇಲ್ಲಿನ ಮೂರು ನ್ಯಾಯಾಲಯದಲ್ಲಿನ ಒಟ್ಟು ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ 12 ಮತ್ತು ಕಿರಿಯ ಶ್ರೇಣಿಯಲ್ಲಿ 1095 ಹಾಗೂ ಹೆಚ್ಚುವರಿ ನ್ಯಾಯಾಲಯದಲ್ಲಿ 835 ಪ್ರಕರಣ ಸೇರಿ ಒಟ್ಟು 1942 ಪ್ರಕರಣಗಳು ರಾಜೀಸಂಧಾನ ಮೂಲಕ ಇತ್ಯರ್ಥಗೊಂಡಿವೆ.

Advertisement

ಪ್ರಕರಣ ಇತ್ಯರ್ಥಪಡಿಸಲು ಪ್ರಧಾನ ಸಿವಿಲ್‌ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಿಕಿ ಶುಭಶ್ರೀ ಬಡಿಗೇರ, ಹೆಚ್ಚುವರಿ ಸಿವಿಲ್‌ ನಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕಿ ಜ್ಯೋತಿ ವಿ., ನ್ಯಾಯವಾದಿ ಸಂಘದ ಅಧ್ಯಕ್ಷ ನಾಗೇಶ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಕಮಲಾಕರ್‌ ವಿ. ರಾಠೊಡ, ಹಿರಿಯ ನ್ಯಾಯವಾದಿ ಎ.ಡಬ್ಲ್ಯು. ಅನ್ಸಾರಿ, ಬಿ.ಎ. ದೇಶಪಾಂಡೆ, ಸಿ.ಎನ್‌. ತಾಟಿ, ಎಸ್‌.ಎ. ಪಾಟೀಲ, ದೇವಾನಂದ ಹೋದಲೂರಕರ್‌, ಡಿ.ಎಸ್‌. ನಾಡಕರ್‌, ಎಸ್‌.ಡಿ.ಬೋಸಗೆ, ಮಹಾದೇವ ಹತ್ತಿ, ಸ್ವಾಮಿರಾವ್‌ ಚನ್ನಗುಂಡ ಹಾಗೂ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳ ಸಹಕಾರದಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next