ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿ ಭಾನುವಾರ “ಉದ್ಯಾನ ಮಹೋತ್ಸವ’ ಉದ್ಘಾಟಿಸಿದ್ದಾರೆ.
ಈ ಮೂಲಕ ಸಾರ್ವಜನಿಕರಿಗೆ ರಾಷ್ಟ್ರಪತಿ ಭವನದ ಉದ್ಯಾನಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದರ ಜತೆಗೆ “ಅಮೃತ ಉದ್ಯಾನ’ ಎಂದು ಮರು ನಾಮಕರಣಗೊಂಡಿರುವ ಐತಿಹಾಸಿಕ ಮೊಘಲ್ ಗಾರ್ಡನ್ ಅನ್ನೂ ಉದ್ಘಾಟಿಸಲಾಗಿದೆ.
ರಾಷ್ಟ್ರಪತಿ ಅವರು ಉದ್ಯಾನದ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜ.31ರಿಂದ ಮಾ.26ರ ವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ “ಅಮೃತ ಉದ್ಯಾನ’ವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಇದೆ.
ಮಾ.28ರಿಂದ 31ರ ವರೆಗೆ ವಿಶೇಷ ವರ್ಗದವರಿಗಾಗಿ ಉದ್ಯಾನವನ ತೆರೆದಿರಲಿದೆ. ರೈತರಿಗಾಗಿ ಮಾ.28, ದಿವ್ಯಾಂಗರಿಗೆ ಮಾ.29, ಪೊಲೀಸ್, ಸೇನಾಪಡೆ, ಅರೆಸೇನಾಪಡೆಯ ಸಿಬ್ಬಂದಿಗಾಗಿ ಮಾ.30, ಬಡುಕಟ್ಟು ಸಮುದಾಯದ ಮಹಿಳೆಯರು, ಮಹಿಳೆಯರಿಗಾಗಿ ಮಾ.31ರಂದು ಉದ್ಯಾನವನಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.
Related Articles
ಪ್ರಸಕ್ತ ವರ್ಷ ವಿಶೇಷವಾಗಿ ಬೆಳೆಸಲಾದ 12 ವಿಧದ ಟ್ಯುಲಿಪ್ ಗಳನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಜತೆಗೆ ಹರ್ಬಲ್ ಗಾರ್ಡನ್, ಬೊನ್ಸಾಯ್ ಗಾರ್ಡನ್, ಸೆಂಟ್ರಲ್ ಲಾನ್, ಲಾಂಗ್ ಗಾರ್ಡನ್ ಮತ್ತು ಸಕ್ಯುìಲಾರ್ ಗಾರ್ಡನ್‌ಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಂದಿನ 2 ತಿಂಗಳ ಕಾಲ ತೆರೆದು ಇರಿಸಲಾಗುತ್ತದೆ.