Advertisement

ಬೆಂಗಳೂರಿನ ವಿದ್ಯಾ ಸೇರಿ 52 ಸಾಧಕರಿಗೆ ರಾಷ್ಟ್ರ ಪಶಸ್ತಿ ಪ್ರದಾನ

09:33 PM Dec 03, 2022 | Team Udayavani |

ನವದೆಹಲಿ: ಅಂತಾರಾಷ್ಟ್ರೀಯ ದಿವ್ಯಾಂಗರ ದಿನದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿದ್ಯಾ ವೈ. ಸೇರಿದಂತೆ 52 ಮಂದಿ ದಿವ್ಯಾಂಗ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2021 ಮತ್ತು 2022ನೇ ಸಾಲಿನ ರಾಷ್ಟ್ರ ಪಶಸ್ತಿಗಳನ್ನು ಶನಿವಾರ ಪ್ರದಾನ ಮಾಡಿದರು.

Advertisement

ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಶಿಕ್ಷಣದಲ್ಲಿ ಭಾಷೆಗೆ ಸಂಬಂಧಿಸಿದ ಅಡೆತಡೆಗಳನ್ನು ನಿವಾರಿಸಲು ಮತ್ತು ದಿವ್ಯಾಂಗ ಮಕ್ಕಳಿಗೆ ಶಿಕ್ಷಣವನ್ನು ಹೆಚ್ಚು ಸುಲಭವಾಗಿಸಲು ತಂತ್ರಜ್ಞಾನದ ಗರಿಷ್ಠ ಬಳಕೆಯನ್ನು ಒತ್ತಿ ಹೇಳಿದರು.

ರಾಷ್ಟ್ರ ಪಶಸ್ತಿ ಸ್ವೀಕರಿದ ವಿದ್ಯಾ ವೈ.(29) ಅವರು, ವಿಶ್ವದಲ್ಲೇ ಕಡಿಮೆ ವೆಚ್ಚದಲ್ಲಿ ಮಕ್ಕಳಿಗಾಗಿ ಎಲೆಕ್ಟ್ರಾನಿಕ್‌ ಬ್ರೈಲ್‌ ಬುಕ್‌ ರೀಡಿಂಗ್‌ ಸಲ್ಯೂಷನ್‌ ಅಭಿವೃದ್ಧಿಪಸಿಡಿದ್ದಾರೆ. ದೃಷ್ಟಿ ವಿಶೇಷಚೇತನರಾಗಿರುವ ದಿವ್ಯಾ, ಡಿಜಿಟಲ್‌ ಸೊಸೈಟಿನಲ್ಲಿ ಎಂಎಸ್‌ಸಿ ಪಡೆದಿದ್ದಾರೆ.

2017ರಲ್ಲಿ ಐಐಐಟಿ-ಬೆಂಗಳೂರಿನ ಇನ್ನೋವೇಶನ್‌ ಸೆಂಟರ್‌ನಲ್ಲಿ ವಿಷನ್‌ ಎಂಪವರ್‌(ವಿಇ) ಸ್ಥಾಪಿಸಿದ್ದಾರೆ. ಇದೇ ರೀತಿ ಇತರೆ 51 ದಿವ್ಯಾಂಗ ಸಾಧಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next