ಮುಂಬಯಿ: ಸೌತ್ ಬ್ಯೂಟಿ ರಶ್ಮಿಕಾ ಮಂದಣ್ಣ ಅವರಿಗೆ ವಂಚನೆಯಾಗಿದೆ ಎನ್ನುವ ಸುದ್ದಿಯೊಂದನ್ನು ಕೆಲ ಮಾಧ್ಯಮಗಳು ಇತ್ತೀಚೆಗೆ ವರದಿ ಮಾಡಿತ್ತು. ಇದೀಗ ಈ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ 80 ಲಕ್ಷ ರೂ.ಯ ವಂಚನೆಯಾಗಿದೆ. ನಟಿಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಅವರಿಂದ 80 ಲಕ್ಷ ರೂ. ವಂಚನೆಯಾಗಿದೆ. ವಂಚನೆಎಸಗಿದ ಬಗ್ಗೆ ಗೊತ್ತಾದ ಕೂಡಲೇ ನಟಿ ಮ್ಯಾನೇಜರ್ ನನ್ನು ವಜಾಗೊಳಿಸಿದ್ದಾರೆ ಎಂದು ಬಾಲಿವುಡ್ ವೆಬ್ ಸೈಟ್ ವೊಂದು ವರದಿ ಮಾಡಿತ್ತು.
ಇದನ್ನೂ ಓದಿ: ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನ: ಇರಾನ್‌ನಲ್ಲಿ ಭಾರತೀಯ ಮೂಲದ ದಂಪತಿ ಒತ್ತೆಯಾಳು
ರಶ್ಮಿಕಾ ಮಂದಣ್ಣ ಅವರಿಗೆ ಅವರ ಮ್ಯಾನೇಜರ್ 80 ಲಕ್ಷ ರೂ. ವಂಚಿಸಿದ್ದಾರೆ. ಅವರನ್ನು ವಜಾಗೊಳಿಸಿದ್ದಾರೆ ಎನ್ನುವುದು ಸುಳ್ಳು ಸುದ್ದಿ. ನಟಿಯ ದಕ್ಷಿಣದ ಮ್ಯಾನೇಜರ್ ದೀರ್ಘಕಾಲದಿಂದ ನಟಿಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಅವರು ವೈಯಕ್ತಿಕ ಕಾರಣದಿಂದ ಕೆಲಸವನ್ನು ಬಿಡಲು ನಿರ್ಧರಿಸಿದ್ದಾರೆ ಅಷ್ಟೇ. ಇಲ್ಲಿ ಯಾವುದೇ ವಂಚನೆ ಆಗಿಲ್ಲ ಎಂದು ನಟಿಯ ಆಪ್ತ ಮೂಲಗಳು ದೃಢಪಡಿಸಿದೆ.
ರಶ್ಮಿಕಾ ಮಂದಣ್ಣ ,ರಣ್ಬೀರ್ ಕಪೂರ್ ಅವರ ʼಅನಿಮಲ್ʼ ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಈ ಚಿತ್ರವನ್ನು ಸಂದೀಪ್ ರೆಡ್ಡಿ ವಂಗ ಅವರು ನಿರ್ದೇಶನ ಮಾಡುತ್ತಿದ್ದಾರೆ.