Advertisement

ಕನ್ನಡದ ಸಿನಿಮಾಗಳಲ್ಲಿ ನಟಿಸಲು ಸಮಯವಿಲ್ಲ : ನಟಿ ರಶ್ಮಿಕಾ ಮಂದಣ್ಣ

05:49 PM Sep 21, 2021 | Team Udayavani |

ಬೆಂಗಳೂರು : ಕರ್ನಾಟಕದವರಾದ ಹಾಗೂ ಸದ್ಯ ಬಹುಭಾಷಾ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಕನ್ನಡಿಗರ ಹಾಗೂ ಕನ್ನಡ ಸಿನಿಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಮಗೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲು ಸಮಯ ಇಲ್ಲ ಎಂದಿದ್ದಾರೆ.

Advertisement

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಈ ಬಗ್ಗೆ ಮಾತನಾಡಿದ್ದಾರೆ. ತೆಲುಗು ಮತ್ತು ಹಿಂದಿ ಸಿನಿಮಾಗಳಿಗಾಗಿ ಡೇಟ್ಸ್​ ಹೊಂದಿಸಲು ಕಷ್ಟ ಆಗುತ್ತಿದೆ. ಈ ಪ್ರಾಜೆಕ್ಟ್​ಗಳಿಗಾಗಿಯೇ ಸಾಕಷ್ಟು ಸಮಯ ಮೀಸಲಿಟ್ಟಿದ್ದೇನೆ. ಜೊತೆಗೆ ತಮಿಳು ಸಿನಿಮಾ ಕೂಡ ಮಾಡುತ್ತಿದ್ದೇನೆ. ಇದರ ನಡುವೆ ಕನ್ನಡ ಸಿನಿಮಾವನ್ನೂ ಮಾಡಿದರೆ ವರ್ಷದ 365 ದಿನವೂ ಸಾಕಾಗುವುದಿಲ್ಲ ಎಂದು ಅವರು ಹೇಳಿದ್ದಾರಂತೆ.

ರಶ್ಮಿಕಾ ಮಂದಣ್ಣ ಅವರು ಈ ಹಿಂದೆಯೂ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದರು. ಕನ್ನಡದ ಚಿತ್ರ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ ನಂತರದ ದಿನಗಳಲ್ಲಿ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದರು. ಪರಭಾಷೆ ಸಿನಿಮಾಗಳಲ್ಲಿ ಬ್ಯಝಿಯಾದ ನಂತರ ಕನ್ನಡ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಆರೋಪ ಇವರ ವಿರುದ್ಧ ಕೇಳಿ ಬಂದಿತ್ತು. ಮಂದಣ್ಣ ಕೊನೆಯದಾಗಿ ನಟಿಸಿದ್ದ ಕನ್ನಡದ ಸಿನಿಮಾ ‘ಪೊಗರು’. ಇದಕ್ಕೂ ಮೊದಲು ಯಜಮಾನ,ಅಂಜನಿ ಪುತ್ರ ಹಾಗೂ ಕಿರಿಕ್ ಪಾರ್ಟಿಗಳಲ್ಲಿ ನಟಿಸಿದ್ದರು. ಸದ್ಯಕ್ಕೆ ಅವರು ಕನ್ನಡದ ಯಾವ ಚಿತ್ರದಲ್ಲಿಯೂ ನಟಿಸುತ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಪ್ರಶ್ನೆಗೆ ಅವರು ‘ಸಮಯ ಇಲ್ಲ’ ಎನ್ನುವ ಉತ್ತರ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next