Advertisement

ಪ್ರತಿನಿತ್ಯ ಈ ಕಾರಣದಿಂದ ಮನೆ ಕೆಲಸದಾಕೆಯ ಪಾದವನ್ನು ಸ್ಪರ್ಶಿಸುತ್ತಾರೆ ಅಂತೆ ನಟಿ ರಶ್ಮಿಕಾ

02:48 PM Mar 23, 2023 | Team Udayavani |

ಮುಂಬಯಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಟ್ರೆಂಡಿಂಗ್‌ ಸ್ಟಾರ್‌ ಗಳಲ್ಲಿ ಒಬ್ಬರು. ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಆಗಿರುತ್ತಾರೆ. ನಗುಮುಖದಿಂದಲೇ ಅಭಿಮಾನಿಗಳೊಂದಿಗೆ ಬೆರೆಯುತ್ತಾರೆ.

Advertisement

ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ತನ್ನ ವ್ಯಕ್ತಿತ್ವ ಹಾಗೂ ದಿನಚರಣೆಯ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಅವರು ಆಡಿದ ಒಂದು ಮಾತಿನಿಂದ ಕೊಡಗಿನ ಬೆಡಗಿ ಮತ್ತೆ ಸುದ್ದಿ ಆಗಿದ್ದಾರೆ.

ಇದನ್ನೂ ಓದಿ: ಐಪಿಎಲ್ ಆರಂಭಕ್ಕೆ ಮೊದಲೇ ಪಂಜಾಬ್ ಕಿಂಗ್ಸ್ ಗೆ ಆಘಾತ; ಸ್ಟಾರ್ ಕ್ರಿಕೆಟರ್ ಔಟ್

“ನನಗೆ ಜೀವನದಲ್ಲಿ ಸಣ್ಣ ವಿಚಾರಗಳು ಕೂಡ ಮಹತ್ವದಾಗುತ್ತದೆ. ನಾನು ಪ್ರತಿನಿತ್ಯ ನನ್ನ ಸ್ನೇಹಿತರು, ಸಾಕು ಪ್ರಾಣಿಗಳೊಂದಿಗೆ ದಿನಕಳೆಯುತ್ತೇನೆ ಅದು ನನಗೆ ಖುಷಿ ಕೊಡುತ್ತದೆ. ಮಾತುಗಳು ಮುಖ್ಯ ಏಕಂದರೆ ಅದು ಸಂತಸವನ್ನು ನೀಡುತ್ತದೆ ಅಥವಾ ಮನಸ್ಸಿಗೆ ನೋವನ್ನೂ ಮಾಡಬಹುದು. ನನಗೆ ಯಾರಾದರೂ ಏನಾದರೂ ಹೇಳಿದಾಗ, ಅದು ಮನಸ್ಸಿಗೆ ತಟ್ಟಿದರೆ ಅದನ್ನು ನಾನು ಡೈರಿಯಲ್ಲಿ ಬರೆದಿಡುತ್ತೇನೆ. ನನಗೆ ಮನೆಗೆ ಹಿಂತಿರುಗಿ, ಪ್ರತಿಯೊಬ್ಬರ ಪಾದಗಳನ್ನು ಗೌರವದಿಂದ ಸ್ಪರ್ಶಿಸುವ ಅಭ್ಯಾಸವಿದೆ. ನಾನು ನನ್ನ ಮನೆ ಕೆಲಸದವಳ ಪಾದವನ್ನು ಸ್ಪರ್ಶಿಸುತ್ತೇನೆ. ನಾನು ಎಲ್ಲರನ್ನೂ ಸಮಾನವಾಗಿ ನೋಡಲು ಇಷ್ಟಪಡುತ್ತೇನೆ. ಹಾಗೆ ಮಾಡಿದಾಗ ಒಬ್ಬ ವ್ಯಕ್ತಿಯಾಗಿ ನಾನು ಯಾರು ಎಂಬುದು ಗೊತ್ತಾಗುತ್ತದೆ” ಎಂದು ʼಬಜಾರ್‌ ಇಂಡಿಯಾʼ ಕ್ಕೆ ಹೇಳಿದ್ದಾರೆ.

ಇತ್ತೀಚೆಗಷ್ಟೇ ʼಮಿಷನ್‌ ಮಜ್ನುʼ ಚಿತ್ರದಲ್ಲಿ ಕಾಣಿಸಿಕೊಂಡ ರಶ್ಮಿಕಾ ರಣ್ಬೀರ್‌ ಕಪೂರ್‌ ಅವರ ʼಆ್ಯನಿಮಲ್‌ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼಪುಷ್ಪ-2ʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next