ಹೈದರಾಬಾದ್: ವಿಜಯ್ ದೇವರಕೊಂಡ (Vijay Deverakonda) ಇತ್ತೀಚೆಗೆ ಮದುವೆ ವಿಚಾರದ ಬಗ್ಗೆ ಮಾತನಾಡಿದ ಬಳಿಕ ರಶ್ಮಿಕಾ ಮಂದಣ್ಣ (Rashmika Mandanna) ಜತೆಗಿನ ರಿಲೇಷನ್ ಬಗ್ಗೆ ಮತ್ತೊಮ್ಮೆ ಸುದ್ದಿಯಾಗಿದೆ. ಎಲ್ಲಿಯವರೆಗೆ ಅಂದರೆ ಇಬ್ಬರು ಶೀಘ್ರದಲ್ಲಿ ಮದುವೆ ಬಗ್ಗೆ ಅನೌನ್ಸ್ ಮಾಡಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ವಿಜಯ್ – ರಶ್ಮಿಕಾ ʼ ಗೀತಾ ಗೋವಿಂದಂ’, ʼ ಡಿಯರ್ ಕಾರ್ಮೆಡ್ʼ ಸಿನಿಮಾದ ಬಳಿಕ ಆತ್ಮೀಯ ಸ್ನೇಹಿತರಾಗಿದ್ದಾರೆ. ಬಹುತೇಕ ಕಡೆ ಇಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ – ದೇವರಕೊಂಡ ಲಂಚ್ ಡೇಟ್‌ನಲ್ಲಿರುವ ಲೇಟೆಸ್ಟ್ ಫೋಟೋ ವೈರಲ್ ಆಗಿದೆ.
ಈ ಫೋಟೋ ವೈರಲ್ ಆದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಮಾತನಾಡಿರುವುದು ದೇವರಕೊಂಡ ಜತೆಗಿನ ರಿಲೇಷನ್ ಶಿಪ್ ಬಗ್ಗೆ ಪುಷ್ಠಿ ನೀಡುವಂತಿದೆ.
ದೇವರಕೊಂಡ ಸಂದರ್ಶನವೊಂದರಲ್ಲಿ ಇತ್ತೀಚೆಗೆ ನನಗೆ 35 ವರ್ಷ ನಾನು ಸಿಂಗಲ್ ಆಗಿಲ್ಲವೆಂದಿದ್ದರು. ಆ ಮೂಲಕ ತಾವು ರಿಲೇಷನ್ ಶಿಪ್‌ನಲ್ಲಿರುವುದನ್ನು ದೃಢಪಡಿಸಿದ್ದರು.
ಇದೀಗ ರಶ್ಮಿಕಾ ಕೂಡ ತಾವು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಹೇಳಿರುವ ಮಾತು ವೈರಲ್ ಆಗಿದೆ.
ನವೆಂಬರ್ 24 ರಂದು ಚೆನ್ನೈನಲ್ಲಿ ನಡೆದ ʼಪುಷ್ಪ 2ʼ (Pushpa 2) ಪ್ರೀ- ರಿಲೀಸ್ ಇವೆಂಟ್ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ.
ʼಗೀತಾ ಗೋವಿಂದಂʼ ಸಿನಿಮಾ ನನಗೆ ಸ್ಪೆಷೆಲ್ ಸಿನಿಮಾವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ನನಗೆ ಯಾವ ಬಂಗಲೆಯೂ ಇಲ್ಲ, ಬಾಡಿಗೆ ಮನೆಯಲ್ಲಿದ್ದೇನೆ ಎಂದು ನಿರೂಪಕ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇನ್ನು ಕೊನೆಯದಾಗಿ ನಿಮ್ಮನ್ನು ಮದುವೆ ಆಗುವ ಹುಡುಗ ಸಿನಿಮಾ ರಂಗದವರಾ ಅಥವಾ ಬೇರೆ ಕ್ಷೇತ್ರದವರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ರಶ್ಮಿಕಾ ನಾಚುತ್ತಲೇ “ಇದು ಎಲ್ಲರಿಗೂ ಗೊತ್ತಿರುವ ವಿಚಾರ, ನನಗೆ ಗೊತ್ತು ನೀವೆಲ್ಲಾ ಇದೇ ಉತ್ತರಕ್ಕೆ ಕಾಯ್ತಾ ಇದ್ದೀರಾ ಅಂಥ” ಎಂದಿದ್ದಾರೆ.
ರಶ್ಮಿಕಾ ಅವರ ಜಾಣ್ಮೆಯ ಮಾತನ್ನು ಕೇಳಿ ಅಲ್ಲು ಅರ್ಜುನ್, ಶ್ರೀಲೀಲಾ ಜೋರಾಗಿ ನಕ್ಕಿದ್ದಾರೆ.
ಸದ್ಯ ಅವರು ವೇದಿಕೆಯಲ್ಲಿ ಆಡಿದ ಮಾತುಗಳು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ.
ಇದೇ ಡಿ.5 ರಂದು ʼಪುಷ್ಪ-2ʼ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.