ಮುಂಬಯಿ: ಬಣ್ಣದ ಲೋಕದಲ್ಲಿ ಗಾಸಿಪ್ ಗಳು ಹರಿದಾಡುತ್ತಲೇ ಇರುತ್ತವೆ. ಬ್ರೇಕಪ್, ಡೇಟಿಂಗ್ ಗಾಸಿಪ್ ಗಳು ತುಸು ಹೆಚ್ಚೇ ಹರಿದಾಡುತ್ತವೆ. ಈ ವಿಷಯಗಳನ್ನೇ ಫ್ಯಾನ್ಸ್ ಗಳು ಕೆಲವೊಮ್ಮೆ ವೈರಲ್ ಮಾಡುವುದುಂಟು.
ನಟಿ ರಶ್ಮಿಕಾ ಮಂದಣ್ಣ ,ನಟ ವಿಜಯ್ ದೇವರಕೊಂಡ 2018 ರಲ್ಲಿ ʼʼಗೀತ ಗೋವಿಂದಂʼʼ , 2019 ರಲ್ಲಿ ತೆರೆಕಂಡ “ಡಿಯರ್ ಕಾಮ್ರೇಡ್” ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇಬ್ಬರ ನಡುವಿನ ಕೆಮೆಸ್ಟ್ರಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಸಿನಿಮಾದ ಬಳಿಕ ಅನೇಕ ಬಾರಿ ರಶ್ಮಿಕಾ – ವಿಜಯ್ ದೇವರಕೊಂಡ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಹಬ್ಬಿತ್ತು. ಇತ್ತೀಚೆಗೆ ಮಾಲ್ಡೀವ್ಸ್ ಗೆ ಇಬ್ಬರು ಒಟ್ಟಾಗಿಯೇ ಹೋಗಿದ್ದರು ಎಂದು ಫ್ಯಾನ್ಸ್, ಸೆಲೆಬ್ರಿಟಿಗಳ ಫೋಟೋಗಳನ್ನು ನೋಡಿಯೇ ಚರ್ಚಾ ವಿಷಯವನ್ನಾಗಿ ಮಾಡಿದ್ದರು.
ಈ ನಡುವೆ ರಶ್ಮಿಕಾ – ವಿಜಯ್ ದೇವರಕೊಂಡ ಮದುವೆಯಾಗಿರುವ ಲುಕ್ ನಲ್ಲಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲಿಯವರೆಗೆ ಅಂದರೆ ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಕೆಲವರು ಗಾಸಿಪ್ ಮಾಡುತ್ತಿದ್ದಾರೆ. ವೈರಲ್ ಆಗುತ್ತಿರುವ ಬೆನ್ನಲ್ಲೇ ಅಭಿಮಾನಿಯೊಬ್ಬ ಫೋಟೋ ಶಾಪ್ ನಲ್ಲಿ ಎಡಿಟ್ ಮಾಡಿದ ಫೋಟೋವೆಂದು ಗೊತ್ತಾಗಿದೆ.
Related Articles
ಈ ಹಿಂದೆ ʼಕಾಫಿ ವಿತ್ ಕರಣ್ʼ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಮಾತನಾಡಿ ನಾವಿಬ್ಬರೂ ಒಟ್ಟಿಗೆ ಎರಡೂ ಸಿನಿಮಾ ಮಾಡಿದ್ದೇವೆ. ಅವಳು ನನಗೆ ಇಷ್ಟ. ಆಕೆ ನನ್ನ ಒಳ್ಳೆಯ ಸ್ನೇಹಿತೆ ಎಂದಿದ್ದರು.
ಇತ್ತೀಚೆಗೆ ವಿಜಯ್ ದೇವರಕೊಂಡ ಅವರ ʼಲೈಗರ್ ʼ ಸಿನಿಮಾಕ್ಕೆ ದೊಡ್ಡ ಸೋಲಾಗಿತ್ತು. ರಶ್ಮಿಕಾ ಮಂದಣ್ಣ ಅಮಿತಾಭ್ ಬಚ್ಚನ್ ರೊಂದಿಗೆ ಬಂದ ʼಗುಡ್ ಬೈʼ ಅಷ್ಟು ಕಮಾಲ್ ಮಾಡಿರಲಿಲ್ಲ.
ಸದ್ಯ ರಶ್ಮಿಕಾ ಮಂದಣ್ಣ ʼಪುಷ್ಪ-2ʼ, ʼವಾರಿಸುʼ, ಆ್ಯನಿಮಲ್ʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡ ʼಜನಗಣಮನʼ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.