Advertisement

ರಶೀದ್‌ ಗೂಗ್ಲಿಗೆ ಹಾರ್ದಿಕ್‌ ದಿಗಿಲು

06:00 AM Apr 26, 2018 | Team Udayavani |

ಮುಂಬೈ: ವಿಶ್ವ ಖ್ಯಾತಿಯ ಬೌಲರ್‌ ರಶೀದ್‌ ಖಾನ್‌ ಮುಂಬೈ ಇಂಡಿಯನ್ಸ್‌ ವಿರುದ್ಧದ ಮಂಗಳವಾರದ ಪಂದ್ಯದಲ್ಲಿ ಅಮೋಘ ಬೌಲಿಂಗ್‌ ದಾಳಿ ಸಂಘಟಿಸಿದ್ದರು. ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ ಕೇವಲ 11 ರನ್‌ ನೀಡಿದ ಅವರು 2 ಅಮೂಲ್ಯ ವಿಕೆಟ್‌ ಕಿತ್ತು ಹೈದರಾಬಾದ್‌ 31 ರನ್ನಿನಿಂದ ಈ ಅಲ್ಪ ಮೊತ್ತದ ಪಂದ್ಯವನ್ನು ಗೆಲ್ಲಲು ನೆರವಾಗಿದ್ದರು. 

Advertisement

ಹೈದರಾಬಾದ್‌ನ 118 ರನ್ನಿಗೆ ಉತ್ತರವಾಗಿ ಬ್ಯಾಟಿಂಗ್‌ ನಡೆಸಿದ ಹಾಲಿ ಚಾಂಪಿಯನ್‌ ಮುಂಬೈ ಪ್ರತಿಯೊಂದು ರನ್ನಿಗಾಗಿ ಬಹಳಷ್ಟು ಒದ್ದಾಟ ನಡೆಸಿತು. ಥಂಪಿ, ಕೌಲ್‌, ಸಂದೀಪ್‌, ನಬಿ, ಶಕಿಬ್‌ ಮತ್ತು ರಶೀದ್‌ ಉತ್ಕೃಷ್ಟ ಮಟ್ಟದ ದಾಳಿ ಸಂಘಟಿಸಿದ್ದರಿಂದ ಮುಂಬೈ ನಲುಗಿತು. ಒಂದರ ಹಿಂದೆ ಒಂದರಂತೆ ವಿಕೆಟ್‌ ಉರುಳುತ್ತ ಹೋಯಿತು. 18.4 ಓವರ್‌ಗಳಲ್ಲಿ 87 ರನ್ನಿಗೆ ಆಲೌಟಾಗಿ ಶರಣಾಯಿತು.

ಪಂದ್ಯಶ್ರೇಷ್ಠ ಪ್ರಶಸ್ತಿ ಪುರಸ್ಕೃತ ರಶೀದ್‌ ಅವರ ಗೂಗ್ಲಿ ಎಸೆತವೊಂದು ಮುಂಬೈಯ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯರನ್ನು ದಿಗಿಲುಗೊಳಿಸಿತು. ಈ ಗೂಗ್ಲಿ ಎಸೆತ ಸ್ವಲ್ಪದರಲ್ಲಿ ಬೈಲ್ಸ್‌ ಹಾರಿಸಲು ವಿಫ‌ಲವಾಗಿತ್ತು. ಇದನ್ನು ಗಮನಿಸುತ್ತಲೇ ಇಬ್ಬರೂ ಆಟಗಾರರು ನಗುವಿನಿಂದಲೇ ತಮ್ಮ ಖುಷಿಯನ್ನು ಹಂಚಿಕೊಂಡರು. 

ಹೈದರಾಬಾದ್‌ ತಂಡವು 9 ಕೋಟಿ ರೂ.ಗಳಿಗೆ ರಶೀದ್‌ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. 2017ರ ಐಪಿಎಲ್‌ನಲ್ಲಿ ಹೈದರಾಬಾದ್‌ ತಂಡವು 4 ಕೋಟಿ ರೂ. ನೀಡಿ ರಶೀದ್‌ ಅವರನ್ನು ಖರೀದಿಸಿತ್ತು. ಆಡಿದ 14 ಪಂದ್ಯಗಳಿಂದ 17 ವಿಕೆಟ್‌ ಉರುಳಿಸಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next