Advertisement

ರಸಾಯನಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ದಶಮಾನೋತ್ಸವ

10:31 AM Feb 16, 2018 | |

ನವಿಮುಂಬಯಿ: ನಮ್ಮ ಜನ್ಮಭೂಮಿಯಾದ ತುಳುನಾಡೆಂದರೆ ಅದೊಂದು ವಿಶೇಷವಾಗಿರುವ ಪುಣ್ಯ ಭೂಮಿಯಾಗಿದೆ. ದೈವಾರಾಧನೆ, ನಾಗಾರಾಧನೆ, ಕಲೆ, ಸಂಸ್ಕೃತಿಗಳ ಅನನ್ಯ ನೆಲೆವೀಡಾದ ಈ ಮಣ್ಣಿನಿಂದ ಬಂದ  ನಾವು ಎÇÉೇ ನೆಲೆಸಿದರೂ ನಮ್ಮ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಕಾಯಕದೊಂದಿಗೆ ನಮ್ಮ ಅಸ್ತಿತ್ವವನ್ನು ಸಾರುತ್ತಾ ಬಂದಿದ್ದು ರಾಸಾಯನಿಯ ಈ ಪರಿಸರದ ತುಳುವರೆಲ್ಲರೂ ಸಂಘಟನೆಯ ಮೂಲಕ ಒಗ್ಗಟ್ಟಿನಿಂದ  ಕಳೆದ ಹತ್ತು ವರ್ಷಗಳಿಂದ ನಿಸ್ವಾರ್ಥವಾಗಿ ಮಾಡುತ್ತಿರುವ ಸೇವಾ ಕಾರ್ಯಗಳು ಮಾದರಿಯಾಗಿವೆೆ. ಯಾರೇ ಕಷ್ಟದಲ್ಲಿರಲಿ ಅವರ ನೋವಿಗೆ ಸ್ಪಂದಿಸುವ ದೊಡ್ಡ ಮಾನವೀಯ ಗುಣ ಸಂಘದ ಕಾರ್ಯಕರ್ತರಲ್ಲಿದೆ ಎಂದು ಪನ್ವೇಲ್‌ ಮಹಾ ನಗರಪಾಲಿಕೆಯ ನಗರ ಸಂತೋಷ್‌ ಜಿ. ಶೆಟ್ಟಿ ನುಡಿದರು.

Advertisement

ಅವರು ಫೆ. 10 ರಂದು ರಸಾಯನಿಯ ಮೊಹೋ ಪಾಡದ ಪ್ರಿಯಾ ಸ್ಕೂಲ್‌ ಮೈದಾನದಲ್ಲಿ ನಡೆದ ರಸಾಯನಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ದಶಮಾನೋತ್ಸವದ ದಿ|  ಅಶೋಕ್‌ ಶೆಟ್ಟಿ ವೇದಿಕೆಯಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಸಂಸ್ಥೆಯೊಂದನ್ನು ಆರಂಭಿಸುವುದು ಸುಲಭ ಆದರೆ ಜವಾಬ್ದಾರಿಯರಿತು ಸಂಘದ ಉದ್ದೇಶವನ್ನು ಸಾರ್ಥಕಗೊಳಿಸುತ್ತಾ ಸಾಗುವುದು ಕಷ್ಟ ಸಾಧ್ಯವಾಗಿದೆ. ಆದರೆ ಈ  ಸಂಸ್ಥೆ ಹತ್ತು ವರ್ಷಗಳನ್ನು ಯಶಸ್ವಿಯಾಗಿ  ಪೂರೈಸುತ್ತಾ ಪರಿಸರದಲ್ಲಿರುವ ತುಳು-ಕನ್ನಡಿಗರಿಗೆ ಬಡ ಮಕ್ಕಳ ಶಿಕ್ಷಣಕ್ಕಾಗಿ ನೆರವು, ಅನಾರೋಗ್ಯ ಪೀಡಿತರಿಗೆ ನೆರವು ಮುಂತಾದ ಸಾಮಾಜಿಕ ಕಾರ್ಯಗಳೊಂದಿಗೆ ಊರಿನ ಸಂಸ್ಕೃತಿಯನ್ನು ಪರಿಚಯಿಸುವ ಯಕ್ಷಗಾನ, ನಾಟಕ, ಜಾದೂ, ಭಜನಾ ಕಾರ್ಯಕ್ರಮಗಳನ್ನು ಪ್ರತೀವರ್ಷ ಆಯೋಜಿಸುತ್ತಾ ಜನರ ಪ್ರೀತಿ ವಿಶ್ವಾಸಗಳನ್ನು ಗಳಿಸಿದ್ದು ಇದೀಗ ದಶಮಾನೋತ್ಸವ ಸಂಭ್ರಮದಲ್ಲಿ ಭಾಗವಹಿಸಿರುವುದು ಅತೀವ ಆನಂದವನ್ನು ನೀಡಿದೆ. ಈ ಸಂಸ್ಥೆಗೆ ಸ್ವಂತವಾದ ಜಾಗವನ್ನು ಖರೀದಿಸಲು ಮುಂದಾಗಿದ್ದು ಪ್ರತಿಯೊಬ್ಬರೂ ತಮ್ಮಿಂದಾದ ನೆರವನ್ನು ನೀಡಿ ಸಹಕರಿಸಬೇಕಾಗಿದೆ. ನಮ್ಮ ತುಳು ಭಾಷೆ, ಸಂಸ್ಕೃತಿಯ ಪೋಷಣೆಯೊಂದಿಗೆ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಈ ಸಂಸ್ಥೆ  ಭವಿಷ್ಯದಲ್ಲಿ ಉತ್ತರೋತ್ತರ ಪ್ರಗತಿಯನ್ನು ಕಾಣುವಂತಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪುಣೆ ತುಳುಕೂಟದ ಅಧ್ಯಕ್ಷರಾದ ತಾರಾನಾಥ ಕೆ ರೈ ಮೇಗಿನಗುತ್ತು ಮಾತನಾಡಿ, ಸಂಸ್ಥೆಯ ಹೆಸರೇ ಸೂಚಿಸುವಂತೆ ಸಂಘದ ಉದ್ದೇಶವನ್ನು ನಾವು ಅರಿಯಬಹುದಾಗಿದೆ. ಹತ್ತು ವರ್ಷಗಳಿಂದ ಪ್ರಾಮಾಣಿಕವಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ ಈ ಸಂಸ್ಥೆ ಮುಂದೆ ಬೆಳ್ಳಿ, ಸುವರ್ಣ ಸಂಭ್ರಮವನ್ನು ಕಾಣುವಂತಾಗಲಿ. ನಮ್ಮ ಮಕ್ಕಳನ್ನು ಕೇವಲ ಅಂಕಗಳಿಕೆಯ ಮಾನದಂಡಕ್ಕೆ ಸೀಮಿತಗೊಳಿಸದೆ  ಜೀವನದಲ್ಲಿ  ಸಂಸ್ಕಾರವಂತರಾಗಿ ಬಾಳಲು ಹೆತ್ತವರು ಕಲಿಸಬೇಕಾಗಿದೆ. ನಮ್ಮ ತುಳು ಭಾಷೆಯನ್ನು ಅಗತ್ಯವಾಗಿ ಮಕ್ಕಳಿಗೆ ಬಾಲ್ಯದಲ್ಲಿ ಕಲಿಸಬೇಕಾಗಿದೆ. ಭಾಷೆ ಕಲಿತರೆ ಸಂಸ್ಕೃತಿ ಉಳಿಯುವಂತಾಗುತ್ತದೆ ಎಂದರು.

ವೇದಿಕೆಯಲ್ಲಿ  ಐರೋಲಿ ವೈಷ್ಣವಿ ಕ್ಯಾಟರರ್ಸ್‌ನ ನಾಗೇಶ್‌ ಶೆಟ್ಟಿ, ಪನ್ವೇಲ್‌ ಕರ್ನಾಟಕ ಸಂಘದ ಅಧ್ಯಕ್ಷರಾದ ಡಿ. ಎಸ್‌. ಶೆಟ್ಟಿ, ಭಾರತ್‌ ಸೇವಾಶ್ರಮ ಬಂಟ್ವಾಳದ ಈಶ್ವರ್‌ ಭಟ್‌, ಪುಣೆ ತುಳುಕೂಟದ ಪಿಂಪ್ರಿ ಚಿಂಚಾÌಡ್‌ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ನಿತಿನ್‌ ಶೆಟ್ಟಿ ನಿಟ್ಟೆ, ಸಂಘದ ಅಧ್ಯಕ್ಷರಾದ ಮಹಾಬಲ ಟಿ. ಶೆಟ್ಟಿ, ಕಾರ್ಯಾಧ್ಯಕ್ಷ ಗಂಗಾಧರ ಸಿ. ಆಳ್ವ, ಉಪಾಧ್ಯಕ್ಷರಾದ ಯಾದವ್‌ ಆರ್‌. ಸುವರ್ಣ, ರವೀಂದ್ರ ಎಸ್‌. ಆಳ್ವ, ಕೋಶಾಧಿಕಾರಿ ಸುಧಾಕರ ವೈ. ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭ  ಭಾರತ್‌ ಸೇವಾಶ್ರಮ ಬಂಟ್ವಾಳದ ಈಶ್ವರ್‌ ಭಟ್‌, ಲಯನ್‌ ಕಿಶೋರ್‌ ಡಿ. ಶೆಟ್ಟಿ, ಕಿರುತೆರೆಯ ಕಲಾವಿದ ಮನ್ವಿತ್‌ ಬಿ. ಕೋಟ್ಯಾನ್‌, ಗಂಗಾಧರ ಆಳ್ವ ದಂಪತಿ ,ರಾಜೇಂದ್ರ ಮೆಂಡ ದಂಪತಿಯನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಂಘದ ವತಿಯಿಂದ ಸಮ್ಮಾನಿಸಲಾಯಿತು.

Advertisement

ಸಮ್ಮಾನಕ್ಕುತ್ತರಿಸಿದ  ಈಶ್ವರ್‌ ಭಟ್‌ ಇವರು, ನನ್ನನ್ನು ಗುರುತಿಸಿ ಸಮ್ಮಾನಿಸಿದ ಸಂಘಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಇಂದಿನ ಮಕ್ಕಳು ಸಂಸ್ಕಾರ ಹೀನರಾಗುತ್ತಿರುವುದು ದುರದೃಷ್ಟಕರವಾಗಿದೆ. ಮಕ್ಕಳನ್ನು ವಿದ್ಯೆಯೊಂದಿಗೆ ಸಂಸ್ಕಾರವನ್ನೂ ಕಲಿಸಬೇಕು. ತಮ್ಮ ವೃದ್ಧ ಮಾತಾಪಿತರನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಕೊನೆತನಕ ಗೌರವದಿಂದ ನೋಡುವಂತಾಗಬೇಕು ಎಂದರು.

ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಅತಿಥಿ-ಗಣ್ಯರನ್ನು ಸಂಘದ ಪದಾಧಿಕಾರಿಗಳು ಸತ್ಕರಿಸಿದರು. ಕ್ರೀಡಾ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. 

ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು.  ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಕುಕ್ಕುಂದೂರು ನಿರೂಪಿಸಿ ವಂದಿಸಿದರು.  ಸಾಂಸ್ಕೃತಿಕ ಕಾರ್ಯಕ್ರಮವಾಗಿ ತೃಪ್ತಿ ಸುಧಾಕರ್‌ ಶೆಟ್ಟಿ ಇವರ  ನೇತೃತ್ವದಲ್ಲಿ ಸದಸ್ಯರಿಂದ ವಿವಿಧ ನೃತ್ಯ ವೈವಿಧ್ಯಗಳು, ಕಿರು ಪ್ರಹಸನಗಳು ನಡೆಯಿತು.

ಅಲ್ಲದೆ ಶ್ರೀ ಲಲಿತೆ ಕಲಾವಿದರು ಮಂಗಳೂರು ಲಯನ್‌ ಕಿಶೋರ್‌ ಡಿ. ಶೆಟ್ಟಿ ಮತ್ತು ತಂಡದವರಿಂದ ಕದ್ರಿ ನವನೀತ ಶೆಟ್ಟಿ ರಚಿಸಿದ ಭಕ್ತಿಪ್ರಧಾನ ತುಳು ನಾಟಕ ಶ್ರೀ  ಕುಕ್ಕೆದ ಸ್ವಾಮಿ ಸುಬ್ರಹ್ಮಣ್ಯ ನಾಟಕ ಪ್ರದರ್ಶನಗೊಂಡಿತು. 

ಸಂಘದ ಪದಾಧಿಕಾರಿಗಳಾದ  ರಾಮಕೃಷ್ಣ ಜಿ. ಶೆಟ್ಟಿಗಾರ್‌, ಕೋಶಾಧಿಕಾರಿ ಸುಧಾಕರ ವೈ. ಶೆಟ್ಟಿ, ಶಾಂತಾರಾಮ ಪಿ. ಶೆಟ್ಟಿ, ಸಲಹಾ ಸಮಿತಿಯ ಸೂರಜ್‌ ಸುವರ್ಣ, ಜಗನ್ನಾಥ ಶೆಟ್ಟಿ,  ಸಮಿತಿ ಸದಸ್ಯರಾದ ಮಾಧವ ಜಿ. ಸುವರ್ಣ, ರವಿ ಜಿ. ಸುವರ್ಣ, ಪ್ರಕಾಶ್‌ ಆರ್‌. ಶೆಟ್ಟಿ, ಶ್ರೀನಿವಾಸ ಆರ್‌. ಶೆಟ್ಟಿ, ವಾಸು ಬಿ. ಪೂಜಾರಿ, ಅಶೋಕ್‌ ಎಸ್‌. ಪೂಜಾರಿ, ಸಂಜಯ್‌ ಕೆ. ಶೆಟ್ಟಿ, ಆದರ್ಶ್‌ ಎಂ. ಸುವರ್ಣ ಮತ್ತು ಪುಷ್ಪರಾಜ್‌ ಶೆಟ್ಟಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. 
ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ತುಳು-ಕನ್ನಡಿಗರು ಉಪಸ್ಥಿತರಿದ್ದರು.

ರಸಾಯನಿಯ ಈ ಸಂಸ್ಥೆಯು ನಿಸ್ವಾರ್ಥ ಸಾಂಸ್ಕೃತಿಕ, ಸಮಾಜಸೇವೆಯೊಂದಿಗೆ ಹತ್ತು ವರ್ಷಗಳನ್ನು ಪೂರೈಸಿ  ದಶಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಅಭಿಮಾನವೆನಿಸುತ್ತಿದೆ. ಪರಿಸರದ ಮಕ್ಕಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯವಾಗಿದೆ. ಭವಿಷ್ಯದಲ್ಲಿ ಎಲ್ಲರನ್ನೂ ಜತೆಯಾಗಿ ಸೇರಿಸಿಕೊಂಡು ಆಧುನಿಕತೆಯ ಜತೆಗೆ ಮೂಲ ಸಂಸ್ಕೃತಿ, ಕಲಾಪ್ರಕಾರಗಳನ್ನು ಪೋಷಿಸುವ ಕಾರ್ಯ ನಿರಂತರ ನಡೆಯುತ್ತಿರಲಿ 
– ಕಿರಣ್‌ ಬಿ ರೈ ಕರ್ನೂರು (ಪತ್ರಕರ್ತ  ಪುಣೆ).

ಕಷ್ಟದ ಜನರಿಗೆ ಮಾನವೀಯ ಸ್ಪಂದನೆ ಸಂಘ ಸಂಸ್ಥೆಗಳ ಉದ್ದೇಶವಾಗಿದ್ದು ಈ ಸಂಸ್ಥೆ ಅದನ್ನು ಈಡೇರಿಸುವ ಕಾರ್ಯ ಮಾಡುತ್ತಿದೆ. ದಶಮಾನೋತ್ಸವದ ಇಂದಿನ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸಿದ ಕೀರ್ತಿ ಸಂಘ¨ªಾಗಿದೆ 
– ವಿ. ಕೆ. ಪೂಜಾರಿ (ಉಪಾಧ್ಯಕ್ಷರು :  ಬಿಲ್ಲವ ಅಸೋಸಿಯೇಶನ್‌ ನವಿಮುಂಬಯಿ ಸಮಿತಿ).

ಈ ಸಂಸ್ಥೆಯನ್ನು ಕಟ್ಟಲು ಶ್ರಮಿಸಿ ಅಗಲಿದ ದಿವಂಗತ ಅಶೋಕ್‌ ಶೆಟ್ಟಿಯವರನ್ನು ನೆನಪಿಸುವ ಕಾರ್ಯ ಇಲ್ಲಿ ಮಾಡಿರುವುದು ಸ್ತುತ್ಯರ್ಹವಾಗಿದೆ. ಪರಿಸರದಲ್ಲಿರುವ ತುಳುನಾಡ ಜನರನ್ನು ಸಾಂಸ್ಕೃತಿಕವಾಗಿ ಬೆಸೆದು ಸ್ಮರಣೀಯ ಕಾರ್ಯಕ್ರಮವನ್ನು ಆಯೋಜಿಸಿದ ಈ ಸಂಸ್ಥೆ ಭವಿಷ್ಯದಲ್ಲಿ ಇನ್ನಷ್ಟು ಪ್ರಗತಿಪಥದಲ್ಲಿ ಮುಂದುವರಿಯಲಿ 
– ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ (ಅಧ್ಯಕ್ಷರು : ಶನೀಶ್ವರ ಮಂದಿರ ನೆರೂಲ್‌).

ಈ ಸಂಸ್ಥೆಯ ಬೆಳವಣಿಗೆಯನ್ನು ಕಳೆದ ಹತ್ತು ವರ್ಷಗಳಿಂದ ಗಮನಿಸುತ್ತಾ ಬಂದಿದ್ದು ವರ್ಷದಿಂದ ವರ್ಷಕ್ಕೆ ಅಭಿಮಾನದೊಂದಿಗೆ ಸೇರುವ ಜನರ ಸಂಖ್ಯೆ ಹೆಚ್ಚಾಗಿದೆ. ಕಲೆಗೆ ಹೆಚ್ಚು ಒಟ್ಟು ನೀಡುವ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯವಾಗಿದೆ 
– ಕಲಾಸಾರಥಿ ಕರ್ನೂರು ಮೋಹನ್‌ ರೈ (ಕಲಾಸಂಘಟಕ).

ರಸಾಯನಿಯ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ತುಳುನಾಡಿನ ಸಂಭ್ರಮವನ್ನು ಕಾಣುವಂತಾಗಿದೆ. ನಾವು ಎÇÉೇ ಹೋದರೂ ನಮ್ಮ ತುಳು ಭಾಷೆಯನ್ನು ಅಭಿಮಾನದಿಂದ ಮಾತನಾಡಬೇಕು. ಅಂಬರ್‌ ಕ್ಯಾಟರರ್ಸ್‌ ಉತ್ತಮ ತುಳು ಚಿತ್ರವಾಗಿದ್ದು ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು 
– ಸೌರಭ್‌ ಭಂಡಾರಿ (ತುಳು ಚಲನಚಿತ್ರ ನಟ).

Advertisement

Udayavani is now on Telegram. Click here to join our channel and stay updated with the latest news.

Next