Advertisement

ಪಂಜರದಲ್ಲೇ ಮೃತಪಟ್ಟ ಅಪರೂಪದ ಆಮೆ ಮರಿಗಳು

08:05 PM Apr 17, 2021 | Team Udayavani |

ಹೊನ್ನಾವರ: ಫೆಸಿಪಿಕ್‌ ರಿಟ್ಲೇ ಎಂಬ ವಿರಳ ಜಾತಿಯ ಆಮೆಗಳು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.

Advertisement

ರಕ್ಷಕರೇ ಶಿಕ್ಷಿಸಿದರು. ಫೆಸಿಪಿಕ್‌ ರಿಟ್ಲೇ ಎಂಬ ವಿರಳ ಜಾತಿಯ ಆಮೆಗಳು ಉತ್ತರ ಕನ್ನಡದ ಕರಾವಳಿ ತೀರದಲ್ಲಿ ಈ ಕಾಲದಲ್ಲಿ ಮೊಟ್ಟೆ ಇಡುತ್ತವೆ. ಇದು ಗಿಡಗ, ಹದ್ದುಗಳ, ಮನುಷ್ಯರ ಪಾಲಾಗದಂತೆ ಅರಣ್ಯ ಇಲಾಖೆ ಮೊಟ್ಟೆ ಇಡುವ ಸ್ಥಳ ಗುರುತಿಸಿ ಬಲೆಯ ಪಂಜರ ನಿರ್ಮಿಸಿ ಕಾಯುತ್ತವೆ.

ಈ ಬಾರಿ ಮೊಟ್ಟೆ ಗುರುತಿಸಿ ಪಂಜರ ಕಟ್ಟಿದವರು ಮತ್ತೆ ಅತ್ತ ಸುಳಿಯಲೇ ಇಲ್ಲ. ಇದರಿಂದಾಗಿ ನೂರಾರು ಮೊಟ್ಟೆಗಳು ಮರಿಯಾಗಿ ಕಡಲು ಸೇರಲು ಸಾಧ್ಯವಿಲ್ಲದಂತಾಗಿ ಪಂಜರದಲ್ಲೇ ಮೃತಪಟ್ಟಿವೆ. ಊರ ಜನ ಇದನ್ನು ಕಂಡು ಉಳಿದ ನಾಲ್ಕಾರು ಮರಿಯನ್ನು ನೀರಿಗೆ ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next