Advertisement

ರವಿವರ್ಮನ ತಿಲೋತ್ತಮೆ ಕಲಾಕೃತಿ ಹರಾಜಿಗೆ

03:46 PM Feb 20, 2018 | Sharanya Alva |

ನ್ಯೂಯಾರ್ಕ್‌: ಭಾರತೀಯ ಚಿತ್ರಕಲಾ ಪರಂಪರೆಯ ಅನಭಿಷಕ್ತ ದೊರೆಯಾಗಿರುವ ರಾಜಾ ರವಿವರ್ಮ ರಚಿಸಿರುವ “ತಿಲೋತ್ತಮೆ’, ಆಧುನಿಕ ವರ್ಣಚಿತ್ರಕಾರ ಎಂ.ಎಫ್. ಹುಸೇನ್‌ ಅವರ “ನಾಯಿಕಾ’ ಹಾಗೂ ಎಸ್‌.ಎಚ್‌. ರಾಝಾ “ವಿಲ್ಲೆ ಪ್ರೊವೆನ್‌ಕೇಲ್‌’ ಎಂಬ ಕಲಾಕೃತಿಗಳು ಮಾ. 19ರಂದು ನ್ಯೂಯಾರ್ಕ್‌ನಲ್ಲಿ ಹರಾಜಾಗಾಲಿವೆ.

Advertisement

ಪ್ರಖ್ಯಾತ ಹರಾಜುದಾರ ಸಂಸ್ಥೆಯಾದ ಸೋಥಿ ವತಿಯಿಂದ ಹರಾಜು ನಡೆಯಲಿದೆ.   ಕಳೆದ ವರ್ಷ, ಇದೇ ಮಾದರಿಯ ಹರಾಜಿನಲ್ಲಿ ರವಿವರ್ಮರ “ದಮಯಂತಿ’ ಚಿತ್ರವು 11 ಕೋಟಿ ರೂ.ಗಳಿಗೆ ಹರಾಜಾಗಿತ್ತು. ಇದೀಗ, ತಿಲೋತ್ತಮೆಗೆ ಕನಿಷ್ಠ 2.50 ಕೋಟಿ ರೂ.ಗಳಿಂದ 3.80 ಕೋಟಿ ರೂ. ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next