Advertisement

ಹಿಮಾಲಯದ ಪಶ್ಚಿಮ ಭಾಗದಲ್ಲಿ ಅಪರೂಪದ ಸಸ್ಯ ಪತ್ತೆ

12:43 AM Jun 26, 2022 | Team Udayavani |

ಡೆಹ್ರಾಡೂನ್‌: ಹಿಮಾಲಯ ಪರ್ವತ ಶ್ರೇಣಿಯೆಂದರೆ ಇಡೀ ವಿಶ್ವಕ್ಕೆ ಒಂದು ವಿಶೇಷ ಆಕರ್ಷಣೆ, ಗೌರವ. ಅದಕ್ಕೆ ಕಾರಣ ಹಲವು. ಇದೀಗ ಹಿಮಾಲಯದ ಪಶ್ಚಿಮ ಭಾಗದಲ್ಲಿ ಮೊದಲ ಬಾರಿಗೆ ಅಪರೂಪದ ಸಸ್ಯವೊಂದು ಪತ್ತೆಯಾಗಿದೆ.

Advertisement

ಅದರ ವೈಜ್ಞಾನಿಕ ಹೆಸರು ಅಟ್ರಿಕುಲೇರಿಯ ಫುರ್ಸೆಲೆಟ್ಟ. ಉತ್ತರಾಖಂಡ ಅರಣ್ಯ ಇಲಾಖೆಯ ಸಂಶೋ ಧನ ತಂಡ ಇದನ್ನು ಪತ್ತೆ ಹಚ್ಚಿದೆ. ಅಲ್ಲಿನ ಚಮೋಲಿ ಜಿಲ್ಲೆಯ ಸುಂದರ ಮಂಡಲ್‌ ಕಣಿವೆಯಲ್ಲಿ ಹೀಗೊಂದು ಸಸ್ಯವಿರುವುದು ಗೊತ್ತಾಗಿದೆ ಎಂದು ಚಮೋಲಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜೀವ್‌ ಚತುರ್ವೇದಿ ಹೇಳಿದ್ದಾರೆ.

ಈ ಸಸ್ಯ ಬರೀ ಉತ್ತರಾಖಂಡ ಮಾತ್ರವಲ್ಲ, ಹಿಮಾಲಯದ ಪಶ್ಚಿಮಭಾಗದಲ್ಲಿ ಎಲ್ಲೂ ಹಿಂದೆ ಕಂಡುಬಂದಿಲ್ಲ. ಈ ವಿಚಾರ ಜಪಾನ್‌ನ 106 ವರ್ಷ ಇತಿಹಾಸವಿರುವ ಜನಪ್ರಿಯ “ಜಪಾನೀಸ್‌ ಬಾಟನಿ’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಈ ಸಸ್ಯ ಬಹಳ ವಿಶೇಷವಾಗಿದೆ. ಇದು ಕ್ರಿಮಿಗಳನ್ನು, ಕೀಟಗಳನ್ನು ಬೇಸ್ತುಬೀಳಿಸಿ, ಅವನ್ನೇ ತಿಂದು ಬದುಕುತ್ತದೆ!

Advertisement

Udayavani is now on Telegram. Click here to join our channel and stay updated with the latest news.

Next