Advertisement

100 years ಅಪರೂಪದ ಅನ್ವೇಷಣೆ!; ಅರ್ಧ ಹೆಣ್ಣು, ಅರ್ಧ ಗಂಡು ಹಕ್ಕಿ ಪತ್ತೆ!!

11:51 PM Jan 04, 2024 | Team Udayavani |

ಕೊಲಂಬಿಯಾ: ಸುಮಾರು 100 ವರ್ಷಗಳಲ್ಲಿ ಮಾಡಲು ಸಾಧ್ಯವಾಗದಿದ್ದ ಆವಿಷ್ಕಾರವನ್ನು ಮಾಡುವಲ್ಲಿ ಸಂಶೋಧಕರ ತಂಡವು ಯಶಸ್ವಿಯಾಗಿದ್ದು, ಅಪರೂಪದ ಅರ್ಧ ಹೆಣ್ಣು ಮತ್ತು ಅರ್ಧ ಗಂಡು ಪಕ್ಷಿಯೊಂದು ಗೋಚರವಾಗಿ ಕೆಮರಾ ಕಣ್ಣುಗಳಲ್ಲಿ ಸೆರೆಯಾಗಿ ಸುದ್ದಿಯಾಗಿದೆ.

Advertisement

ಒಟಾಗೋ ವಿವಿಯ ಪ್ರಾಣಿಶಾಸ್ತ್ರಜ್ಞ ಪ್ರೊಫೆಸರ್ ಹಮಿಶ್ ಸ್ಪೆನ್ಸರ್ ಅವರು ಕೊಲಂಬಿಯಾದಲ್ಲಿ  ಅಪರೂಪದ ಪಕ್ಷಿ ಪ್ರಭೇದಗಳನ್ನು ಪತ್ತೆ ಮಾಡಿದ್ದು, ಹವ್ಯಾಸಿ ಪಕ್ಷಿಶಾಸ್ತ್ರಜ್ಞ ಜಾನ್ ಮುರಿಲ್ಲೊ ಅವರು  ಎರಡು ಲಿಂಗ ಮಿಶ್ರಣದ ಹನಿಕ್ರೀಪರ್ ಅನ್ನು ಕಂಡು ವಿಸ್ಮಿತರಾಗಿದ್ದಾರೆ.

ವಿಚಿತ್ರವೆಂದರೆ ವೈಜ್ಞಾನಿಕವಾಗಿ ‘ಉಭಯಲಿಂಗ ಗುಣಲಕ್ಷಣ’ ಹಕ್ಕಿ ತನ್ನ ದೇಹದಲ್ಲಿ ಗಂಡು ಮತ್ತು ಹೆಣ್ಣು ಗುಣಲಕ್ಷಣಗಳನ್ನು ಪ್ರದರ್ಶಿಸಿದೆ. ಈ ಪಕ್ಷಿಯಲ್ಲಿ, ದೇಹದ ಒಂದು ಭಾಗವು ಗಂಡು ಪುಕ್ಕಗಳು ಮತ್ತು ಸಂತಾನೋತ್ಪತ್ತಿ ಅಂಗಗಳೊಂದಿಗೆ ಕಾಣಿಸಿಕೊಂಡಿದೆ. ಇನ್ನೊಂದು ಬದಿಯಲ್ಲಿ ಸ್ತ್ರೀ ಪುಕ್ಕಗಳು ಮತ್ತು ಸಂತಾನೋತ್ಪತ್ತಿ ಅಂಗಗಳೊಂದಿಗೆ ಕಾಣಿಸಿಕೊಂಡು ಪಕ್ಷಿ ಪ್ರಪಂಚದಲ್ಲಿ ಮತ್ತು ಜೀವ ವಿಜ್ಞಾನ ವಲಯದಲ್ಲಿ ಬೆರಗು ಮೂಡಿಸಿದೆ.

ಅಪರೂಪದ ವೈಶಿಷ್ಟ್ಯ ಹಕ್ಕಿಯ ಆರಂಭಿಕ ಬೆಳವಣಿಗೆಯ ಸಮಯದಲ್ಲಿ ವಂಶವಾಹಿಯ ಅಸಹಜತೆಯ ಕಾರಣದಿಂದಾಗಿರಬಹುದು ಎಂದು ಹೇಳಲಾಗಿದೆ.

Advertisement

“ಅನೇಕ ಪಕ್ಷಿವೀಕ್ಷಕರಿಗೆ ಪೂರ್ಣ ಜೀವನದಲ್ಲಿ ಯಾವುದೇ ಜಾತಿಯ ಪಕ್ಷಿಗಳಲ್ಲಿ ಉಭಯಲಿಂಗ ಗುಣಲಕ್ಷಣ ಕಾಣಸಿಗುವುದಿಲ್ಲ. ಪಕ್ಷಿಗಳಲ್ಲಿ ಈ ವಿದ್ಯಮಾನ ಅತ್ಯಂತ ಅಪರೂಪದ್ದಾಗಿದ್ದು, ನ್ಯೂಜಿಲ್ಯಾಂಡ್ ನಿಂದ ಇಂತಹ ಯಾವುದೇ ಉದಾಹರಣೆಗಳ ಬಗ್ಗೆ ನನಗೆ ತಿಳಿದಿಲ್ಲ. ಇದು ಗಮನಾರ್ಹವಾಗಿದ್ದು, ಅದನ್ನು ನೋಡಲು ನನಗೆ ತುಂಬಾ ಅಚ್ಚರಿ ಎನಿಸಿತು” ಎಂದು ಹಮಿಶ್ ಸ್ಪೆನ್ಸರ್ ಹೇಳಿದ್ದಾರೆ.

ಪಕ್ಷಿಯ ಕುರಿತಾಗಿ ನಡೆದ ಸಂಶೋಧನೆಗಳ ವಿವರಗಳನ್ನು ಜರ್ನಲ್ ಆಫ್ ಫೀಲ್ಡ್ ಆರ್ನಿಥಾಲಜಿಯಲ್ಲಿ ಪ್ರಕಟಿಸಲಾಗಿದ್ದು,ಇದು 100 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ನಡೆಸಿದ ಆವಿಷ್ಕಾರದಲ್ಲಿ ಗೈನಾಂಡ್ರೊಮಾರ್ಫಿಸಂನ(ಉಭಯಲಿಂಗ ಗುಣಲಕ್ಷಣ) ಜಾತಿಗಳ ದಾಖಲೆ ಸೇರಿದ ಎರಡನೇ ಉದಾಹರಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next