ಪಣಜಿ: ಗೋವಾದಲ್ಲಿ ಒಂದೇ ಕುಟುಂಬದ ಇಬ್ಬರು ಸದಸ್ಯರಿಗೆ ಬಿಷಪ್ ಸ್ಥಾನ ಕ್ಕೇರುವ ಅವಕಾಶ ಸಿಕ್ಕಿದ್ದು, ಇಡೀ ಕುಟುಂಬ ಸಂಭ್ರಮಾಚರಣೆಯಲ್ಲಿ ತೊಡಗಿದೆ.
Advertisement
“ಇದು ಭಗವಂತ ನೀಡುವ ಅತ್ಯಂತ ಅಪರೂಪದ ಉಡುಗೊರೆ’ ಎಂದು ಕುಟುಂಬ ಸದಸ್ಯರು ಬಣ್ಣಿಸಿದ್ದಾರೆ. ಫಾದರ್ ಥಿಯೋಡರ್ ಮಸ್ಕರೇನಸ್ ಅವರು 2014ರಲ್ಲಿ ರಾಂಚಿಯ ಬಿಷಪ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಈಗ ಅವರ ಸಹೋದರ ಫಾದರ್ ಸೆಬಾಸ್ಟಿಯೋ ಮಸ್ಕರೇನಸ್ ಬರೋಡಾ ಬಿಷಪ್ ಆಗಿ ಫೆಬ್ರವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದು ಗೋವಾಕ್ಕೆ ಸಂದ ಗೌರವ ಎಂದು ಸಿಎಂ ಸಾವಂತ್ ಬಣ್ಣಿಸಿದ್ದಾರೆ.