Advertisement

ಶಬರಿಮಲೆಯಲ್ಲಿ ಭಕ್ತರು ವಿರಳ

02:25 AM Jan 13, 2021 | Team Udayavani |

ಕೊಲ್ಲೂರು/ಉಡುಪಿ: ಮಕರ ಸಂಕ್ರಮಣ ಸಮೀಪಿಸುತ್ತಿ ದ್ದರೂ ಈ ಬಾರಿ ಕೋವಿಡ್ ಕಾರಣ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿ ಧಿ ಯಲ್ಲಿ ಭಕ್ತರ ಸಂಖ್ಯೆ ವಿರಳವಾಗಿದೆ.

Advertisement

ಸಾಮಾನ್ಯವಾಗಿ ಜನವರಿ ಮೊದಲ ವಾರದಿಂದ ಜ. 15ರ ತನಕ ಅಸಂಖ್ಯಾತ ಭಕ್ತರು ಆಗಮಿಸುವ ಕ್ಷೇತ್ರಕ್ಕೆ ಇದೀಗ ಕೇವಲ 1,000ದಷ್ಟು ಭಕ್ತರು ಮಾತ್ರ ಪ್ರತಿದಿನ ಬರುತ್ತಿದ್ದಾರೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಭಕ್ತರಷ್ಟೇ ಕಾಣಿಸುತ್ತಿದ್ದು, ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆಯಲ್ಲಿನ ಲೋಪದಿಂದಾಗಿ ಕರ್ನಾಟಕದ ಭಕ್ತರು ಕ್ಷೇತ್ರ ದರ್ಶನ ದಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಶಬರಿಮಲೆಗೆ ಭೇಟಿ ಅವಕಾಶ ಕ್ಷೀಣವಾದ ಕಾರಣ ಕರಾವಳಿಯಿಂದ ಶಿಬಿರಗಳಲ್ಲಿ ವ್ರತ ನೇಮದಲ್ಲಿದ್ದು ಪೂಜೆ ಸಲ್ಲಿಸುವವರ ಸಂಖ್ಯೆಯೂ ಇಲ್ಲವಾಗಿದೆ. ಈ ಸಮಯದಲ್ಲಿ ಪ್ರತಿ ಊರುಗಳಲ್ಲಿ ಚಪ್ಪರದಲ್ಲಿ, ಭಜನ ಮಂದಿರ, ದೇವಸ್ಥಾನಗಳಲ್ಲಿ ರಾತ್ರಿ ಉಳಿದು ಬೆಳಗ್ಗೆ ಬೇಗ ಸ್ನಾನ ಪೂರೈಸಿ  ದೇವರ ದರ್ಶನ ಮಾಡುವ ಕ್ರಮ ವಿತ್ತು. ಈಗ ಶಿಬಿರಗಳು ಇಲ್ಲ. ಶಬರಿಮಲೆಗೆ ಹೋಗುವಾಗ ಇತರ ಕ್ಷೇತ್ರಗಳಿಗೂ ಹೋಗುತ್ತಿದ್ದರು. ಆದರೆ ಈ ಬಾರಿ ಅದೂ ಇಲ್ಲವಾಗಿದೆ.

ಕೊರೊನಾ ಕಾರಣ ಮತ್ತು ಕೇರಳದ ಕಮ್ಯುನಿಸ್ಟ್‌ ಸರಕಾರದ ನೀತಿಯ ಕಾರಣ “ಈ ವರ್ಷ ಯಾರೂ ಮಾಲೆ ಹಾಕುವುದು ಬೇಡ. ಮನೆಗಳಲ್ಲಿಯೇ ಪೂಜೆ ಮಾಡಿ ಎಂದು ಕರೆ ಕೊಟ್ಟಂತೆ, ಎಲ್ಲರೂ ಪಾಲನೆ ಮಾಡಿದ್ದಾರೆ’ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಉಡುಪಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ತಿಳಿಸಿದ್ದಾರೆ.

ಕರಾವಳಿಯ ದೇಗುಲಗಳಲ್ಲಿವಿಶೇಷ ಪೂಜೆ :

Advertisement

ಮಂಗಳೂರು: ಶಬರಿಗಿರಿ ಭೇಟಿ ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ  ಜ. 14ರ ಮಕರ ಸಂಕ್ರಾಂತಿಯಂದು ಕರಾವಳಿಯ ವಿವಿಧ ದೇವಸ್ಥಾನಗಳಲ್ಲಿ ಅಯ್ಯಪ್ಪ ಭಕ್ತರಿಂದ ವಿಶೇಷ ಪೂಜೆ ಆಯೋಜನೆಗೊಂಡಿದೆ.

ಅಯ್ಯಪ್ಪ ದೇವಾಲಯಗಳಲ್ಲಿ ಅಂದು ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಅಯ್ಯಪ್ಪ ನಾಮಸ್ಮರಣೆ ನಡೆಯಲಿದೆ. ಈ ಹಿಂದೆ ಮಾಲಾಧಾರಿಗಳಾಗಿದ್ದವರು ಪಾಲ್ಗೊಳ್ಳಲಿದ್ದಾರೆ. ಸೀಮಿತ ಭಕ್ತರ ಉಪಸ್ಥಿತಿಯಲ್ಲಿ ಮಧ್ಯಾಹ್ನ ದೇವರಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ಕೂಡ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next